ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಮತ್ತು ಉಪಾಸನ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಮ್ ಚರಣ್ ತಂದೆ ಆಗುತ್ತಿರುವ ವಿಚಾರವನ್ನು ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಮತ್ತು ಉಪಾಸನ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಮ್ ಚರಣ್ ತಂದೆ ಆಗುತ್ತಿರುವ ವಿಚಾರವನ್ನು ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮೆಗಾಸ್ಟಾರ್ ಕುಟುಬಂದ ಸಂತಸದ ಸುದ್ದಿಯನ್ನು ಚಿರಂಜೀವಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದರು. ಚಿರಂಜೀವಿ ಶೇರ್ ಮಾಡಿರುವ ಪೋಸ್ಟ್‌ನಲ್ಲಿ 'ಶ್ರೀ ಹನುಮಾನ್ ಆಶೀರ್ವಾದದೊಂದಿಗೆ, ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ' ಎಂದು ಹೇಳಿದ್ದಾರೆ. ಚಿರಂಜೀವಿ ದಂಪತಿ ಹೆಸರು ಮತ್ತು ಉಪಾಸನ ತಂದೆ-ತಾಯಿ ಹೆಸರು ಪೋಸ್ಟ್ ನಲ್ಲಿದೆ. 

ಚಿರಂಜೀವಿ ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಅಂದಹಾಗೆ ರಾಮ್ ಚರಣ್ ಮತ್ತು ಉಪಾಸನ ಇಬ್ಬರೂ ಮದುವೆಯಾಗಿ 10 ವರ್ಷಗಳಾಗಿತ್ತು. ಇನ್ನೂ ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಎನ್ನುವ ಪ್ರಶ್ನೆ ಸ್ಟಾರ್ ಜೋಡಿಗೆ ಎದುರಾಗುತ್ತಲೇ ಇತ್ತು. ಈ ಬಗ್ಗೆ ಉಪಾಸನಾ ಅನೇಕ ಬಾರಿ ಉತ್ತರ ನೀಡಿದ್ದರು. ಇದು ತಮ್ಮ ವೈಯಕ್ತಿಕ ವಿಚಾರ, ಒಂದು ವೇಳೆ ಹಾಗೇನಾದಾರೂ ಆದರೆ ಖಂಡಿತ ಹೇಳುತ್ತೇವೆ ಎಂದಿದ್ದರು. 

ಪತ್ನಿ ಜೊತೆ ಆಫ್ರಿಕಾ ಕಾಡಲ್ಲಿ ರಾಮ್ ಚರಣ್; ಪ್ರಾಣಿಗಳನ್ನು ನೋಡುತ್ತಾ ಅಡುಗೆ ಮಾಡಿ ಸಂಭ್ರಮಿಸಿದ ಸ್ಟಾರ್

 ಇತ್ತೀಚಿಗಷ್ಟೆ ಸದ್ಗುರು ಜೊತೆಗಿನ ಸಂವಾದದಲ್ಲಿ ಭಾಗಿಯಾಗಿದ್ದ ಉಪಾಸನರ ಮಕ್ಕಳ ಬಗ್ಗೆ ಮಾತನಾಡಿದ್ದರು. ಆಗ ಉಪಾಸನ ಹೇಳಿದ್ದ ಹೇಳಿಕೆ ಅಚ್ಚರಿ ಮೂಡಿಸಿತ್ತು. ಜನಸಂಖ್ಯೆ ನಿಯಂತ್ರಣದ ಕಾರಣದಿಂದ ಮಗು ಮಾಡಿಕೊಂಡಿಲ್ಲ ಎಂದು ಉಪಾಸನಾ ಬಹಿರಂಗ ಪಡಿಸಿದರು. ಉಪಾಸನಾ ಮಾತಿಗೆ ಸದ್ಗುರು ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಮನುಷ್ಯ ಹೊರ ಬಿಡುವ ಇಂಗಾಲದ ಡಯಾಕ್ಸೈಡ್‌ನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಎಲ್ಲರಿಗೂ ಕಳವಳದ ವಿಚಾರವಾಗಿದೆ. ಮಾನವ ಸಂಕುಲ ಕಡಿಮೆಯಾದರೆ ಇಂಗಾಲದ ಡಯಾಕ್ಸೈಡ್‌ ಕೂಡ ಕಡಿಮೆಯಾಗಲಿದೆ. ಒಬ್ಬ ಮಹಿಳೆ ಮಗುವಿಗೆ ಜನ್ಮ ನೀಡುವುದಿಲ್ಲ ಎಂಬ ತೀರ್ಮಾನ ಮಾಡಿದರೆ ಅದು ಪ್ರಕೃತಿಗೆ ಒಳ್ಳೆಯದು'ಎಂದು ಸದ್ಗುರು ವಿವರಿಸಿದ್ದರು. ಆದರೀಗ ರಾಮ್ ಚರಣ್ ದಂಪತಿ ಗುಡ್ ನ್ಯೂಸ್ ನೀಡಿದ್ದಾರೆ.

ಈ ಕಾರಣಕ್ಕೆ ಮಗು ಮಾಡಿಕೊಂಡಿಲ್ಲ ಎಂದ ರಾಮ್ ಚರಣ್ ಪತ್ನಿ ಉಪಾಸನಾ

 ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ 2012 ಜೂನ್ 14ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಉಪಾಸನಾ ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ ಅವರ ಮೊಮ್ಮಗಳು. ಮದುವೆಯಾಗಿ ಒಂದು ದಶಕದ ನಂತರ ಗುಡ್ ನ್ಯೂಸ್ ನೀಡುವ ಮೂಲಕ ರಾಮ್ ಚರಣ್ ದಂಪತಿ ಮೆಗಾಸ್ಟಾರ್ ಕುಟುಂಬದ ಸಂತಸ ಹೆಚ್ಚಿಸಿದ್ದಾರೆ.

Scroll to load tweet…