ಫೇಮಸ್ ಅಮುಲ್ ಕಂಪನಿ ದೇಶಾದ್ಯಂತ ಯಾವುದು ಟ್ರೆಂಡ್ ಆಗುತ್ತದೆಯೋ ಅದರ ಡೂಡಲ್ ಮಾಡುತ್ತಲೇ ಇರುತ್ತದೆ. ವಾರಪೂರ್ತಿ ಟ್ರೆಂಡ್ ಆಗುತ್ತಿರುವ ಸೌತ್ ಸ್ಟಾರ್ ರಾಣಾ-ಮಿಹಿಕಾ ಮದುವೆಗೆ ಮಾಡಿರೋ ಡೂಡಲ್ ನೋಡಿ, ಎಷ್ಟು ಮುದ್ದಾಗಿದೆ..!

ಗಸ್ಟ್ 9ರಂದು ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ವಿವಾಹವಾಗಿದ್ದಾರೆ. ಲಾಕ್‌ಡೌನ್‌ನಲ್ಲಾದ ಮದುವೆ ಫೋಟೋಸ್ ಮಾತ್ರ ಟ್ರೆಂಡ್ ಆಗಿದೆ. ಈ ಮದುವೆಯನ್ನು ಇಂಟರ್‌ನೆಟ್ ಸೆನ್ಸೇಷನ್ ಎಂದಿದೆ ಎಮುಲ್.

ಪತ್ನಿ ಜೊತೆ ರಾಣಾ ದಗ್ಗುಬಾಟಿ ಸತ್ಯನಾರಾಯಣ ಪೂಜೆ..! ಕಾಟನ್ ಪೋಷಾಕಿನಲ್ಲಿ ಫ್ಯಾಮಿಲಿ ಮಿಂಚಿಂಗ್

ಅಮುಲ್ ಬೇಬಿ ನವ ವಧು ವರರಿಗೆ ಮಂಟಪದಲ್ಲಿ  ಬ್ರೆಡ್ ಮತ್ತು ಬಟರ್ ಕೊಡ್ತಿರೋ ಕಾರ್ಟೂನ್ ಸದ್ಯ ವೈರಲ್ ಆಗಿದೆ. ಈ ಬಾರಿ ಮಾಮೂಲು ಫ್ರಾಕ್ ಬಿಟ್ಟು ಅಮುಲ್ ಬೇಬಿಯೂ ಮದುವೆ ಉಡುಪಿನಲ್ಲಿ ಕಂಗೊಳಿಸಿದ್ದಾಳೆ.

ರಾಣಾ ಮದುವೆಯನ್ನು 'ದಿ ದಗ್ಗುಬಟ್ಟರ್ರ್ಲಿ' ಎಂದು ವಿಶೇಷಿಸಿದೆ ಅಮುಲ್ ಕಂಪನಿ. ಶನಿವಾರ ರಾತ್ರಿ ಕುಟುಂಬಸ್ಥರು ಹಾಗು ಆಪ್ತರ ಸಮ್ಮುಖದಲ್ಲಿ ನಡೆದ ವಿವಾಹದಲ್ಲಿ ರಾಣಾ ಮಹಿಕಾ ಸತಿಪತಿಯಾಗಿದ್ದಾರೆ.

ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! ಇಲ್ನೋಡಿ ಫೋಟೋಸ್

ವೆಂಕಟೇಶ್, ಸಮಂತಾ ಅಕ್ಕಿನೇನಿಯಂತಹ ಸೆಲೆಬ್ರಿಟಿ ಫ್ಯಾಮಿಲಿ ಸದಸ್ಯರನ್ನು ಬಿಟ್ಟರೆ ಇನ್ಯೂರು ಮದುವೆಯಲ್ಲಿರಲಿಲ್ಲ. ರಾಣಾನ ಆಪ್ತ ಸ್ನೇಹಿತರು ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಭಾಗಿಯಾಗಿದ್ದರು. ಸೋಮವಾರ ನವದಂಪತಿ ಸತ್ಯನಾರಾಯಣ ಪೂಜೆಯನ್ನೂ ನಡಿಸಿದ್ದು, ಕುಟುಂಬಸ್ಥರೆಲ್ಲ ಪಾರಂಪರಿಕ ನೇಯ್ಗೆ ಉಡುಪಿನಲ್ಲಿ ಮಿಂಚಿದ್ದಾರೆ.