1995 ರಲ್ಲಿ ರಾಮ್ ಗೋಪಾಲ್ ವರ್ಮಾ ‘ರಂಗೀಲಾ’ ಸಿನಿಮಾದ ಊರ್ಮಿಳಾ ಮಾತೋಂಡ್ಕರ್ ಗ್ಲಾಮರಸ್ ಪೋಸ್ಟರನ್ನು ರಿಲೀಸ್ ಮಾಡಿದಾಗ ಇಡೀ ಉತ್ತರ ಭಾರತವೇ ಸ್ಟನ್ ಆಗಿತ್ತು. ಇದು ಹಾಲಿವುಡ್ ಗೂ  ರಿಮೇಕ್ ಆಯ್ತು. ರಾಮ್ ಗೋಪಾಲ್ ವರ್ಮಾ ಅಂದ್ರೆ ಹಾಗೇನೇ. ಗ್ಲಾಮರಸ್ ಆಗಿ  ತೋರಿಸುವುದರಲ್ಲಿ ನಿಸ್ಸೀಮರು. 

ಇದೀಗ ‘ಬ್ಯೂಟಿಫುಲ್’ ಎನ್ನುವ ಸಿನಿಮಾವನ್ನು ಮಾಡುತ್ತಿದ್ದು ಈ ಚಿತ್ರದ ಫಸ್ಟ್ ಲುಕ್ ನಾಳೆ ಅಂದರೆ ಅಕ್ಟೋಬರ್ 9 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಪೋಸ್ಟರ್ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿದೆ. ಪೋಸ್ಟರ್ ಹಾಟ್ ಆಗಿದ್ದು ವೈರಲ್ ಅಗಿದೆ. 

ಬ್ಯೂಟಿಫುಲ್ ಸಿನಿಮಾದಲ್ಲಿ ನೈನಾ ಗಂಗೂಲಿ, ಪಾರ್ಥ ಸೂರಿ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಇಂಟಿಮಸಿ ಫೋಟೊದಲ್ಲಿ ನೋಡಬಹುದಾಗಿದೆ.  ಈ ಪೋಸ್ಟರ್ ನಲ್ಲಿ ರಾಮ್ ಗೋಪಾಲ್ ವರ್ಮಾ ಡ್ರೀಮ್ ಎಂದು ಬರೆದುಕೊಂಡಿದ್ದಾರೆ.