Asianet Suvarna News Asianet Suvarna News

Annaatthe: ಥಿಯೇಟರ್‌ ಮುಂದೆ ಬೆಳಗ್ಗೆ 4 ಗಂಟೆಗೆ ಸತ್ಯನಾರಾಯಾಣ ಪೂಜೆ, ಪುಟ್ಟ ಮಕ್ಕಳೂ ಭಾಗಿ

  • Annaatthe: ಚಿತ್ರಮಂದಿರದ ಮುಂದೆ ಬೆಳ್ಳಂಬೆಳಗ್ಗೆ ಹವನ
  • ಮುಂಬೈ ಚಿತ್ರಮಂದಿಗಳಲ್ಲಿಯೂ ಅಣ್ಣಾತ್ತೆ ಹವಾ
Rajinikanth Fans Perform Havan Outside Mumbai Theatre at 4 AM Kids Join Celebrations dpl
Author
Bangalore, First Published Nov 4, 2021, 6:58 PM IST
  • Facebook
  • Twitter
  • Whatsapp

ಮುಂಬೈನಲ್ಲಿ(Mumbai) ಮುಂಜಾನೆ 4 ಗಂಟೆಗೆ ಥಿಯೇಟರ್ ಮುಂದೆ ಹವನ ನಡೆದಿದೆ. ಶುಕ್ರವಾರ ಬೆಳಗ್ಗೆ ರಜನಿಕಾಂತ್(Rajinikanth) ಅವರ ದೀಪಾವಳಿ(Diwali) ಬಿಡುಗಡೆಯಾದ ಅಣ್ಣಾತ್ತೆ(Annaatthe) ಸಿನಿಮಾ ಹಿನ್ನೆಲೆ ಸಂಭ್ರಮ ಮನೆ ಮಾಡಿತ್ತು. ದೀಪಾವಳಿ ಜೊತೆಗೆ ಸಿನಿಮಾ ಸಂಭ್ರಮ ಸೇರಿ ಖುಷಿ ಡಬಲ್ ಆಗಿತ್ತು.

ಸಿಯಾನ್‌ನ ಪಿವಿಆರ್ ಥಿಯೇಟರ್‌ನ ಹೊರಗಿನ ಲೇನ್ ಮುಂಜಾವ ಎಚ್ಚರಗೊಂಡಿದೆ. ತಲೈವಾ ಅವರ ಬಹು ನಿರೀಕ್ಷಿತ ಸಿನಿಮಾ ಅಣ್ಣಾತ್ತೆ ವೀಕ್ಷಿಸಲು ಅಭಿಮಾನಿಗಳು ಚಿತ್ರಮಂದಿರದಲ್ಲಿ ಸೇರಿದ್ದಾರೆ. ತಮಿಳು ಆಕ್ಷನ್-ಡ್ರಾಮಾವನ್ನು ಶಿವ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಖುಷ್ಬೂ ಮತ್ತು ಇತರರು ನಟಿಸಿದ್ದಾರೆ.

ತಲೈವಾ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಟೀಸರ್ ರಿಲೀಸ್

ಮಲ್ಟಿಪ್ಲೆಕ್ಸ್ ಸಂಪೂರ್ಣ ವಿಭಿನ್ನ ಸಂಭ್ರಮದಲ್ಲಿತ್ತು. ದೊಡ್ಡವರಷ್ಟೇ ಅಲ್ಲ, ನಾಲ್ಕು ವರ್ಷ ವಯಸ್ಸಿನ ಮಕ್ಕಳೂ ಚಿತ್ರದ ಪ್ರದರ್ಶನಕ್ಕೆ ಅಣಿಯಾಗಿದ್ದರು. ಚಿತ್ರದ ಮೊದಲ ಪ್ರದರ್ಶನವನ್ನು ಅಧಿಕೃತವಾಗಿ ಬೆಳಗ್ಗೆ 8.00 ಗಂಟೆಗೆ ನಿಗದಿಪಡಿಸಲಾಗಿತ್ತು.

Rajinikanth Fans Perform Havan Outside Mumbai Theatre at 4 AM Kids Join Celebrations dpl

ಚೆಂಬೂರು ಮೂಲದ ತಲೈವಾ ಕ್ಲಬ್ ಮಹಾರಾಷ್ಟ್ರ ಸ್ಟೇಟ್ ಹೆಡ್ ರಜಿನಿ ಅಭಿಮಾನಿಗಳ ಕಲ್ಯಾಣ ಸಂಘದ (MSHRFWA) ಅಧ್ಯಕ್ಷ ಡಾ. ದಳಪತಿ ಎಸ್.ಕೆ.ಅತಿಮೂಲಮ್ ಅವರು ವಿಶೇಷ ಪ್ರದರ್ಶನವನ್ನು ಬೆಳಗ್ಗೆ 5.00 ಗಂಟೆಗೆ  ಆಯೋಜಿಸಿದ್ದರು. ಸೂಪರ್‌ಸ್ಟಾರ್‌ನ ಲೇಟೆಸ್ಟ್ ರಿಲೀಸ್ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಗರಿಗರಿಯಾದ ಬಿಳಿ ಶರ್ಟ್ ಮತ್ತು ಪಂಚೆ ಧರಿಸಿ ಸಿದ್ಧರಾಗಿದ್ದರು.

ಪುರೋಹಿತರೊಬ್ಬರು ಅವರ ದೀರ್ಘಾಯುಷ್ಯಕ್ಕಾಗಿ ಸತ್ಯನಾರಾಯಣ ಪೂಜೆಯನ್ನು ಮಾಡಿದ್ದಾರೆ. ವೇದಿಕೆಯ ಮಧ್ಯದಲ್ಲಿ ರಜನಿಕಾಂತ್ ಅವರ ದೈತ್ಯ ಕಟ್-ಔಟ್ ಹೊಂದಿಸಲಾಗಿತ್ತು.

ರಜನಿಕಾಂತ್ ಅಣ್ಣಾತ್ತೆ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್ ರಿಲೀಸ್!

ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ರಾಜಗುರು ಪ್ರಕಾಶ್ ಕಳೆದ ಎರಡು ವರ್ಷಗಳಿಂದ ರಜನಿಕಾಂತ್ ಅವರ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದರು. ತಲೈವಾ ಚಿತ್ರದ ಪೋಸ್ಟರ್‌ಗಳಿಗೆ ಹಾಕಲು ಹೂವು ಮತ್ತು ಹಾರಗಳನ್ನು ತುಂಬಿದ ಚೀಲವನ್ನು ಹೊತ್ತ ಅವರು, ರಜನಿಕಾಂತ್ ನನಗೆ ದೇವರಿಗಿಂತ ದೊಡ್ಡವರು. ನಾವು ಅವರ ಯಾವುದೇ ಹೊಸ ಸಿನಿಮಾ ವೀಕ್ಷಿಸಲು ಸಾಧ್ಯವಾಗದ ಕಾರಣ ನಾನು ಕೊರೊನಾವೈರಸ್ ಬಗ್ಗೆ ತುಂಬಾ ಕೋಪಗೊಂಡಿದ್ದೆ. ಅಂತಿಮವಾಗಿ ಇಂದು ತಲೈವಾ ಚಿತ್ರ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ವಿಶೇಷ ದಿನ ಎಂದಿದ್ದಾರೆ.

ಸೌತ್ ಸೂಪರ್‌ಸ್ಟಾರ್(Superstar) ರಜನಿಕಾಂತ್(Rajinikamth) ಗುರುವಾರ ರಾತ್ರಿ ತಮಿಳುನಾಡಿನ(Tamilnadu) ಚೆನ್ನೈನಲ್ಲಿರುವ(Chennai) ಕಾವೇರಿ ಆಸ್ಪತ್ರೆಗೆ(Kauvery Hospital) ದಾಖಲಾಗಿದ್ದರು. ಅಣ್ಣಾತ್ತೆ ಟ್ರೈಲರ್ ರಿಲೀಸ್ ಬೆನ್ನಲ್ಲೇ ನಟ ಆಸ್ಪತ್ರೆಗೆ ದಾಖಲಾಗಿರುವ ಅವರ ಅಭಿಮಾನಿಗಳಿಗೆ ಅತಂಕ ಉಂಟುಮಾಡಿತ್ತು. ಆದರೆ ಇತ್ತೀಚಿನ ಅಪ್ಡೇಟ್ ಪ್ರಕಾರ ನಟ ರಜನಿಕಾಂತ್ ಅವರು ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಸಂಬಂಧಿ ಹಾಗೂ ನಟ ವೈ.ಜೀ ಮಹೇಂದ್ರನ್ ಖಚಿತಪಡಿಸಿದ್ದರು.

ಗುರುವಾರ ರಾತ್ರಿ ರಜನಿಕಾಂತ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಕಾಮನ್ ಆರೋಗ್ಯ ತಪಾಸಣೆ ಎಂದು ಅವರ ಪತ್ನಿ ಲತಾ ಮಾಧ್ಯಮಗಳಿಗೆ ಹೇಳಿದ್ದು, ಕೆಲವರು ನಟನಿಗೆ ಎದೆನೋವು ಮತ್ತು ಅಸ್ವಸ್ಥತೆ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಿದ್ದರು. ರಜನಿಕಾಂತ್ ಅವರ ಅಣ್ಣಾತ್ತೆ ಸಿನಿಮಾ ಬಿಡುಗಡೆಗೂ ಮುನ್ನ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಅವರು ಖಚಿತಪಡಿಸಿದ್ದರು. ಅದರಂತೆಯೇ ನಟ ಸಿನಿಮಾ ರಿಲೀಸ್ ಮುನ್ನ ಡಿಸ್ಚಾರ್ಜ್ ಆಗಿದ್ದಾರೆ.

ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಡಿ.ಇಮ್ಮಾನ್ ಸಂಗೀತ ನೀಡಿದ್ದಾರೆ. ಕೀರ್ತಿ ಸುರೇಶ್‌ (Keerthi Suresh), ರಜನಿಕಾಂತ್ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತಿಚೆಗಷ್ಟೇ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಪಾಲ್‌ಸಾಮಿಯಾಗಿ ರಜನಿಕಾಂತ್ ಅವರು ಭರ್ಜರಿ ಆಕ್ಷನ್‌ನೊಂದಿಗೆ ಮಾಸ್ ಎಂಟ್ರಿ ಕೊಟ್ಟಿದ್ದರು.

Follow Us:
Download App:
  • android
  • ios