Asianet Suvarna News Asianet Suvarna News

Rakul Preet Singh: ಬಿಕಿನಿ ತೊಟ್ಟು ಮೈನಸ್​ ಡಿಗ್ರಿ ನೀರಿನಲ್ಲಿಳಿದ ನಟಿ- ವಿಡಿಯೋ ನೋಡಿ ದಂಗಾದ ಫ್ಯಾನ್ಸ್​

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮೈನಸ್​ ಡಿಗ್ರಿ ನೀರಿನಲ್ಲಿ ಬಿಕಿನಿ ತೊಟ್ಟು ಇಳಿದು ಬಹಳ ಸುದ್ದಿಯಾಗಿದ್ದಾರೆ. ಏನಿದಕ್ಕೆ ಕಾರಣ?
 

Rakul Preet Singh takes dip in ice cold water wearing Bikini
Author
First Published May 6, 2023, 7:25 PM IST

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preeth Singh) ಸದ್ಯ ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಾಕುಲ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಆದರೇ ಯಾವುದೇ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ. ಕೆರಟಂ’ ಸಿನಿಮಾ ಮೂಲಕ ರಾಕುಲ್ ಪ್ರೀತ್ ಸಿಂಗ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅಂದಿನಿಂದ ಅನೇಕ ಸ್ಟಾರ್ ಹೀರೋಗಳ (Star hero) ಜೊತೆ ನಟಿಸಿದ್ದಾರೆ.  ಬಾಲಿವುಡ್‌ನಲ್ಲಿ ರಾಕುಲ್ ಅಟ್ಯಾಕ್,  ರನ್‌ವೇ 34, ಕಟ್‌ಪುಟ್ಲಿ, ಡಾಕ್ಟರ್ ಜೀ, ಥ್ಯಾಂಕ್ ಗಾಡ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ಈ ಬಗ್ಗೆ ಈಚೆಗೆ ಮಾತನಾಡಿದ್ದ ರಾಕುಲ್, ನನ್ನ ಕೆಲಸವನ್ನು ಬಾಕ್ಸ್ ಆಫೀಸ್ ಸಂಖ್ಯೆಯಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪ್ರೇಕ್ಷಕರ ಪ್ರೀತಿಯೇ ಮುಖ್ಯ ಎಂದಿರುವ ರಾಕುಲ್ ಬಾಕ್ಸ್ ಆಫೀಸ್ ಸಂಖ್ಯೆ ಅಥವಾ ಜಡ್ಜಮೆಂಟ್ ಅಲ್ಲ ಎಂದು ಹೇಳಿದ್ದರು. ಜೊತೆಗೆ ಸೌತ್ ಸಿನಿಮಾಗಳ ಬಾಲಿವುಡ್ ನಲ್ಲಿ ಸಕ್ಸಸ್ ಕಾಣುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದರು. ಇದರಲ್ಲಿ ಯಾವುದೇ ಚರ್ಚೆ ಇಲ್ಲ ಎಂದು ರಾಕುಲ್ ಹೇಳಿದರು. ಪ್ರಾದೇಶಿಕ ಮತ್ತು ಬಾಲಿವುಡ್ ಸಿನಿಮಾಗಳು ಎಲ್ಲವೂ ಭಾರತದ ಸಿನಿಮಾಗಳು. ಚಿತ್ರವು ಉತ್ತಮವಾಗಿದ್ದರೆ ಅದು ಭಾಷೆಯ ಹೊರತಾಗಿ ತನ್ನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ ಎಂದು ರಾಕುಲ್ ಹೇಳಿದ್ದರು.

ಇದಾದ  ಬಳಿಕ ನಟಿ ರಾಕುಲ್ ಪ್ರೀತ್‌ ಸಿಂಗ್ ಸೈಲೆಂಟಾಗಿ ಮದುವೆಗೆ ಸೈ ಎಂದಿರುವ ಬಗ್ಗೆ ಬಿ ಟೌನ್​ನಲ್ಲಿ ಬಹಳ ಸುದ್ದಿಯಾಗಿತ್ತು.  ನಿರ್ಮಾಪಕ ಜಾಕಿ ಭಗ್ನಾನಿ (Jockey Bhagnani) ಜತೆ ರಾಕುಲ್ ಡೇಟಿಂಗ್​ ನಡೆಸುತ್ತಿದ್ದು, ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.ಇದೇ ತಿಂಗಳಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನಲಾಗುತ್ತಿದ್ದು, ಈ ವಿಚಾರದಲ್ಲಿ ಈ ಜೋಡಿ ಸ್ಪಷ್ಟನೆ  ನೀಡಲಿಲ್ಲ. ಈ ಮದುವೆಯ ಸುದ್ದಿಯ ನಡುವೆಯೇ, ಈಗ ರಾಕುಲ್​ ಪ್ರೀತ್​ ಭಾರಿ ಸದ್ದು ಮಾಡುತ್ತಿದ್ದಾರೆ. ಅದೇನೆಂದರೆ, ಮೈ ನಡುಗಿಸುವ ಚಳಿಯಲ್ಲಿ ಬಿಕಿನಿ (Bikini) ತೊಟ್ಟು ನಟಿ ನೀರಿಗೆ ಇಳಿದು ಎಲ್ಲರ ಹುಬ್ಬೇರಿಸಿದ್ದಾರೆ.  ಬಿಕಿನಿ ಧರಿಸಿ ಮೈನಸ್ ಡಿಗ್ರಿ ತಾಪಮಾನದಲ್ಲಿ ಸ್ನಾನ ಮಾಡಿರುವ ನಟಿ ಇದರ ವಿಡಿಯೋ ಹರಿಬಿಟ್ಟು, ಪಡ್ಡೆ ಹೈಕಳ ಮೈ ಬೆಚ್ಚಗಾಗಿಸಿದ್ದಾರೆ.  ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್​ ಸುದ್ದಿ ಮಾಡುತ್ತಿದೆ.  

ನನ್ನ ಸಿನಿಮಾ ನೋಡೋಕೆ ಜನರ ಬಳಿ ಹಣವಿಲ್ಲ; ಸಾಲು ಸಾಲು ಚಿತ್ರಗಳ ಸೋಲಿಗೆ ರಾಕುಲ್ ಪ್ರೀತ್‌ಸಿಂಗ್ ರಿಯಾಕ್ಷನ್

ಅಂದಹಾಗೆ, ರಾಕುಲ್ ಪ್ರೀತ್ ಸಿಂಗ್ ಅವರು ಬಿಕಿನಿಯನ್ನು ಧರಿಸಿ ಮೈನಸ್ 15 ಡಿಗ್ರಿಯಲ್ಲಿ ಐಸ್-ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಇದು  ಕ್ರೈಯೊಥೆರಪಿ (Cryotherapy) ಎಂದಿದ್ದಾರೆ ನಟಿ.  ಕ್ರೈಯೊಥೆರಪಿಯು ಒಂದು ರೀತಿಯ ಶೀತ ಚಿಕಿತ್ಸೆಯಾಗಿದ್ದು ಅದು ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಲಿದೆ ಎಂದು ರಾಕುಲ್​ ಹೇಳಿದ್ದಾರೆ. ಇಂದು ಅವರು  ತಮ್ಮ  ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ಕ್ರಿಯೋ ಇನ್ -15 ಯಾರಾದರೂ ಟ್ರೈ ಮಾಡಿರುವಿರಾ ?" ಎಂದು ಶೀರ್ಷಿಕೆ ನೀಡಿದ್ದಾರೆ, ಆದರೆ ಈ ವಿಡಿಯೋ ತೆಗೆದಿರುವುದು ಎಲ್ಲಿ ಎನ್ನುವುದನ್ನು ಅವರು  ಬಹಿರಂಗಪಡಿಸಲಿಲ್ಲ. ರಾಕುಲ್ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ತಕ್ಷಣ ವೈರಲ್ ಆಗಿದೆ.  

ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್​ಗಳ (Comment) ಸುರಿಮಳೆಯಾಗುತ್ತಿದೆ. ಈಗಾದರೂ ಗೊತ್ತಾಯ್ತಾ ನಟಿ ಹಾಟ್​ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹಲವು ಬಳಕೆದಾರರು ಹೇಳಿದ್ದಾರೆ.  ರಾಕುಲ್ ನೀರಿನಲ್ಲಿ ಬೆಂಕಿಯನ್ನು ಹೊತ್ತಿಸಿದ್ದಾರೆ ಎಂದು ಇನ್ನು ಹಲವರು ಹೇಳಿದ್ದಾರೆ. ಈ ಹಾಟ್​ ನಟಿ ಮೈನಸ್​ ಡಿಗ್ರಿಯಲ್ಲಿಯೂ ಇಳಿದಿದ್ದರೂ ನೀರೆಲ್ಲಾ ಬಿಸಿಯಾಗುತ್ತದೆ ಎಂದಿದ್ದಾರೆ ರಾಕುಲ್​. ಸದ್ಯ ಸದ್ಯ ರಾಕುಲ್ ಪ್ರೀತ್ ಟಾಲಿವುಡ್​ನಿಂದ  ಬಾಲಿವುಡ್​ಗೆ ಹಾರಿದ್ದಾರೆ. ಹಿಂದಿಯಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ರಾಕುಲ್ ಪ್ರೀತ್ ಇತ್ತೀಚೆಗೆ ಹಿಂದಿಯಲ್ಲಿ ಛತ್ರಿವಾಲಿ ಎಂಬ ಬೋಲ್ಡ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಇತ್ತೀಚೆಗೆ OTT ನಲ್ಲಿ ಬಿಡುಗಡೆಯಾಯಿತು. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. 

Bahubali ನಟ ರಾಣಾ ದುಗ್ಗುಬಾಟಿ ಜೊತೆ ನಟಿ ತ್ರಿಶಾ ಬೆಡ್​ರೂಂ ಫೋಟೋ ಲೀಕ್​

 
 
 
 
 
 
 
 
 
 
 
 
 
 
 

A post shared by Rakul Singh (@rakulpreet)

Follow Us:
Download App:
  • android
  • ios