Asianet Suvarna News Asianet Suvarna News

ಡೇಂಜರಸ್ ಬ್ಯೂಟಿಯ ಪಾದ ಹಿಡಿದು ಕುಳಿತ ರಾಮ್ ಗೋಪಾಲ್ ವರ್ಮಾ; ಫೋಟೋ ವೈರಲ್

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಯ ಪಾದ ಹಿಡಿದು ಕುಳಿತಿರುವ ಫೋಟೋ ವೈರಲ್ ಆಗಿದೆ.

Ram Gopal Varma at The Feet Of Dangerous Beauty photo virla sgk
Author
First Published Dec 7, 2022, 11:58 AM IST

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಹೊಂದಿರುವ ರಾಮ್ ಗೋಪಾಲ್ ವರ್ಮಾ ತೆಲುಗು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಫೇಮಸ್. ತೆಲುಗು ಜೊತೆಗೆ ಕನ್ನಡ ಮತ್ತು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿ  ಪ್ರೇಕ್ಷಕರ ಹೃದಯ ಗೆದ್ದಿರುವ ರಾಮ್ ಗೋಪಾಲ್ ವರ್ಮಾ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದರಲ್ಲೂ ತನ್ನದೇ ಯೂಟ್ಯೂಬ್ ಮಾಹಿನಿ ಮೂಲಕ ಅಡಲ್ಟ್ ಸಿನಿಮಾಗಳನ್ನು ರಿಲೀಸ್ ಮಾಡುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.  ಸದಾ ನಾಯಕಿಯರ ಮಧ್ಯೆಯೇ ಕಾಣಿಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಇತ್ತೀಚಿಗಷ್ಟೆ ನಟಿ ಇನಾಯಾ ಸುಲ್ತಾನ್‌ ಜೊತೆ ಪಾರ್ಟಿಯಲ್ಲಿ ಕುಣಿದ ವಿಡಿಯೋ ಶೇರ್ ಮಾಡಿ ನೆಟ್ಟಿಗರು ಹುಬ್ಬೇರಿಸಿದ್ದರು. ಇದೀಗ ರಾಮ್ ಗೋಪಾಲ್ ವರ್ಮಾ ಶೇರ್ ಮಾಡಿರುವ ಮಾಡಿರುವ ಫೋಟೋಗಳು ಅಭಿಮಾನಿಗಳಿಗೆ ಶಾಕ್ ನೀಡಿದೆ. 

ನಟಿಯ ಪಾದ ಹಿಡಿದು ಕುಳಿತಿರುವ ಫೋಟೋವನ್ನು ರಾಮ್ ಗೋಪಾಲ್ ವರ್ಮಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಕಾಲು ಬುಡದಲ್ಲಿ ಕುಳಿತು ಆಕೆಯ ಪಾದ ಹಿಡಿದು ಗುರಾಸಿಯಿ ನೋಡುತ್ತಿರುವ ಫೋಟೋವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಹಾಗೆ ರಾಮ್ ಗೋಪಾಲ್ ವರ್ಮಾ ಪಾದ ಹಿಡಿದು ಕುಳಿತಿರುವ ನಟಿ ಮತ್ಯಾರು ಅಲ್ಲ ಬಿಗ್ ಬಾಸ್ ಖ್ಯಾತಿಯ ಅಶು ರೆಡ್ಡಿ. 

ಅಂದಹಾಗೆ ಈ ಹಿಂದೆ ರಾಮ್ ಗೋಪಾಲ್ ವರ್ಮಾ, ಅಶು ರೆಡ್ಡಿ ಅವರ ಸಂದರ್ಶನದಲ್ಲಿ ಭಾಗಿಯಾಗಿದ್ದರು. ವಿಚಿತ್ರವಾಗಿ ಸಂದರ್ಶನ ಮಾಡಿದ್ದ ರಾಮ್ ಗೋಪಾಲ್ ವರ್ಮಾ ವಿಡಿಯೋ ವೈರ್ಲ ಆಗಿತ್ತು. ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೊಂದು ಸಂದರ್ಶನದ ಮೂಲಕ ಬಂದಿದ್ದಾರೆ. ಸಂದರ್ಶನ ವೇಳೆ ರಾಮ್ ಗೋಪಾಲ್ ವರ್ಮಾ ನಟಿ ಅಸು ರೆಡ್ಡಿ ಜೊತೆ ವಿಚಿತ್ರವಾಗಿ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದ್ದು ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿವೆ. 

ವೈರಲ್ ಆಯ್ತು RGV - ಇನಾಯಾ ಖಾಸಗಿ ವಿಡಿಯೋ; ಕುಟುಂಬವೇ ದೂರ ಮಾಡುವಂತದ್ದು ಏನಿತ್ತು?

ಅಂದಹಾಗೆ ಫೋಟೋ ಶೇರ್ ಮಾಡಿ ಆರ್ ಜಿ ವಿ, ಅಶು ರೆಡ್ಡಿ ಡಬಲ್ ಡೇಂಜರಸ್ ಎಂದು ಹೇಳಿದ್ದಾರೆ. ನಟಿ ಅಶು ರೆಡ್ಡಿ ಮಂಚದ ಮೇಲೆ ಕುಳಿತಿದ್ದಾರೆ. ರಾಮ್ ಗೋಪಾಲ್ ವರ್ಮಾ ಆಕೆಯ ಪಾದದ ಬಳಿ ಕುಳಿತಿರುವ ಫೋಟೋ ಹಂಚಿಕೊಂಡು, 'ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್' ಎಂದು ಹೇಳಿದ್ದಾರೆ. ಸಂದರ್ಶನ ವೇಳೆ ಆರ್ ಜಿ ವಿ ನಟಿಯ ಕಾಲು ಒತ್ತುತ್ತಿದ್ದಾರೆ. ಪೋಟೋಗಳನ್ನು ಶೇರ್ ಮಾಡಿದ ಬಳಿಕ ರಾಮ್ ಗೋಪಾಲ್ ವರ್ಮಾ ವಿಡಿಯೋವನ್ನು ಶೇರ್ ಮಾಡಿದರು.

ಬಿಗ್ ಬಜೆಟ್ ಚಿತ್ರಕ್ಕೆ ಮಾತ್ರ ಜನ ಬರ್ತಾರೆ ಎನ್ನುವುದನ್ನು ಸುಳ್ಳಾಗಿಸಿದ ರಿಷಬ್; ಕಾಂತಾರ ನೋಡಿ RGV ಸರಣಿ ಟ್ವೀಟ್

ರಾಮ್ ಗೋಪಾಲ್ ವರ್ಮಾ ನಟಿಯರ ಜೊತೆ ತೀರ ಆಪ್ತವಾಗಿರುವ ಪೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ನಟಿ ಇನಾಯ ಸುಲ್ತಾನ್ ಜೊತೆ ಪಾರ್ಟಿ ವಿಡಿಯೋ ಶೇರ್ ಮಾಡಿದ್ದರು. ಇನಯಾ ಜೊತೆ ತೀರಾ ಆಪ್ತವಾಗಿ ನಡೆದು ಕೊಂಡಿದ್ದ ಡಾನ್ಸ್ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಶೇರ್ ಮಾಡಿ ಈ ವಿಡಿಯೋದಲ್ಲಿ ಇರೋದು ನಾನು ಅಲ್ಲ ಮತ್ತು ಇನಿಯಾ ಸುಲ್ತಾನ್ ಕೂಡ ಅಲ್ಲ ಎಂದು ಕ್ಯಾಪ್ಷನ್ ನೀಡಿದ್ದರು. ಇದೀಗ ಮತ್ತೊಂದು ಫೋಟೋ ಮೂಲಕ ಸದ್ದು ಮಾಡುತ್ತಿದ್ದಾರೆ. 

Follow Us:
Download App:
  • android
  • ios