ಸಲ್ಮಾನ್ ಖಾನ್‌ನಿಂದ ದೂರ ಉಳಿ; ರಾಖಿ ಸಾವಂತ್‌ಗೆ ಜೀವ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್!
ಬಾಯ್ ಪರ ಧ್ವನಿ ಎತ್ತಿ ಸಂಕಷ್ಟದಲ್ಲಿ ಸಿಲುಕಿಕೊಂಡ ರಾಖಿ ಸಾವಂತ್. ಲಾರೆನ್ಸ್ ಬಿಷ್ಣೋಯ್‌ಯಿಂದ ಮತ್ತೊಮ್ಮೆ ಬೆದರಿಕೆ...
ಬಾಲಿವುಡ್ ಬೋಲ್ಡ್ ನಟಿ ರಾಖಿ ಸಾವಂತ್ ದುಬೈ ಪ್ರಯಾಣ ಮುಗಿಸಿಕೊಂಡು ಬರುತ್ತಿದ್ದಂತೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಇಸ್ಲಾಂಗೆ ಮತಾಂತರ ಆದ ಮೇಲೆ ರಾಖಿ ಮೇಲಿದೆ ನೆಟ್ಟಿಗರ ಕಣ್ಣು. ಅದಿಲ್ ಜೊತೆ ಮದುವೆ, ಡಿವೋರ್ಸ್ ಚರ್ಚೆ ನಡೆಯುತ್ತಿದೆ...ಈ ನಡುವೆ ಸಲ್ಲು ಪರ ನಿಂತುಕೊಂಡು ಲಾರೆನ್ಸ್ ಬಿಷ್ಣೋಯ್ ತಂಡದಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಕೃಷ್ಣಮೃಗ ಕೊಂದ ಪ್ರಕರಣದ ನಂತರ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ನಡುವೆ ಕಾಳಗ ಶುರುವಾಗಿತ್ತು. ಈ ಹಿಂದೆ ಅನೇಕ ಬಾರಿ ಸಲ್ಮಾನ್ ಖಾನ್‌ನ ಕೊಲ್ಲಲು ಬೆದರಿಕೆ ಹಾಕಿದ್ದರು ಅಲ್ಲದೆ ಒಮ್ಮೆ ಪ್ರಯತ್ನ ಕೂಡ ಮಾಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅನೇಕರನ್ನು ಬಂಧಿಸಿದ್ದರು. ಸ್ವತಃ ಲಾರೆನ್ಸ್ ಬಿಷ್ಣೋಯ್ ಕೂಡ ಜೈಲಿನಲ್ಲಿದ್ದರು. ಜೈಲಿನಿಂದಲೇ ಅಲ್ಲು ಬಗ್ಗೆ ಮಾತನಾಡುತ್ತಿದ್ದಾರೆ.
ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್ ಮುಗಿಸ್ತೀವಿ; ರಾಕಿ ಭಾಯ್ ಹೆಸರಿನಿಂದ ಬಂತು ಮತ್ತೊಂದು ಕೊಲೆ ಬೆದರಿಕೆ
ರಾಖಿ ಸಾವಂತ್ ತಾಯಿ ಅನಾರೋಗ್ಯದಿಂದ ಬಳಲುತ್ತಿರುವಾಗ ಸಲ್ಮಾನ್ ಖಾನ್ ಸಹಾಯ ಮಾಡಿದರು ಎನ್ನುವ ಕಾರಣಕ್ಕೆ ಸಹೋದರನ ಪರವಾಗಿ ರಾಖಿ ಈ ವಿಚಾರದಲ್ಲಿ ನಿಲ್ಲುತ್ತಾರೆ. ಹೀಗಾಗಿ ರಾಖಿ ಮೇಲೂ ಲಾರೆನ್ಸ್ ಬಿಷ್ಣೋಯ್ ಕಿಡಿಕಾರಿದ್ದಾನೆ. ಪ್ಯಾಪರಾಜಿಗಳ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ರಾಖಿ ಲಾರೆನ್ಸ್ ಬಿಷ್ಣೋಯ್ ಕಳುಹಿಸಿರುವ ಬೆದರಿಕೆ ಮೇಲ್‌ನ ತೋರಿಸಿದ್ದಾರೆ. 'ರಾಖಿ ನಿಮ್ಮ ಜೊತೆ ನಮಗೆ ಮುನಿಸು ಇಲ್ಲ ಯಾವ ಜಗಳನೂ ಇಲ್ಲ ಆದರೆ ಸಲ್ಮಾನ್ ಖಾನ್ ವಿಚಾರದಲ್ಲಿ ಸೇರಿಕೊಳ್ಳಬೇಡಿ. ಇಲ್ಲದಿದ್ದರೆ ನಿಮಗೆ ತುಂಬಾ ಕಷ್ಟವಾಗುತ್ತದೆ ತೊಂದರೆಗಳನ್ನು ಎದರಿಸುತ್ತೀನಿ. ನೀವು ಎಷ್ಟೇ ಸೆಕ್ಯೂರಿಟಿ ಕೊಟ್ಟರೂ ಸಲ್ಮಾನ್ ಖಾನ್‌ನ ನಾನು ಬಾಂಬೆಯಲ್ಲಿ ಕೊಲೆ ಮಾಡುತ್ತೀವಿ. ಇದು ನಮ್ಮ ಕೊನೆಯ ವಾರ್ನಿಂಗ್ ಆಗಿರುತ್ತದೆ ಇದಕ್ಕೂ ಮೇಲೆ ನೀವು ಮುಂದುವರೆದರೆ ಕಷ್ಟ ಎದುರಿಸಬೇಕಾಗುತ್ತದೆ' ಎಂದು ಬಂದಿರುವ ಮೇಲ್‌ನ ರಾಖಿ ಓದುತ್ತಾರೆ.
ಅಲ್ಲಿಗೆ ಸುಮ್ಮನಾಗದ ರಾಖಿ ಲಾರೆನ್ಸ್ ಬಿಷ್ಣೋಯ್ ಬಳಿ ಮನವಿ ಮಾಡಿಕೊಂಡಿದ್ದಾರೆ. 'ಇದು ತುಂಬಾ ಗಂಭೀರವಾದ ವಿಚಾರ. ನೀವು ಕಳುಹಿಸಿರುವ ಮೇಲ್ ನೋಡಿ ಗಾಬರಿ ಆಗಿರುವೆ. ಸಲ್ಮಾನ್ ಬಾಯ್ ಬಗ್ಗೆ ನಾನು ಮಾತನಾಡುತ್ತಿರುವೆ ಯಾವತ್ತೂ ಅವರ ಪರವೇ ನಿಲ್ಲುವುದು. ಅವರಿಗೆ ಯಾವ ತೊಂದರೆ ಆಗಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಿದ್ದು ಅವರಿಗೆ ಏನಾಯ್ತು ಆ ರೀತಿ ನಮ್ಮ ಸಲ್ಮಾನ್ ಅವರಿಗೆ ಆಗಬಾರದು. ಎಷ್ಟೇ ಬೆದರಿಕೆ ಹಾಕಿದ್ದರೂ ಸಲ್ಮಾನ್ ಖಾನ್ ಸೆಕ್ಯೂರಿಟಿ ಪಡೆದು ಬಾಂಬೆಯಲ್ಲಿದ್ದಾರೆ. ಲಾರೆನ್ಸ್ ಬಿಷ್ಣೋಯ್ ನಾನು ನಿಮ್ಮ ಸಹೋದರಿ ರೀತಿ ಹೀಗಾಗಿ ನನ್ನನ್ನು ಕ್ಷಮಿಸಿ ಹಾಗೂ ನನ್ನ ಸಹೋದರನನ್ನು ಕ್ಷಮಿಸಿ. ಕೊಲೆ ಅನ್ನೋ ಪದ ಮತ್ತೆ ಬಳಸಬೇಡಿ' ಎಂದು ರಾಖಿ ಮನವಿ ಮಾಡಿಕೊಂಡಿದ್ದಾರೆ.
' ಈ ವಿಚಾರದಲ್ಲಿ ಸುಮ್ಮನೆ ನನ್ನನ್ನು ಎಳೆದಿದ್ದಾರೆ. ಯಾರಿಂದ ರಕ್ಷಣೆ ಪಡೆಯಲಿ? ಒಂದು ದೂರು ಸಲ್ಲಿಸಬೇಕು ಅಂದ್ರೆ ದಿನವಿಡೀ ಪೊಲೀಸ್ ಠಾಣೆಯಲ್ಲಿ ಇರಬೇಕು. ಸಹಾಯಕ್ಕೆ ಯಾರನ್ನಾದರೂ ಕೇಳುತ್ತೀನಾ ಇಲ್ವಾ ಅನ್ನೋದೇ ನನಗೆ ಗೊತ್ತಿಲ್ಲ' ಎಂದು ರಾಖಿ ಹೇಳಿದ್ದಾರೆ.