ಅಕ್ಷಯ್ ಕುಮಾರ್ ಬಾಲಿವುಡ್‌ನ ಅತ್ಯಂತ ಬ್ಯುಸಿ ನಟ. ಪ್ರತಿ ವರ್ಷ ಅಕ್ಷಯ್ ವರ್ಷದಲ್ಲಿ ಕನಿಷ್ಠ 4-5 ಸಿನಿಮಾ ರಿಲೀಸ್ ಮಾಡ್ತಾರೆ. ಈ ವರ್ಷ ಅಕ್ಷಯ್ ಕುಮಾರ್ ಅವರ ಕೆಲವು ಸಿನಿಮಾ ಪೋಸ್ಟ್ ಪೋನ್ ಅಗಿದೆ, ಇನ್ನೊಂದಿಷ್ಟು ಒಟಿಟಿಯಲ್ಲಿ ರಿಲೀಸ್ ಆಗಿದೆ.

ವರ್ಷದ ಒಟ್ಟು ಕೆಲಸವನ್ನು ಲೆಕ್ಕ ಹಾಕಿದ್ರೆ ಈ ಬಾರಿ ನಟ ರಜ್‌ಕುಮಾರ್ ರಾವ್ ಅಕ್ಷಯ್ ಅವರನ್ನು ಸೋಲಿಸಿದ್ದಾರೆ. ಈ ವರ್ಷ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ, ಲಕ್ಷ್ಮೀ, ಬೆಲ್‌ಬಾಟಂ, ಪೃಥ್ವಿರಾಜ್, ಬಚ್ಚನ್ ಪಾಂಡೆ, ಅಟ್ರಾಂಗಿ ರೇ ತೆರೆ ಮೇಲೆ ಅಪ್ಪಳಿಸಲು ಸಿದ್ಧವಾಗಿವೆ.

ಎಲ್ಲೆಲ್ಲೂ ಪ್ರೇಮ.. ಕಾಜಲ್-ಗೌತಮ್ ಲಿಪ್‌ಲಾಕ್ ವೈರಲ್

ರಾಜ್‌ಕುಮಾರ್ ರಾವ್‌ ವಿಚಾರಕ್ಕೆ ಬಂದರೆ, ನಟನ ಲುಡೋ ಸಿನಿಮಾ ಕೆಲವೇ ದಿನದಲ್ಲಿ ರಿಲೀಸ್ ಆಗಲಿದೆ. ಇದನ್ನು ಅನುರಾಗ್ ಬಾಸು ನಿರ್ದೇಶಿಸಿದ್ದಾರೆ. ಈ ಸಿನಿಮಾ ನಂತರ ಛಲ್ಲಾಂಗ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸ್ಪೋಟ್ರ್ಸ್ ಕುರಿತ ಸಿನಿಮಾ ಆಗಿದ್ದು, ಈಗಾಗಲೇ ಟ್ರೈಲರ್ ಸಿಕ್ಕಾಪಟ್ಟೆ ಸುದ್ದು ಮಾಡಿದೆ.

ಈ ಸಿನಿಮಾ ನಂತರ ಬಧಾಯಿ ದೋ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಭೂಮಿ ರಾಜ್‌ಕುಮಾರ್‌ ಜೊತೆ ತೆರೆ ಹಂಚಿಕೊಂಡಿದ್ದಾರೆ. ಹಮ್ ದೋ, ಹಮಾರೆ ದೋ ಸಿನಿಮಾ ಕೂಡಾ ರೆಡಿಯಾಗಿದೆ.

ಬೀಳುವುದರಲ್ಲಿತ್ತು ಪ್ರಿಯಾಂಕ ಡ್ರೆಸ್..! ರಕ್ಷಿಸಿದ್ದು ನಮಸ್ತೆ

ರಾಜ್ ಸಿನಿಮಾ ಸಾಲಿನಲ್ಲಿ ಅಫ್ಝಾನ ಕೂಡಾ ಇದೆ. ಇದರಲ್ಲಿ ಜಾಹ್ನವಿ ಕಪೂರ್‌ ಜೊತೆ ನಟಿಸಲಿದ್ದಾರೆ. ಹಾಗೆಯೇ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಜೊತೆ ದಿ ವೈಟ್‌ ಟೈಗರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ