ಬರಿಗಾಲಲ್ಲಿ ನಡೆದು ದೀಕ್ಷೆ ಮುಗಿಸಿದ ಸೂಪರ್​ಸ್ಟಾರ್​ ರಾಮ್​ ಚರಣ್​: ಮುಗಿಬಿದ್ದ ಫ್ಯಾನ್ಸ್​

ನಟ ರಾಜ್​ ಚರಣ್​ ಅವರು ಅಯ್ಯಪ್ಪ ಮಾಲೆ  ಧರಿಸಿರುವ ಹಿನ್ನೆಲೆಯಲ್ಲಿ ಬರಿಗಾಲಿನಲ್ಲಿ ನಡೆದು ಮುಂಬೈನ ದೇವಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. 41 ದಿನಗಳ ವ್ರತವನ್ನು ಪೂರ್ಣಗೊಳಿಸಿದ್ದಾರೆ.
 

Ram Charan visits Siddhivinayak temple asks fans to be careful suc

ನಟ ರಾಮ್ ಚರಣ್ ತೇಜ ಅವರು ಸೂಪರ್​ಸ್ಟಾರ್​ ಅನ್ನುವಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕಿಂತಲೂ ಅವರು ದೊಡ್ಡ ದೈವ ಭಕ್ತ ಭಕ್ತರು. ವ್ರತ ಆಚರಣೆ ಇತ್ಯಾದಿಗಳಲ್ಲಿ ಅಪಾರವಾದ ನಂಬಿಕೆ ಹೊಂದಿದ್ದಾರೆ. ಅದರಲ್ಲಿಯೂ ಶಬರಿಮಲೆ ಅಯ್ಯಪ್ಪನ ಕಟ್ಟಾ ಭಕ್ತರು ಅವರು. ಅವರು  ಶಬರಿಮಲೆ ಅಯ್ಯಪ್ಪ ಮಾಲೆ  (Ayyappa Male) ಧರಿಸಿ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಕಾಣಿಸಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಅಯ್ಯಪ್ಪ ಮಾಲೆ  ಧರಿಸಿರುವ ಹಿನ್ನೆಲೆಯಲ್ಲಿ,  ಕಪ್ಪು ಬಣ್ಣದ ಸರಳ ಉಡುಗೆ ತೊಟ್ಟು, ನಿಯಮದಂತೆ ಚಪ್ಪಲಿ ತ್ಯಜಿಸಿ ಬರಿಗಾಲಲ್ಲಿ ಓಡುತ್ತಿದ್ದ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.  ರಾಮ್ ಚರಣ್ ತೇಜ ಹಲವು ದಿನಗಳ ಕಾಲ ಮಾಲಧಾರಿಯಾಗಿದ್ದ ವ್ರತ ಆಚರಿಸಿ ಮಲೆ ಏರಿಹಯೋಗಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಮಾಲಧಾರಣೆ ಮಾಡಿದ್ದ ನಟ ರಾಮ್ ಚರಣ್ ಈಗಲೂ ಮಾಲ ಧಾರಣೆ ಮಾಡಿದ್ದಾರೆ.

ಮಾಲಾಧಾರಿ ಪಾಲಿಸಬೇಕಾದ ಕಠಿಣ ನಿಯಮಗಳು 41 ದಿನಗಳ ವರೆಗೆ ಪಾಲಿಸಿದ್ದರು, ಇದೀಗ ಮಗಳ ಹುಟ್ಟಿದ ಬಳಿಕ ಮಾಲೆ ಧರಿಸಿದ್ದ ರಾಮ್ ಚರಣ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನದ ಬಳಿಕ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. 'ಆರ್‌ಆರ್‌ಆರ್‌' ಸಿನಿಮಾ ಹಿಟ್‌ ಆದ ನಂತರ ಕೂಡಾ ರಾಮ್ ಚರಣ್ 41 ದಿನಗಳ ಕಾಲ ಮಾಲೆ ಧರಿಸಿದ್ದರು. ಆಗ ಅವರು ಅಮೆರಿಕ ಕಾರ್ಯಕ್ರಮದಲ್ಲಿ ಆಸ್ಕರ್‌ ಸ್ವೀಕರಿಸಲು ಬರಿಗಾಲಿನಲ್ಲಿ ಏರ್‌ಪೋರ್ಟ್‌ಗೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು.  ಇಲ್ಲಿಂದ ಅಮೆರಿಕ ತೆರಳಿ ರಾಮ್‌ ಚರಣ್‌ ವ್ರತ ಮುಗಿಸಿದ್ದರು. ಆಗ ಕೂಡಾ ವಿಡಿಯೋ ವೈರಲ್‌ ಆಗಿತ್ತು.  ಮಗಳು ಕ್ಲಿನ್ ಕ್ಲಾರ್ ಜನಿಸಿದ ಬಳಿಕ ಅಯ್ಯಪ್ಪಮಾಲೆ ಧರಿಸಿದ್ದ ರಾಮ್ ನಿನ್ನ ದೀಕ್ಷೆಯನ್ನು ಮುಕ್ತಾಯಗೊಳಿಸಿದ್ದಾರೆ.

ಎಂಟನೇ ಅವತಾರದಲ್ಲಿ ಏಲಿಯನ್​ ರೂಪದಲ್ಲಿ ತೆರೆ ಮೇಲೆ ಶಾರುಖ್! ಶೀಘ್ರದಲ್ಲೇ ರಿಲೀಸ್​

ಸಾಮಾನ್ಯವಾಗಿ ದುಬಾರಿ ಸೂಟು ಅಥವಾ ದುಬಾರಿ ಕಾಸ್ಟೂಮ್, ಕಪ್ಪು ಕನ್ನಡಕ, ವಿದೇಶಿ ಬ್ರ್ಯಾಂಡ್​ನ ವಾಚು, ವಿದೇಶಿ ಬ್ರ್ಯಾಂಡ್​ನ ಮಿರಿ ಮಿರಿ ಮಿಂಚುವ ಶೂ ಧರಿಸಿ ಕಾಣಿಸಿಕೊಳ್ಳುತ್ತಿದ್ದ ರಾಮ್ ಚರಣ್, ಇದೀಗ ಮಾಲಧಾರಿಯಾಗಿರುವ ಕಾರಣ ಕಪ್ಪು ಬಣ್ಣದ ಸಾಧಾರಣ ಕುರ್ತಾ ಶರ್ಟ್ ಧರಿಸಿ, ಬರಿಗಾಲಲ್ಲಿ ಓಡಾಡುತ್ತಿದ್ದುದರಿಂದ ಜನರಿಗೆ ಆರಂಭದಲ್ಲಿ ಅವರ ಪರಿಚಯ ಸಿಗಲಿಲ್ಲ. ಆದರೆ ಇವರು ರಾಮ್​ ಚರಣ್​ ಎಂದು ತಿಳಿಯುತ್ತಲೇ ಸೆಲ್ಫಿಗಾಗಿ ಮುಗಿಬಿದ್ದರು. 

ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ರಾಮ್‌ ಚರಣ್‌ ಸದ್ಯಕ್ಕೆ 'ಗೇಮ್‌ ಚೇಂಜರ್‌' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾ ಇದಾಗಿದೆ.  ಆ ಸಿನಿಮಾದ ಬಳಿಕ ಬಾಲಿವುಡ್​ನ ಸಿನಿಮಾ ಒಂದರಲ್ಲಿ ನಟಿಸುವ ಸಾಧ್ಯತೆ ಇದೆ. ಈ ನಡುವೆ ಕೆಲವು ಸಿನಿಮಾಗಳ ನಿರ್ಮಾಣವನ್ನೂ ರಾಮ್ ಚರಣ್ ಮಾಡುತ್ತಿದ್ದಾರೆ. ತಂದೆ ಚಿರಂಜೀವಿ ನಟನೆಯ ಒಂದು ಸಿನಿಮಾಕ್ಕೆ ಬಂಡವಾಳ ಹೂಡುವವರಿದ್ದಾರೆ. ಜೊತೆಗೆ ತೆಲುಗಿನ ನಟ ನಿಖಿಲ್ ಅಭಿನಯದ ಐತಿಹಾಸಿಕ ಸಿನಿಮಾ ಒಂದಕ್ಕೂ ರಾಮ್ ಚರಣ್ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ದಿಲ್‌ ರಾಜು ನಿರ್ಮಿಸುತ್ತಿದ್ದು ಎಸ್ ಶಂಕರ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತಮನ್‌ ಎಸ್‌ ಸಂಗೀತ ನೀಡಿದ್ದು ರಾಮ್‌ ಚರಣ್‌, ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಜಯರಾಮ್‌, ಸುನಿಲ್‌, ಶ್ರೀಕಾಂತ್‌, ನಾಸರ್‌, ನವಿನ್‌ ಚಂದ್ರ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಬೇಸಿಗೆಯಲ್ಲಿ ರಿಲೀಸ್‌ ಆಗಲಿದೆ.

ನಟಿ ನಿಹಾರಿಕಾ ಬಳಿಕ ಮಾಜಿ ಪತಿಯೂ ಇನ್ನೊಂದು ಮದ್ವೆಗೆ ರೆಡಿ! ಮೆಗಾಸ್ಟಾರ್​ ಕುಟುಂಬದಲ್ಲಿ ಏನಿದು?

Latest Videos
Follow Us:
Download App:
  • android
  • ios