ಜೈಲರ್ ಬಳಿಕ 171ನೇ ಸಿನಿಮಾಗೆ ರೆಡಿಯಾದ ರಜನಿಕಾಂತ್: ಲೋಕೇಶ್ ಕನಗರಾಜ್ ಜತೆ ಸಿನಿಮಾ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾ ಈಗಾಗಲೇ ವಿಶ್ವಾದ್ಯಂತ ಧೂಳೇಬ್ಬಿಸ್ತಿದೆ. ಕೋಟಿ ಕೋಟಿ ಬಾಚಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಂಡಿದೆ. ಯುವ ನಿರ್ಮಾಪಕರ ಪಾಲಿನ ಲಕ್ಕಿಮ್ಯಾನ್ ಆಗಿದ್ದಾರೆ ತಲೈವಾ.

ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾ ಈಗಾಗಲೇ ವಿಶ್ವಾದ್ಯಂತ ಧೂಳೇಬ್ಬಿಸ್ತಿದೆ. ಕೋಟಿ ಕೋಟಿ ಬಾಚಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಂಡಿದೆ. ಯುವ ನಿರ್ಮಾಪಕರ ಪಾಲಿನ ಲಕ್ಕಿಮ್ಯಾನ್ ಆಗಿದ್ದಾರೆ ತಲೈವಾ. ಆದ್ರೆ ಜೈಲರ್ ಸಕ್ಸಸ್ ಬೆನ್ನಲ್ಲೇ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಡೋಕೆ ರೆಡಿಯಾಗಿದ್ದಾರೆ. ರಜನಿಕಾಂತ್ ಮತ್ತು ಲೋಕೇಶ್ ಕನಗರಾಜ್ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್ ತುಂಬಾ ದಿನಗಳಿಂದ ಕೇಳಿಬರ್ತಿತ್ತು. ಆದ್ರೀಗ ಈ ಸುದ್ದಿ ನಿಜವಾಗಿದೆ.
ಸ್ವತಃ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ರಜನಿಕಾಂತ್ರ 171ನೇ ಸಿನಿಮಾ ಬಗ್ಗೆ ಘೋಷಣೆ ಆಗಿದೆ. ‘ಜೈಲರ್’ಗೆ ಸಂಗೀತ ನೀಡಿದ ಅನಿರುದ್ಧ್ ರವಿಚಂದರ್ ಅವರೇ ‘ತಲೈವರ್ 171’ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ತಲೈವಾಗೆ 2023ರ ವರ್ಷ ಸಖತ್ ಸ್ಪೆಷಲ್. ಅವರು ನಟಿಸಿದ ‘ಜೈಲರ್’ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 72ನೇ ವಯಸ್ಸಿನಲ್ಲೂ ಅವರು ಆ್ಯಕ್ಷನ್ ಸಿನಿಮಾ ಮಾಡಿ ಇಷ್ಟು ದೊಡ್ಡ ಗೆಲುವು ಕಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈಗ ರಜನಿಕಾಂತ್ ಅವರ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ಸಿಕ್ಕಿದೆ.
'ಯಶ್-19' ಸಮರ ತಯಾರಿ ಫೈನಲ್: ಗೋವಾ ಡ್ರಗ್ಸ್ ಮಾಫಿಯಾ ಕಥೆಯಲ್ಲಿ ರಾಕಿಭಾಯ್
ಇನ್ನು ವಿಕ್ರಂ ಖ್ಯಾತಿಯ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜನ್ ಜೊತೆ ರಜನಿಕಾಂತ್ ಕೈ ಜೋಡಿಸುತ್ತಿದ್ದಾರೆ. ಇದು ರಜನಿ ನಟನೆಯ 171ನೇ ಸಿನಿಮಾ ಆಗಲಿದೆ. ಇದನ್ನು ತಾತ್ಕಾಲಿಕವಾಗಿ ‘ತಲೈವರ್ 171’ ಎಂದು ಕರೆಯಲಾಗುತ್ತಿದೆ. ಜೈಲರ್ ಚಿತ್ರವನ್ನು ನಿರ್ಮಾಣ ಮಾಡಿದ ‘ಸನ್ ಪಿಕ್ಚರ್ಸ್’ ಸಂಸ್ಥೆಯೇ ‘ತಲೈವರ್ 171’ ಸಿನಿಮಾಗೆ ಬಂಡವಾಳ ಹೂಡಲಿದೆ. ಮಾಹಿತಿ ಪ್ರಕಾರ 2024 ಫೆಬ್ರವರಿಯಲ್ಲಿ ರಜಿನಿ 171ನೇ ಚಿತ್ರ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗಿದೆ. ಇನ್ನು ಲೋಕೇಶ್ ಕನಕರಾಜನ್ ಅವರು ಈ ಹಿಂದೆ ಕಮಲ್ಹಾಸನ್ ಅವರ ಸೂಪರ್ ಹಿಟ್ ವಿಕ್ರಂ ಸಿನಿಮಾಗೆ ಌಕ್ಷನ್ ಕಟ್ ಹೇಳಿದ್ರು, ಕಮಲ್ ಹಾಸನ್ ಅವರ ಈ ವಿಕ್ರಂ ಸಿನಿಮಾ ದೊಡ್ಡ ಹಿಟ್ ಆಗಿತ್ತು,
6 ಫ್ಲಾಪ್ ಕೊಟ್ರೂ ಮುಚ್ಕೊಂಡು ಇವ್ರು ಸಿನಿಮಾ ನೋಡ್ಬೇಕು: ರಜನಿಕಾಂತ್- ಚಿರಂಜೀವಿ ಬಗ್ಗೆ ವಿಜಯ್ ದೇವರಕೊಂಡ ಕೊಂಕು
ಆದ್ರೆ ಈಗ ಇದೇ ನಿರ್ದೇಶಕ ಲೋಕೇಶ್ ಕನಕರಾಜನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಇನ್ನು ಇದು ರಜನಿಕಾಂತ್ ಅವರ ಕೊನೇ ಸಿನಿಮಾ ಆಗಲಿದೆ ಎಂಬ ಗುಮಾನಿ ಕೂಡ ಇದೆ. ‘ತಲೈವರ್ 171’ ಬಳಿಕ ಅವರು ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಗಾಸಿಪ್ ಸಹ ಹರಿದಾಡಿದೆ. ಒಂದು ವೇಳೆ ಅದು ನಿಜವೇ ಹೌದಾದರೆ ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಸೂರ್ಯ, ಕಮಲ್ ಹಾಸನ್, ದಳಪತಿ ವಿಜಯ್ ಮುಂತಾದವರು ನಟಿಸಲಿ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.