ಬಾಹುಬಲಿ, RRRಗೆ ಸಾಧ್ಯವಾಗದ ಸಾಧನೆ 'ಪ್ರಾಜೆಕ್ಟ್ ಕೆ' ಮಾಡಲಿದೆ: ಪ್ರಭಾಸ್ ಸಿನಿಮಾ ಮೇಲೆ ರಾಣಾಗೆ ಭಾರಿ ನಿರೀಕ್ಷೆ
ಬಾಹುಬಲಿ, RRRಗೆ ಸಾಧ್ಯವಾಗದ ಸಾಧನೆ 'ಪ್ರಾಜೆಕ್ಟ್ ಕೆ' ಮಾಡಲಿದೆ ಎಂದು ನಟ ರಾಣಾ ದಗ್ಗುಬಾಟಿ ಪ್ರಭಾಸ್ ಸಿನಿಮಾ ಮೇಲೆ ಭವಿಷ್ಯ ನುಡಿದಿದ್ದಾರೆ.
ಟಾಲಿವುಡ್ ಸ್ಟಾರ್ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪ್ರಾಜೆಕ್ಟ್ ಕೆ ಟಾಲಿವುಡ್ ಮಾತ್ರವಲ್ಲದೇ ಇಡೀ ಭಾರತ ಎದುರು ನೋಡುತ್ತಿದೆ. ಈ ಸಿನಿಮಾದ ಬಗ್ಗೆ ಈಗ ತೆಲುಗಿನ ಮತ್ತೋರ್ವ ಖ್ಯಾತ ನಟ ರಾಣ ದಗ್ಗುಬಾಟಿ ಮಾತನಾಡಿದ್ದಾರೆ. ಪ್ರಾಜೆಕ್ಟ್ ಕೆ ಸಿನಿಮಾಗಾಗಿ ಇಡೀ ತೆಲುಗು ಸಿನಿಮಾರಂಗ ಎಷ್ಟು ಉತ್ಸುಕರಾಗಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದರು. ಪ್ರಾಜೆಕ್ಟ್ ಆರ್ ಆರ್ ಆರ್, ಬಾಹುಬಲಿ ಸಿನಿಮಾಗಳ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಿದ್ದಾರೆ.
‘ಇಂಡಿಯಾ ಟುಡೇ ಕಾನ್ಕ್ಲೇವ್ ಸೌತ್ 2023’ ವೇದಿಕೆಯಲ್ಲಿ ಮಾತನಾಡಿದ ರಾಣಾ ದಗ್ಗುಬಾಟಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ರಾಣಾ ದಗ್ಗುಬಾಟಿ ಮಾತುಗಳು ‘ಪ್ರಾಜೆಕ್ಟ್ ಕೆ’ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ಸಿನಿಮಾದಲ್ಲಿ ಪ್ರಭಾಸ್- ದೀಪಿಕಾ ಪಡುಕೋಣೆ ಜೊತೆಗೆ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗಿನ ವರದಿ ಪ್ರಕಾರ ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ರಾಣಾ ದಗ್ಗುಬಾಟಿ ಹೇಳಿದ್ದೇನು?
‘ನಾವು ಸಂಪೂರ್ಣವಾಗಿ ಪ್ರತಿಯೊಬ್ಬರ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತೇವೆ. ಪ್ರಾಜೆಕ್ಟ್ ಕೆ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಆರ್ಆರ್ಆರ್ ಮತ್ತು ಬಾಹುಬಲಿ ಸಿನಿಮಾಗಳು ಮೀರಲು ಸಾಧ್ಯವಾಗದಂತಹ ಗಡಿಗಳನ್ನು ಪ್ರಾಜೆಕ್ಟ್ ಕೆ ಚಿತ್ರ ಮೀರಲಿದೆ. ಅದು ಜಾಗತಿಕ ಮಟ್ಟದಲ್ಲಿ ಹಿಟ್ ಆಗಲಿದೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.
ಟಾಲಿವುಡ್ ಸ್ಟಾರ್ ಪ್ರಭಾಸ್‌ಗೆ ವಿಲನ್ ಆದ 'ವಿಕ್ರಮ್' ಹೀರೋ ಕಮಲ್ ಹಾಸನ್
ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ವೈಜಯಂತಿ ಮೂವೀಸ್’ ನಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾ ಸಿದ್ಧವಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆ ರಾಣಾ ಮತ್ತು ಪ್ರಭಾಸ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರೂ ಬ್ಲಾಕ್ ಬಸ್ಟರ್ ಬಾಹುಬಲಿ ಸಿನಿಮಾದಲ್ಲಿ ಒಟ್ಟೆಗೆ ನಟಿಸಿದ್ದರು. ರಾಣಾ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಪ್ರಭಾಸ್ ಅವರ ಪ್ರಾಜೆಕ್ಟ್ ಕೆ ಮೇಲೆ ಭಾರಿ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಪ್ರಭಾಸ್ ಜೊತೆ ನಟಿಸಲು ದೀಪಿಕಾ ಪಡುಕೋಣೆ ಪಡೆದಿದ್ದು ಇಷ್ಟು ಕೋಟಿ ಸಂಭಾವನೆ?!
ಪ್ರಭಾಸ್ ಸದ್ಯ ‘ಸಲಾರ್’, ‘ಆದಿಪುರುಷ್’, ‘ಪ್ರಾಜೆಕ್ಟ್ ಕೆ’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಎಲ್ಲಾ ಸಿನಿಮಾಗಳ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಪ್ರಾಜೆಕ್ಟ ಕೆ ಸೈನ್ಸ್ ಫಿಕ್ಷನ್ ಶೈಲಿಯ ಸಿನಿಮಾ ಆಗಿದೆ. ಅದಕ್ಕೆ ತಕ್ಕಂತೆಯೇ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಇತ್ತೀಚಿಗೆ ಬಿಡುಗಡೆ ಮಾಡಿರುವ ವಿಡಿಯೋ ನೋಡಿದ್ರೆ ಹಾಲಿವುಡ್ ಸಿನಿಮಾಗಳಿಗೂ ಪೈಪೋಟಿ ನೀಡುವಂತಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಚಿತ್ರತಂಡ ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿಸಿದೆ. ಸಿನಿಮಾದ ಅಪ್‌ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.