ನಟ ರಜನೀಕಾಂತ್ 70 ವರ್ಷದ ಹುಟ್ಟುಹಬ್ಬ ನಿನ್ನೆ ಆಚರಿಸಿದ್ದಾರೆ. ಅಂದ ಹಾಗೆ ನಟನ 70ನೇ ವರ್ಷದ ಬರ್ತ್‌ಡೇ ಕೇಕ್ ಸ್ವಲ್ಪ ಸ್ಪೆಷಲ್ ಆಗಿತ್ತು. ಇದು ಅಭಿಮಾನಿಗಳಿಗೆ ಬಿಗ್ ಸರ್ಪೈಸ್ ಮತ್ತು ಹೊಸ ಹುರುಪು ತಂದಿದೆ.

ನವ್ ಆರ್ ನೆವರ್ ಅನ್ನೋ ಕೇಕ್ ಕಟ್ ಮಾಡಿದ ನಟ ಫ್ಯಾನ್ಸ್ ಜೊತೆಗೆ ನಿಂತಿದ್ದಾರೆ. ರಜನಿ ಬರ್ತ್‌ಡೇ ಕೇಕ್ ಇದೀಗ ಎಲ್ಲೆಡೆ ವೈರಲ್ ಆಗಿದೆ. ವೈಟ್ ಕ್ರೀಂನಲ್ಲಿ NOW ಎಂದು ಬರೆದು OR NEVER ಅನ್ನು ಚಾಕಲೇಟ್ ಕ್ರೀಂನಲ್ಲಿ ಬರೆಯಲಾಗಿದೆ.

ರಜನೀಕಾಂತ್‌ಗಾಗಿ 10 ದಿನ ಉಪವಾಸ ಮಾಡಿದ ಶ್ರೀದೇವಿ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ಗಣ್ಯರು ಸೇರಿ ಬಹಳಷ್ಟು ಜನರು ನಟನಿಗೆ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ರಜನೀಕಾಂತ್ ಅವರ ಫ್ಯಾನ್ಸ್ ನಟ ರಾಜಕೀಯ ಎಂಟ್ರಿ ವಿಳಂಬ ಮಾಡ್ತಿರುವಾಗ, ನೌ ಆರ್ ನೆವರ್ ಅನ್ನೋ ಹ್ಯಾಶ್‌ ಟ್ಯಾಗ್ ಟ್ರೆಂಡ್ ಮಾಡಿದ್ದರು.

ನಟನ ರಾಜಕೀಯ ಎಂಟ್ರಿ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎನ್ನುವುದು ಸುಳ್ಳಲ್ಲ. ಕಳೆದ ಮೂರು ದಿನಗಳಲ್ಲಿ, ರಜನಿಕಾಂತ್ ಅವರು ಇನ್ನೂ ಪ್ರಾರಂಭವಾಗಲಿರುವ ಪಕ್ಷದ ಮೇಲ್ವಿಚಾರಕರಾದ ತಮಿಲರೂವಿ ಮಣಿಯನ್ ಮತ್ತು ಬಿಜೆಪಿಯಿಂದ ಹೊರಬಂದ ನಂತರ ಪಕ್ಷದ ಸಂಯೋಜಕರಾಗಿರುವ ಆರ್ ಅರ್ಜುನಮೂರ್ತಿ ಅವರೊಂದಿಗೆ ಸಮಾಲೋಚನೆ ನಡೆಸಿದರು.