RRR Collection; 8ನೇ ದಿನ ರಾಮ್ ಚರಣ್ - ಜೂ.ಎನ್ ಟಿ ಆರ್ ಸಿನಿಮಾ ಗಳಿಸಿದೆಷ್ಟು?
ರಾಜಮೌಳಿ ನಿರ್ದೇಶನದ RRR ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 8ನೇ ದಿನವೂ ಆರ್ ಆರ್ ಆರ್ ಸಿನಿಮಾ ದಾಖಲೆ ಗಳಿಕೆ ಮಾಡಿದೆ. ಹಿಂದಿಯಲ್ಲಿ 2ನೇ ಶುಕ್ರವಾರ ಸಿನಿಮಾ 13 ಕೋಟಿ ಗಳಿಕೆ ಮಾಡಿದೆ.
ಎಸ್ ಎಸ್ ರಾಜಮೌಳಿ(Rajamouli) ಸಾರಥ್ಯದಲ್ಲಿ ಬಂದ ಆರ್ ಆರ್ ಆರ್(RRR) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ 8 ದಿನಗಳು ಕಳೆದಿದ್ದು ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳ್ ಎಬ್ಬಿಸುತ್ತಿದೆ. ವಾರದ ಬಳಿಕವೂ ಉತ್ತಮ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆರ್ ಆರ್ ಆರ್ ಮಾರ್ಚ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಚಿತ್ರ ನೋಡಿ ಆನಂದಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್(Jr NTR and Ram Charans) ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.
ಆರ್ ಆರ್ ಆರ್ ಸಿನಿಮಾ ಹಿಂದಿಯಲ್ಲಿ ಈಗಾಗಲೇ 100 ಕೋಟಿ ರೂಪಾಯಿ(100 crore) ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಸಿನಿಮಾ ಬಿಡುಗಡೆಯಾಗಿ 8ನೇ ದಿನವೂ ಕಲೆಕ್ಷನ್ ಅಬ್ಬರ ಮುಂದುರೆದಿದೆ. ಈ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ಈಗಾಗಲೇ ಅಕ್ಷಯ್ ಕುಮಾರ್ ಸಿನಿಮಾ ಕಲೆಕ್ಷನ್ ಬೀಟ್ ಮಾಡಿ ಮುನ್ನುಗುತ್ತಿದೆ. ವಿಶ್ವದಾದ್ಯಂತ ಆರ್ ಆರ್ ಆರ್ 30 ಕೋಟಿ ಬಾಚಿಸಿಕೊಂಡಿದೆ. ಹಿಂದಿಯಲ್ಲಿ 2ನೇ ಶುಕ್ರವಾರ ಆರ್ ಆರ್ ಆರ್ ಸಿನಿಮಾ 13 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕಲೆಕ್ಷನ್ ವಿಚಾರದಲ್ಲಿ ರಾಜಮೌಳಿ ಸಿನಿಮಾ ರೆಕಾರ್ಡ್ ಮಾಡಿದ್ದು, 2ನೇ ವೀಕೆಂಡ್ ನಲ್ಲಿ ಸಿನಿಮಾ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
7ನೇ ದಿನಕ್ಕೆ ರಾಜಮೌಳಿ ಸಿನಿಮಾ ಒಟ್ಟು 709 ಕೋಟಿ ರೂ. ಬಾಚಿಕೊಂಡಿತ್ತು. 6ನೇ ದಿನಕ್ಕೆ ಆರ್ ಆರ್ ಆರೆ ಕಲೆಕ್ಷನ್ 672.16 ಕೋಟಿ ರೂಪಾಯಿ ಆಗಿತ್ತು. 7ನೇ ದಿನಕ್ಕೆ 700 ಕೋಟಿ ದಾಟುವ ಮೂಲಕ ಇದೀಗ 800 ಕೋಟಿ ಕಡೆ ದಾಪುಗಾಲಿಟ್ಟಿದೆ.
Box Office Collection 6 ದಿನಗಳಲ್ಲೇ ಆರ್‌ಆರ್‌ಆರ್ 611 ಕೋಟಿ ಭರ್ಜರಿ ಗಳಿಕೆ!
ಇನ್ನು ಹಿಂದಿ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ದಾಟಿದ ರಾಜಮೌಳಿ ಅವರ 3ನೇ ಸಿನಿಮಾ ಇದಾಗಿದೆ. ಬಾಹುಬಲಿ 1 ಮತ್ತು 2 ಬಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಆರ್ ಆರ್ ಆರ್ ಸಿನಿಮಾ ಕೂಡ 100 ಕೋಟಿ ದಾಟಿ ಮುನ್ನುಗುತ್ತಿದೆ. ವಿಶೇಷ ಎಂದರೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಬಾಲಿವುಡ್ ನಲ್ಲಿ ಇದು ಮೊದಲ ಶತಕವಾಗಿದೆ.
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಮೊದಲ ದಿನವೇ ದಾಖಲೆ ಗಳಿಕೆ ಮಾಡಿತ್ತು. ಆಂಧ್ರ ಪ್ರದೇಶದಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 14.5 ಕೋಟಿ ರೂ. ಗಳಿಕೆ ಮಾಡಿದ್ರೆ ತಮಿಳುನಾಡಿನಲ್ಲಿ 10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇರಳದಲ್ಲಿ 4 ಕೋಟಿ ರೂ. ಆರ್ ಆರ್ ಆರ್ ಸಿನಿಮಾ ಬಾಚಿಕೊಂಡಿತ್ತು. ಉತ್ತರ ಭಾರತದಲ್ಲಿ 25 ಕೋಟಿ ರೂ. ಭಾರತದಲ್ಲಿ ರಾಜಮೌಳಿ ಸಿನಿಮಾ 156 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ವಿದೇಶದಲ್ಲಿಯೂ ಆರ್ ಆರ್ ಆರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಯು ಎಸ್ ನಲ್ಲಿ 42 ಕೋಟಿ ಕಲೆಕ್ಷನ್ ಮಾಡಿದೆ, ಬೇರೆ ಬೇರೆ ದೇಶಗಳಲ್ಲಿ 25 ಕೋಟಿ ರೂ. ಮೊದಲ ದಿನ ಒಟ್ಟು ಆರ್ ಆರ್ ಆರ್ ಕಲೆಕ್ಷನ್ 223 ಕೋಟಿ ರೂಪಾಯಿ ಆಗಿತ್ತು.
ಹಿಂದಿಯಲ್ಲಿ 100 ಕೋಟಿ ರೂ. ದಾಟಿದ 'RRR' ಗಳಿಕೆ; 5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.