ತಮ್ಮ ನೂತನ ಪಕ್ಷ ವಿಸರ್ಜಿಸಿದ ಸೂಪರ್‌ಸ್ಟಾರ್..! ರಾಜಕೀಯಕ್ಕೆ ಎಂಟ್ರಿ ಕೊಡಲ್ಲ ತಲೈವಾ

ಚೆನ್ನೈ(ಜು.12): ತಾವು ರಾಜಕೀಯಕ್ಕೆ ಎಂಟ್ರಿ ಕೊಡುವ ಯಾವುದೇ ಸಾಧ್ಯತೆ ಇಲ್ಲದ ಕಾರಣ ಸೂಪರ್‌ಸ್ಟಾರ್ ರಜನೀಕಾಂತ್ ಅವರು ತಮ್ಮ ಪಕ್ಷ ರಜನಿ ಮಕ್ಕಳ್ ನೀದಿ ಮಯ್ಯಂ(ಆರ್‌ಎಂಎಂ) ಪಕ್ಷವನ್ನು ವಿಸರ್ಜಿಸಿದ್ದಾರೆ.

ರಜನಿ ಅಭಿಮಾನಿಗಳು ರಜನಿಕಾಂತ್ ಫ್ಯಾನ್ಸ್ ವೆಲ್‌ಫೇರ್ ಕ್ಲಬ್ ಮೂಲಕ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಅಮೆರಿಕದಿಂದ ತವರಿಗೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್!

ಕಳೆದ ವಾರ ಅಮೆರಿಕದಿಂದ ಆರೋಗ್ಯ ತಪಾಸಣೆ ಮುಗಿಸಿಕೊಂಡು ಭಾರತಕ್ಕೆ ಮರಳಿದ ನಟ ಆರ್‌ಎಂಎಂನ ಜಿಲ್ಲಾ ಕಾರ್ಯದರ್ಶಿ ಮತ್ತು ಇತರ ಸಿಬ್ಬಂದಿಯನ್ನು ಅವರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭೇಟಿಯಾಗಿದ್ದಾರೆ.

ಆರೋಗ್ಯ ಕಾರಣಗಳಿಂದಾಗಿ ರಾಜಕೀಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆರ್‌ಎಂಎಂನ ಕುರಿತು ನಿರ್ಧಾರ ಮಾಡಬೇಕಾಗಿದೆ. ಪಕ್ಷ ರಚಿಸಿ ಪಕ್ಷವನ್ನು ಮುನ್ನಡೆಸಲು ಎಲ್ಲ ಸಿದ್ಧತೆ ಮಾಡಲಾಗಿತ್ತು. ಈಗ ಆರ್‌ಎಂಎಂ ಭವಿಷ್ಯದ ನಿರ್ಧಾರ ಮುಂದೆ ಬಂದಿದೆ ಎಂದಿದ್ದಾರೆ.

ಈ ಆರೋಗ್ಯ ಸ್ಥಿತಿಯಲ್ಲಿ ರಾಜಕೀಯ ಎಂಟ್ರಿ ಸಾಧ್ಯವಿಲ್ಲ. ಆರ್‌ಎಂಎಂ ವಿಸರ್ಜಿಸುತ್ತಿದ್ದೇನೆ. ಅಭಿಮಾನಿಗಳು ರಜನೀಕಾಂತ್ ವೆಲ್‌ಫೇರ್ ಕ್ಲಬ್ ಮೂಲಕ ಸಮಾಜಮುಖಿ ಕೆಲಸ ಮುಂದುವರಿಸಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.