Asianet Suvarna News Asianet Suvarna News

ಆದಿಲ್ ಮದುವೆಯಾದ ಬೆನ್ನಲ್ಲೇ ನಟಿ ರಾಖಿ ಸಾವಂತ್ ಅರೆಸ್ಟ್; ಪೊಲೀಸರಿಂದ ವಿಚಾರಣೆ

ಆದಿಲ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದ ರಾಖಿ ಸಾವಂತ್‌ಗೆ ಪೊಲೀಸರು ಶಾಕ್ ನೀಡಿದ್ದಾರೆ. ರಾಖಿ ಸಾವಂತ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

Rakhi Sawant arrested after Sherlyn Chopra's complaint against her sgk
Author
First Published Jan 19, 2023, 2:58 PM IST

ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಇತ್ತೀಚೆಗಷ್ಟೆ ಮದುವೆಯಾಗಿದ್ದರು. ಮೈಸೂರು ಮೂಲದ ಆದಿಲ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ರಾಖಿ ಸಾವಂತ್ ಒಂದಲ್ಲೊಂದು ವಿಚಾರಕ್ಕೆ ಸದ್ದುಮಾಡುತ್ತಿದ್ದರು. ಆದಿಲ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದ ರಾಖಿಗೆ ಪೊಲೀಸರು ಶಾಕ್ ನೀಡಿದ್ದಾರೆ. ರಾಖಿ ಸಾವಂತ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನಟಿ ಶರ್ಲಿನ್ ಚೋಪ್ರಾ ದಾಖಲಿಸಿದ್ದ ಎಫ್ ಐ ಆರ್‌ಗೆ ಸಂಬಂಧಿಸಿದ್ದಂತೆ ರಾಖಿ ಅವರನ್ನು ಬಂಧಿಸಲಾಗಿದೆ. ಇಂದು (ಜನವರಿ 19) ಮಧ್ಯಾಹ್ನ ರಾಖಿ ಸಾವಂತ್ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. 

ಈ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಅಂಬೋಲಿ ಪೊಲೀಸರು ಎಫ್‌ಐಆರ್ 883/2022 ಗೆ ಸಂಬಂಧಿಸಿದಂತೆ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. ನಿನ್ನೆ, ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ ಕೋರ್ಟ್ ತಿರಸ್ಕರಿಸಿತ್ತು' ಎಂದು ಶೆರ್ಲಿನ್ ಟ್ವೀಟ್ ಮಾಡಿದ್ದಾರೆ.

ಕೇಸರಿ ಬುರ್ಖಾ ಧರಿಸಿ ಬಂದ ರಾಖಿ ಸಾವಂತ್​ ಹೇಳಿದ್ದೇನು?

ಕಳೆದ ವರ್ಷ #MeToo ಆರೋಪಿ ಸಾಜಿದ್ ಖಾನ್ ವಿರುದ್ಧ ನೀಡಿದ ಹೇಳಿಕೆಗಾಗಿ ರಾಖಿ ಸಾವಂತ್ ಶೆರ್ಲಿನ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ಟೋಬರ್ 29 ರಂದು ಸಾಜಿದ್ ಖಾನ್ ವಿರುದ್ಧ ಹೇಳಿಕೆಯನ್ನು ದಾಖಲಿಸಿದ ನಂತರ ಶೆರ್ಲಿನ್ ಮಾಧ್ಯಮಗಳೊಂದಿಗೆ ಮಾತನಾಡಿ, 'ಸಲ್ಮಾನ್ ಖಾನ್ ಸಿನಿಮಾ ನಿರ್ಮಾಪಕನನ್ನು ರಕ್ಷಿಸುತ್ತಿದ್ದಾರೆ' ಎಂದು ಆರೋಪಿಸಿದರು.  ಬಳಿಕ ರಾಖಿ ಸಾವಂತ್,  ಶೆರ್ಲಿನ್ ಹೇಳಿಕೆಯನ್ನು ಖಂಡಿಸಿದರು. ಪಾಪರಾಜಿಗಳೊಂದಿಗೆ ಮಾತನಾಡಿದ್ದ ರಾಖಿ, ಯಾವ ದೂರಿನಲ್ಲಿ ಅರ್ಹತೆ ಇದೆ ಮತ್ತು ಯಾವುದು ಇಲ್ಲ ಎಂದು ಪೊಲೀಸರಿಗೆ ತಿಳಿದಿದೆ ಎಂದು ಹೇಳಿದರು. ನಂತರ ಶೆರ್ಲಿನ್ ಚೋಪ್ರಾ, ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದರು.

ಆದಿಲ್ ಜೊತೆ ನನ್ನ ಮದುವೆ ಉಳಿಸಿದ್ದು ಸಲ್ಮಾನ್ ಖಾನ್; ರಾಖಿ ಸಾವಂತ್

ರಾಖಿ ಸಾವಂತ್ ಸದ್ಯ ಆದಿಲ್ ಖಾನ್ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಫಾತೀಮ ಆಗಿ ಬದಲಾಗಿದ್ದಾರೆ. ಕ್ಯಾಮರಾ ಮುಂದೆ ಹೈ ಡ್ರಾಮ ಮಾಡುತ್ತಿದ್ದ ರಾಖಿ ಇದು ಪತಿ ಆದಿಲ್ ಜೊತೆ ಸೇರಿ ಇಂದು  ನೃತ್ಯ ಅಕಾಡೆಮಿಯನ್ನು ಪ್ರಾರಂಭಿಸಬೇಕಿತ್ತು. ಆದರೆ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಬಗ್ಗೆ ರಾಖಿ ಸಾವಂತ್ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. 

Follow Us:
Download App:
  • android
  • ios