ರಾಖಿ ಸಾವಂತ್(Rakhi Sawant) ಎಂಟ್ರಿ ಕೊಡ್ತಿದ್ದಾಗೆ ಬಿಗ್‌ಬಾಸ್(Biggboss) ಮನೆಯಲ್ಲಿ ಹೊಸ ಟ್ವಿಸ್ಟ್ ಶಿಲ್ಪಾ ಶೆಟ್ಟಿ(Shilpa Shetty) ತಂಗಿಗೇ ಕೆಂಪು ಗುಲಾಬಿ ಕೊಟ್ಟ ರಾಖಿ ಗಂಡ

ಹಿಂದಿ ಬಿಗ್‌ಬಾಸ್ 15(Bigg boss 15)ರ ಸೀಸನ್‌ನಲ್ಲಿ ನಟಿ ರಾಖಿ ಸಾವಂತ್ ಎಲ್ಲರಿಗೂ ದೊಡ್ಡ ಸರ್ಪೈಸ್ ಕೊಟ್ಟಿದ್ದಾರೆ. ರಿಯಾಲಿಟಿ ಶೋ(Reality Show) ಮನೆಗೆ ಪತಿ ರಿತೇಷ್‌ನನ್ನು(Ritesh) ಕರೆದುಕೊಂಡು ಬಂದಿರೋ ನಟಿ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದಾರೆ. ಬಿಗ್‌ಬಾಸ್ ಮನೆಗೆ ರಾಖಿ ಎಂಟ್ರಿಕೊಟ್ಟರೆ ಎಂಟ್‌ಟೈನ್‌ಮೆಂಟ್‌ಗೆ ಕೊರತೆ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿರೋ ನಟಿ ಈಗ ಸಖತ್ ಫನ್‌ನಲ್ಲಿದ್ದಾರೆ. ಮೊದಲ ಬಾರಿ ಬಿಗ್‌ಬಾಸ್ ಮನೆಗೆ ಪತಿಯನ್ನು ಕರೆದುಕೊಂಡು ಬಂದಿರುವುದರಿಂದ ನಟಿ ಸಖತ್ ಎಕ್ಸೈಟ್ ಆಗಿದ್ದಾರೆ ಕೂಡಾ. ಹಾಗೆಯೇ ರಿತೇಷ್ ಕ್ಯಾಮೆರಾ ಎದುರಿಸುತ್ತಿರುವುದು ಇದೇ ಮೊದಲು.

ನನ್ನ ಗಂಡ ಸಿಕ್ಕಾಪಟ್ಟೆ ಹ್ಯಾಂಡ್ಸಂ. ಶಮಿತಾ ಶೆಟ್ಟಿ ಅಥವಾ ತೇಜಸ್ವಿ ಪ್ರಕಾಶ್ ಫ್ಲರ್ಟ್ ಮಾಡಬಹುದು ಎಂದು ರಾಖಿ ಹೆದರಿಕೊಂಡಿದ್ದೇ ಬಂತು. ರಿತೇಷ್ ಶಮಿತಾ ಹಿಂದೆ ಬಿದ್ದಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಸಹೋದರಿ, ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ಸಡನ್ನಾಗಿ ಕೆಂಪುಗುಲಾಬಿ ನೀಡಿ ಪ್ರೀತಿ ತಿಳಿಸಿದ್ದಾರೆ ರಿತೇಷ್. ಇದು ಸ್ವತಃ ರಾಖಿ ಸಾವಂತ್‌ಗೂ ಅಚ್ಚರಿಯಾದ ವಿಚಾರ.

Rakhi Sawant in Biggboss House: ಹ್ಯಾಂಡ್ಸಂ ಗಂಡನ ಮೇಲೆ ಶಮಿತಾಳ ಕಣ್ಣು ಬಿದ್ರೆ ಅನ್ನೋ ಭಯ

ನಟಿ ರಾಖಿ ಸಾವಂತ್ ಅವರು ತಮ್ಮ ಪತಿ ರಿತೇಶ್ ಅವರೊಂದಿಗೆ ವೈಲ್ಡ್ ಕಾರ್ಡ್ ಆಗಿ ಬಿಗ್ ಬಾಸ್ 15 ರ ಮನೆಗೆ ಪ್ರವೇಶಿಸಿದಾಗ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಲೈವ್ ಫೀಡ್‌ನಿಂದ ತೆಗೆದ ರಿತೇಶ್‌ನ ಸ್ಕ್ರೀನ್‌ಶಾಟ್‌ಗಳೊಂದಿಗೆ ಅಭಿಮಾನಿಗಳು ಜೋಡಿಯನ್ನು ವೈರಲ್ ಮಾಡಿದ್ದಾರೆ. ಆದರೆ ಅನೇಕರು ರಾಖಿ ಪತಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ, ನಿರೂಪಕ ಸಲ್ಮಾನ್ ಖಾನ್ ರಿತೇಶ್ ಬಗ್ಗೆ ರಾಖಿಯನ್ನು ಪ್ರಶ್ನಿಸಿ ಇವರು ನಿಜವಾದ ಪತಿ ಹೌದಲ್ವಾ ಎಂದಿದ್ದಾರೆ.

ಅವರು ನಿಜವಾಗಿಯೂ ನಿಮ್ಮ ಪತಿಯೇ ಅಥವಾ ನೀವು ಅವರನ್ನು ನೇಮಿಸಿಕೊಂಡಿದ್ದೀರಾ ಎಂದು ಸಲ್ಮಾನ್ ಕೇಳಿದರು. ರಾಖಿ ತಕ್ಷಣವೇ, ಇಲ್ಲ, ಇಲ್ಲ, ಅವರು ನನ್ನ ಪತಿ ಪರಮೇಶ್ವರ, ನನ್ನ ಏಕೈಕ ಪತಿ ಎಂದು ಹೇಳಿದ್ದಾರೆ.

ಶಮಿತಾ ಎಂದರೆ ನನಗಿಷ್ಟ. ಅವರು ನನಗೆ ಕೇವಲ ಸ್ನೇಹಿತೆ ಮಾತ್ರವಲ್ಲ ಎಂದು ಹೇಳಿ ಕೆಂಪು ಗುಲಾಬಿಯನ್ನು ಅವರ ಕೈಗೆ ಕೊಟ್ಟಿದ್ದಾರೆ. ಇದನ್ನು ನೋಡಿದ ರಾಖಿ ಸಾವಂತ್ ಅಚ್ಚರಿಯಾಗಿದ್ದರೆ, ಸಲ್ಮಾನ್ ಖಾನ್ ಎಲ್ಲವನ್ನೂ ತಿಳಿದುಕೊಂಡವರಂತೆ ಹಾಸ್ಯ ಮಾಡಿದ್ದಾರೆ. ಶಮಿತಾ ಖುಷಿ ಭರಿತ ಅಚ್ಚರಿ ನಾಚಿಗೆಯಲ್ಲಿ ನೋಡಿದ್ದಾರೆ.

ಕಳೆದ ಸೀಸನ್‌ನಲ್ಲಿ ನಟಿ ರಾಖಿ ಸಾವಂತ್ ರುಬೀನಾ ದಿಲಾಯಕ್ ಹಾಗೂ ಅವರ ಪತಿಯ ನಡುವೆ ಚೇಷ್ಟೆ ಮಾಡಿ ಭಾರೀ ಸುದ್ದಿಯಾಗಿದ್ದರು. ರುಬೀನಾ ಅವರು ಪ್ರತಿಬಾರಿ ರಾಖಿ ಜೊತೆ ಜಗಳವಾಡುತ್ತಿದ್ದರೆ ರಾಖಿ ಸಾವಂತ್ ಕೂಡಾ ಫೈಟ್ ಮಾಡುತ್ತಿದ್ದರು. ಈ ಜೋಡಿಯ ಜಗಳ ಕಳೆದ ಸೀಸನ್‌ನಲ್ಲಿ ಭಾರಿ ಸುದ್ದಿಯಾಗಿತ್ತು. ಈ ಬಾರಿ ಸ್ವತಃ ರಾಖಿಯೇ ಪತಿಯ ಜೊತೆಗೆ ಎಂಟ್ರಿ ಕೊಟ್ಟಿದ್ದು ಪ್ರೇಕ್ಷಕರು ಜೋಡಿಯ ಪರ್ಫಾಮೆನ್ಸ್ ನೋಡಲು ಕಾಯುತ್ತಿದ್ದಾರೆ.

ರಿತೇಷ್ ಕ್ಯಾಮೆರಾಗೆ ಹೊಸಬರಾಗಿದ್ದು, ರಾಖಿ ಸಾವಂತ್ ಗಂಡನ ಮುಂದೆ ಬಿಗ್‌ಬಾಸ್ ಮನೆಯಲ್ಲಿ ಹೇಗಿರಲಿದ್ದಾರೆ ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಇದೆ. ಹಾಗೆಯೇ ಅವರು ಪತಿ ಮನೆಯ ಜೊತೆ ಇರುವುದರಿಂದ ಈ ಬಾರಿ ಯಾರೊಂದಿಗೂ ಫ್ಲರ್ಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಬಿಗ್‌ಬಾಸ್ ಮನೆಯೊಳಗಿರುವ ನಟಿಯರು ತನ್ನ ಹ್ಯಾಂಡ್ಸಂ ಗಂಡನ ಮೇಲೆ ಕಣ್ಣು ಹಾಕಿ ಆತನೊಂದಿಗೆ ಫ್ಲರ್ಟ್ ಮಾಡೋ ಬಗ್ಗೆ ತಮ್ಮ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.