ರಾಜ್‌ ಕುಂದ್ರಾ ನೀಲಿ ಚಿತ್ರ ಕಳಿಸುತ್ತಿದ್ದ ಆ್ಯಪ್‌ ಹಾಟ್‌ ಶಾಟ್ಸ್‌ನೊಳಗೇನಿದೆ ಗೊತ್ತಾ!

ತಾನು ಕಿರು ಜಾಹೀರಾತು ತಯಾರಕ ಎನ್ನುತ್ತಲೇ ಬಂದಿದ್ದ ರಾಜ್‌ ಕುಂದ್ರಾನ ನಿಜ ಬಣ್ಣ ಬದಲಾಗಿದೆ. ಆತ ತನ್ನ ನೀಲಿ ಚಿತ್ರಗಳನ್ನು ಕಳಿಸುತ್ತಿದ್ದ ಹಾಟ್‌ ಶಾಟ್ಸ್‌ ಆಪ್‌ ಎಲ್ಲಿ ಸಿಗುತ್ತೆ, ಅದರೊಳಗೆ ಏನಿದೆ ಅನ್ನೋ ಡೀಟೈಲ್‌ ಇಲ್ಲಿದೆ.

 

Raj Kundras Soft porn app Hotshots

ರಾಜ್‌ ಕುಂದ್ರಾ! ಕಳೆದೆರಡು ದಿನಗಳಿಂದ ಅತೀ ಹೆಚ್ಚು ಸುದ್ದಿಯಲ್ಲಿರುವ ಹೆಸರು. ತಾನು ಜಾಹೀರಾತು ಜಗತ್ತಿನಲ್ಲಿ ಕೆಲಸ ಮಾಡ್ತೀನಿ, ಬ್ಯುಸಿನೆಸ್‌ ಮಾಡ್ತೀನಿ ಅಂತೆಲ್ಲ ಓಳು ಬಿಡುತ್ತಿದ್ದ ಈ ಮಹಾನುಭಾವನ ನಿಜ ಬಣ್ಣ ಇದೀಗ ಬಯಲಾಗಿದೆ.

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿಯೂ ಆಗಿರುವ ರಾಜ್ ಕುಂದ್ರಾನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್ 'ಹಾಟ್ ಶಾಟ್ಸ್' ನ್ನು ಗೂಗಲ್ ಮತ್ತು ಆಪಲ್‌ ಪ್ಲೇ ಸ್ಟೋರ್ ಡಿಲೀಟ್ ಮಾಡಿದೆ. ಇದರ ಜೊತೆಗೆ ರಾಜ್‌ಕುಂದ್ರಾ ಈ ಆ್ಯಪ್‌ ಮೂಲಕ ಹೇಗೆ ಗ್ರಾಹಕರ ಜೊತೆ ಸಂವಹನ ಮಾಡುತ್ತಿದ್ದರು, ಈ ಆಪ್‌ನೊಳಗೆ ಏನಿತ್ತು ಅನ್ನೋ ರಹಸ್ಯ ಇದೀಗ ಬಯಲಾಗಿದೆ.

ನಟಿಯ ಬೆತ್ತಲೆ ಅಡಿಷನ್ ಕೇಳಿದ್ದ ರಾಜ್ ಕುಂದ್ರಾ..!

ರಾಜ್‌ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಈತನ ಸಂಬಂಧಿ ಪ್ರದೀಪ್‌ ಭಕ್ಷಿ ಎಂಬಾತನ ಕೆನ್ರಿನ್‌ ಲಿಮಿಟೆಡ್‌ ಕಂಪನಿ ಇದನ್ನು ಈ ವೀಡಿಯೋವನ್ನು ಆ್ಯಪ್ ಮುಖಾಂತರ ಬಿಡುಗಡೆ ಮಾಡುತ್ತಿತ್ತು. ತಾನೇ ಮುಂಬೈಯಲ್ಲಿ ತಯಾರಿಸಿ ಎಡಿಟ್‌ ಮಾಡುತ್ತಿದ್ದ ಈ ವೀಡಿಯೋವನ್ನು ಭಾರತದಲ್ಲಿ ಅಪ್ ಲೋಡ್ ಮಾಡಲು ಅವಕಾಶವಿಲ್ಲದ ಕಾರಣ ಇದನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿತ್ತು. ಹದಿನೆಂಟು ತಿಂಗಳ ಹಿಂದೆ ಶುರು ಮಾಡಿದ ಈ ದಂಧೆಯಲ್ಲಿ ದಿನಕ್ಕೆ ಲಕ್ಷ ಲಕ್ಷ ಎಣಿಸುತ್ತಿದ್ದರು.

ಒಂದು ವೇಳೆ ಈ ಆ್ಯಪ್‌ ಮೂಲಕ ವೀಡಿಯೋ ಅಪ್ ಲೋಡಿಂಗ್‌ ಸಮಸ್ಯೆ ಆದರೆ ಪ್ಲಾನ್‌ ಬಿಯಾಗಿ ಬಾಲಿಫೇಮ್ ಆ್ಯಪ್‌ ಬಳಸಲಾಗುತ್ತಿತ್ತು. ಫ್ರೀಯಾಗಿ ಸಿಗುತ್ತಿದ್ದ ಈ ಆ್ಯಪ್‌ಗಳು ಸದ್ಯ ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಗೆ ಲಭ್ಯವಿಲ್ಲ. ಆದರೆ ಈಗಾಗಲೇ ಇನ್ ಸ್ಟಾಲ್ ಆಗಿರುವ ಮೊಬೈಲ್ ಗಳಲ್ಲಿ ಮಾತ್ರ ಹಾಟ್ ಶಾಟ್ಸ್ ಆಪ್ ನ ಸಿಗುತ್ತಿದೆ. ಅದನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲು ಸಾಧ್ಯವಾಗಿಲ್ಲ.

ಶಿಲ್ಪಾ ಶೆಟ್ಟಿ ಪತಿ ಜೊತೆ ಪೋರ್ನ್‌ನಲ್ಲಿ ಪೂನಂ, ಶೆರ್ಲಿನ್ ಚೋಪ್ರಾ!

ರಾಜ್‌ಕುಂದ್ರಾ ಈ ಆ್ಯಪ್‌ಅನ್ನು ದುರ್ಬಳಕೆ ಮಾಡುವುದಕ್ಕೂ ಮೊದಲು ಈ ಆ್ಯಪ್‌ನಲ್ಲಿ ಫೋಟೋಶೂಟ್, ಕಿರುಚಿತ್ರ, ಜಗತ್ತಿನ ಪ್ರಸಿದ್ದ ಸಿನೆಮಾ ತಾರೆಗಳ ಜೀವನ ಶೈಲಿ ಕುರಿತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಆದರೆ ಆಗಲೂ ಇದರಲ್ಲಿ ಅಶ್ಲೀಲತೆ ಹೆಚ್ಚಾಗಿತ್ತು ಎಂದು ಇದೀಗ ತಿಳಿದುಬಂದಿದೆ. ಇದರ ಜೊತೆಗೆ ಜಗತ್ತಿನ ವಿವಿಧ ಮಾಡೆಲ್ ಗಳ ಜೊತೆ ಲೈವ್ ಸಂವಾದವನ್ನು ಈ ಆ್ಯಪ್ ಮೂಲಕ ನಡೆಸಬಹುದಿತ್ತು.

ಈ ಆ್ಯಪ್ 'ಮಿಸ್ ಹಾಟ್ ಶಾಟ್ಸ್ ಕಂಟೆಸ್ಟ್ 2019' ನ್ನು ಕೂಡ ನಡೆಸಿತ್ತು. ಕಿರುಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿನ ಕೆಲಸದ ನೆಪದಲ್ಲಿ ಹೊಸ ನಟರನ್ನು ಆಮಿಷಕ್ಕೆ ಒಳಪಡಿಸಲಾಗುತಿತ್ತು. ನಂತರ ಅವರ ಇಚ್ಛೆ ವಿರುದ್ಧವಾಗಿ ನಗ್ನ ಮತ್ತು ಅರೆ-ನಗ್ನ ವೀಡಿಯೋ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸೆಲೆಬ್ರಿಟಿಯೊಬ್ಬರು ರಾಜ್‌ ಕುಂದ್ರಾ ತನ್ನನ್ನು ಅಡಿಶನ್‌ಗೆ ಕರೆದು ನಗ್ನವಾಗಿ ಅಡಿಶನ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣ ಹೆಸರಿನಲ್ಲಿದೆ ಕೋಟಿಗಟ್ಟಲೇ ಆಸ್ತಿ?

ಚಿಕ್ಕಪುಟ್ಟ ನಟರ ಅರೆನಗ್ನ ಚಿತ್ರಗಳನ್ನು ಈ ಹಾಟ್ ಶಾಟ್ಸ್ ಆ್ಯಪ್ ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇದೀಗ ಹಾಟ್ ಶಾಟ್ಸ್ ಗೆ ಲಿಂಕ್ ಆಗಿದ್ದ ವೆಬ್ ಸೈಟನ್ನು ಕೂಡ ಡಿಲೀಟ್ ಮಾಡಲಾಗಿದ್ದು, ಡೇಟಾ ಸಂಗ್ರಹ ಮಾಹಿತಿಯ ಪ್ರಕಾರ ಇದು 2019ರ ಮಾರ್ಚ್ ರಂದು ಯುಕೆಯಲ್ಲಿ ನೋಂದಣಿಯಾಗಿತ್ತು. ತಾನು ಆಪ್ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಳ್ಳದಿದ್ದರೂ ಈ ಆಪ್‌ಗೆ ರಾಜ್‌ಕುಂದ್ರಾ ಹಣಕಾಸಿನ ಸಹಾಯ ಒದಗಿಸುತ್ತಿದ್ದರು ಎಂಬುದು ಮುಂಬೈ ಪೊಲೀಸರು ನೀಡಿದ ಮಾಹಿತಿ.

Latest Videos
Follow Us:
Download App:
  • android
  • ios