ನವ ವಿವಾಹಿತ ನಟ ರಾಣಾ ದಗ್ಗುಬಾಟಿ ನಟ ನಾಗಚೈತನ್ಯ ಹಾಗೂ ವೆಂಕಟೇಶ್‌ ಜೊತೆಗಿನ ಮಾಸ್ ಲುಕ್ ಫೋಟೋ ಶೆರ್ ಮಾಡಿಕೊಂಡಿದ್ದಾರೆ. ಫೋಟೋಗಿಂತ ಕ್ಯಾಪ್ಶನ್ ಈಗ ವೈರಲ್ ಆಗಿದೆ.

ಬಾಹುಬಲಿ ನಟ ರಾಣಾ ದಗ್ಗುಬಾಟಿ ಮಾವ ವೆಂಕಟೇಶ್ ದಗ್ಗುಬಾಟಿ ಹಾಗೂ ಕಸಿನ್ ನಾಗಚೈತನ್ಯ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.  ವಿವಾಹದ ಮುಂಚಿನ ಕಾರ್ಯಕ್ರಮಗಳಲ್ಲಿ ಕ್ಲಿಕ್ಕಿಸಿದ ಫೋಟೋ ಇದು.

ರಾಣಾ ಮತ್ತು ಮಿಹಿಕಾಗೆ ಅಮುಲ್ ಕೊಟ್ಟ ಗಿಫ್ಟ್ ಇದು..! ಡೂಡಲ್ ಎಷ್ಟು ಕ್ಯೂಟ್ ನೋಡಿ

ಡ್ಯಶಿಂಗ್ ಫೋಟೋ ಶೇರ್ ಮಾಡಿದ ರಾಣಾ ಸ್ಟೈಲ್, ಸಿಂಪ್ಲಿಸಿಟಿ, ದಿ ವಿಕ್ಟರಿ(ಸ್ಟೈಲ್, ಸರಳತೆ ಮತ್ತು ಗೆಲುವು) ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಡಿಸೆಂಬರ್‌ಗೆ 60ರ ವಸಂತಕ್ಕೆ ಕಾಲಿಡಲಿರುವ ವೆಂಕಟೇಶ್ ದಗ್ಗುಬಾಟಿ ನಿಜಕ್ಕೂ ವಯಸ್ಸಾದಂತೆಯೇ ಗ್ರೇಸ್‌ಫುಲ್ ಆಗಿ ಕಾಣಿಸುತ್ತಿದ್ದಾರೆ.

ವೆಂಕಟೇಶ್ ಹಾಗೂ ನಾಗಚೈತನ್ಯ ಜೊತೆಯಾಗಿ ಕೆಲಸ ಮಾಡುವ ಬಗ್ಗೆ ಪ್ರತಿಕ್ರಿಯಿಸಿ, ಈ ಸಿನಿಮಾ ಬಗ್ಗೆ ಮಾತನಾಡುವ ಮುನ್ನ ನಾಗಚೈತನ್ಯ ಬಗ್ಗೆ ಮಾತನಾಡುತ್ತೇನೆ. ಅವನು ವಯಸ್ಸಿಗೆ ನನಗಿಂತ ಚಿಕ್ಕವನು. ಆದರೆ ನಾನೇನಾದರೂ ಮಾಡಲು ಪ್ರಯತ್ನಿಸುವ ಮುನ್ನವೇ ಅವನೆಲ್ಲವನ್ನೂ ಮಾಡಿ ಮುಗಿಸಿದ್ದಾನೆ ಎಂದಿದ್ದಾರೆ.

ರಾಣಾ ಮದುವೆಗೆ ಪ್ರಭಾಸ್, ಅನುಷ್ಕಾಗಿಲ್ಲ ಆಮಂತ್ರಣ..!

ನನಗಿಂತ ಮೊದಲು ಕಾಲೇಜು ಮುಗಿಸಿದ, ನನಗಿಂತ ಮೊದಲು ಮದುವೆಯಾದ, ಈಗ ನನಗಿಂತ ಮೊದಲೇ ಅಂಕಲ್ ವೆಂಕಟೇಶ್ ಜೊತೆ ಸಿನಿಮಾ ಮಾಡುತ್ತಿದ್ದಾನೆ ಎಂದಿದ್ದಾರೆ. ಆಗಸ್ಟ್ 8ರಂದು ರಾಣಾ ಮಿಹಿಕಾ ಬಜಾಜ್ ಅವರನ್ನು ಮದುವೆಯಾಗಿದ್ದರು. ಮದುವೆಯಲ್ಲಿ ನಾಗಚೈತನ್ಯ, ಸಮಂತಾ, ಅಲ್ಲು ಅರ್ಜುನ್, ರಾಮ್‌ ಚರಣ್ ಭಾಗವಹಿಸಿದ್ದರು.