ಮಧ್ಯರಾತ್ರಿ ಪತ್ನಿ ಫೋಟೋ ಕ್ಲಿಕ್ಕಿಸಿದ ರಣಬೀರ್ ಕಪೂರ್; ಅಲಿಯಾ ಭಟ್ ಹೇಳಿದ್ದೇನು?
ಮಧ್ಯರಾತ್ರಿ ಪತ್ನಿಯ ಫೋಟೋ ಕ್ಲಿಕ್ಕಿಸಿದ ನಟ ರಣಬೀರ್ ಕಪೂರ್‌ಗೆ ಬಾಲಿವುಡ್ ನಟಿ ಅಲಿಯಾ ಭಟ್ ಧನ್ಯವಾದ ತಿಳಿಸಿದ್ದಾರೆ.
ಬಾಲಿವುಡ್ ಕ್ಯೂಟ್ ಅಂಡ್ ಸ್ಟಾರ್ ಕಪಲ್‌ಗಳಲ್ಲಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೋಡಿ ಕೂಡ ಒಂದು. ಮದುವೆಯಾಗಿ ವರ್ಷದೊಳಗೆ ತಂದೆ-ತಾಯಿ ಆಗಿರುವ ಅಲಿಯಾ-ರಣಬೀರ್ ಸದ್ಯ ಮುದ್ದಾದ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಅಲಿಯಾ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲಿಯಾ ಇತ್ತೀಚಿಗಷ್ಟೆ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜೀ ಸಿನಿ ಅವಾರ್ಡ್ಸ್ 2023ರಲ್ಲಿ ಅಲಿಯಾ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು. ಪ್ರಶಸ್ತಿ ಜೊತೆ ಅಲಿಯಾ ಪೋಸ್ ನೀಡುವುದನ್ನು ಮರೆತಿಲ್ಲ.
ಪ್ರಶಸ್ತಿ ಗೆದ್ದು ಬೀಗಿದ ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಹರಿಸು ಬಣ್ಣದ ಡ್ರೆಸ್ ನಲ್ಲಿ ಅಲಿಯಾ ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದರು. ಅಲಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಗುವಾದ ಬಳಿಕವೂ ಅದೇ ಫಿಟ್ನೆಸ್ ಕಾಪಾಡಿಕೊಂಡಿರುವ ಅಲಿಯಾ ಸುಂದರ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಅಲಿಯಾ ಪ್ರಶಸ್ತಿ ಜೊತೆ ಸುಂದರ ಫೋಟೋ ಶೇರ್ ಮಾಡಿದ್ದಾರೆ.
ಅಂದಹಾಗೆ ಅಲಿಯಾ ಶೇರ್ ಮಾಡಿರುವ ಫೋಟೋ ಕ್ಲಿಕ್ಕಿಸಿದ್ದು ಪತಿ ರಣಬೀರ್ ಕಪೂರ್. ಮಧ್ಯರಾತ್ರಿ 2 ಗಂಟೆಗೆ ಫೋಟೋ ಕ್ಲಿಕ್ಕಿಸಿದ್ದಾರೆ ರಣಬೀರ್. ತಾಳ್ಮೆಯಿಂದ ರಾತ್ರಿ ಫೋಟೋ ಕ್ಲಿಕ್ಕಿಸಿದ ಪತಿಗೆ ಅಲಿಯಾ ಧನ್ಯವಾದ ತಿಳಿಸಿದ್ದಾರೆ. ಫೋಟೋದಲ್ಲಿ ಅಲಿಯಾ ಪ್ರಶಸ್ತಿ ಹಿಡಿದು ನಗುಬೀರಿದ್ದಾರೆ. ಸುಂದರ ಫೋಟೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 'ತಾಳ್ಮೆಯಿಂದ ರಾತ್ರಿ 2 ಗಂಟೆಗೆ ಫೋಟೋ ಕ್ಲಿಕ್ಕಿಸಿದ್ದಕ್ಕೆ ಧನ್ಯವಾದಗಳು' ಎಂದು ಪತಿ ರಣಬೀರ್‌ಗೆ ಹೇಳಿದ್ದಾರೆ.
ಆಲಿಯಾ ಭಟ್ ಅವರ ಐಷಾರಾಮಿ ವಾಕ್-ಇನ್ ಕ್ಲೋಸೆಟ್; ಎಷ್ಷು ಶೂಗಳಿವೆ ನೋಡಿ
ಇನ್ನು ಪ್ರಶಸ್ತಿ ಗೆದ್ದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಗಂಗು ಪ್ರೀತಿ, ಗೌರವಕ್ಕಾಗಿ ಜೀ ಸಿನಿ ಪ್ರಶಸ್ತಿಗೆ ಧನ್ಯವಾದಗಳು. ಸಂಜಯ್ ಲೀಲಾ ಬನ್ಸಾಲಿ ಸರ್ ನಿಮಗೆ ಎಷ್ಟು ಕೃತಜ್ಞನಾಗಿದ್ದೇನೆ ಎಂದು ಹೇಳಲು ಯಾವುದೇ ಪದಗಳು ಸಾಕಾಗುವುದಿಲ್ಲ. ವಿಶೇಷವಾಗಿ ತಾಳೆಯಿಂದ ರಾತ್ರಿ 2 ಗಂಟೆಗೆ ನನ್ನ ಫೋಟೋ ಕ್ಲಿಕ್ಕಿಸಿದ ತನ್ನ ಪತಿಗೆ ಧನ್ಯವಾದ' ಎಂದು ಹೇಳಿದ್ದಾರೆ.
ಅಲಿಯಾ ಇತ್ತೀಚಿಗಷ್ಟೆ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಅವಾರ್ಡ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಬ್ರಹ್ಮಾಸ್ತ್ರ ಚಿತ್ರದ ಅಭಿನಯಕ್ಕೆ ರಣಬೀರ್ ಕಪೂರ್ ಅವರಿಗೂ ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಂಡ-ಹೆಂಡತಿ ಇಬ್ಬರೂ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟಿ ಕಂಗನಾ ರಣಾವತ್ ಕಿಡಿ ಕಾರಿದ್ದರು. ನೆಪೋ ಪ್ರಶಸ್ತಿ ಆಗಿದೆ ಎಂದು ಹೇಳಿದ್ದರು. ಆದರೆ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಅಲಿಯಾ ತನ್ನ ಸಿನಿ ಜೀವನವನ್ನು ಎಂಜಾಯ್ ಮಾಡುತ್ತಾ ಉತ್ತಮ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ನೆರೆ ಮನೆಯಿಂದ ಆಲಿಯಾ ಭಟ್ ಖಾಸಗಿ ಫೋಟೋ ಕ್ಲಿಕ್ ಮಾಡಿದ ಮಾಧ್ಯಮ; ತಿರುಗಿ ಬಿದ್ದ ಬಿ-ಟೌನ್ ಮಂದಿ
ಅಲಿಯಾ ಸದ್ಯ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸ್ವಲ್ಪ ಬಾಕಿ ಉಳಿದ್ದು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲು ತಯಾರಿ ನಡೆಸುತ್ತಿದ್ದಾರೆ. ಇನ್ನು ಹಾಲಿವುಡ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ರಣಬೀರ್ ಕಪೂರ್ ಅನಿಮಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.