ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ಮತ್ತು ಮಕ್ಕಳ ಜೊತೆ ವೀರೇಶ್ ಚಿತ್ರಮಂದಿರಕ್ಕೆ ಬಂದು ಬೆಳಗ್ಗೆ 6ಗಂಟೆಗೆ ಜೇಮ್ಸ್ ಸಿನಿಮಾ ವೀಕ್ಷಿಸಿದರು. ವೀರೇಶ್ ಚಿತ್ರಮಂದಿರದ ಜೊತೆ ವಿಶೇಷ ನಂಟು ಇರುವ ಕಾರಣ ಅಲ್ಲೇ ಅಪ್ಪು ಸಿನಿಮಾ ನೋಡುವುದಾಗಿ ರಾಘಣ್ಣ ಹೇಳಿದರು.

ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ(Puneeth Rajkuma Birthday). ಅಭಿಮಾನಿಗಳ ಪಾಲಿಗೆ ವಿಶೇಷ ದಿನ. ಪ್ರತಿವರ್ಷ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಈ ಬಾರಿ ಅಪ್ಪು ಇಲ್ಲದ ನೋವಿನಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಜನ್ಮದಿನದ ವಿಶೇಷವಾಗಿ ಇಂದು ಜೇಮ್ಸ್(James movie) ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಪವರ್ ಸ್ಟಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ವನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳು ಚಿತ್ರಮಂದಿರಕ್ಕೆ ತೆರಳಿ ಪವರ್ ಸ್ಟಾರ್ ಅನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಂಡಿದ್ದಾರೆ.

ರಾಜ್ಯದಾದ್ಯಂತ ಜೇಮ್ಸ್ ಅದ್ದೂರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಜೊತೆ ರಾಜ್ ಕುಟುಂಬ ಸಹ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ. ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಪತ್ನಿ ಮಂಗಳ ಮತ್ತು ಮಕ್ಕಳ ಜೊತೆ ವೀರೇಶ್ ಚಿತ್ರಮಂದಿರಕ್ಕೆ ಬಂದು ಬೆಳಗ್ಗೆ 6ಗಂಟೆ ಶೋ ವೀಕ್ಷಿಸಿದರು. ರಾಘಣ್ಣ, ಯುವರಾಜ್ ಕುಮಾರ್, ಶ್ರೀಮುರಳಿ ಸೇರಿದಂತೆ ಇಡೀ ಕುಟುಂಬ ವಿರೇಶ್ ಚಿತ್ರಮಂದಿರದಲ್ಲಿ ಅಪ್ಪು ಸಿನಿಮಾ ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಜೊತೆಗೆ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಅಂದಹಾಗೆ ರಾಘಣ್ಣ ಇಡೀ ಕುಟುಂಬದ ಜೊತೆ ವೀರೇಶ್ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಿದ ಕಾರಣವನ್ನು ತಿಳಿಸಿದ್ದಾರೆ. ವೀರೇಶ್ ಚಿತ್ರಮಂದಿರ ಮತ್ತು ರಾಜ್ ಕುಮಾರ್ ಕುಟುಂಬಕ್ಕೆ ವಿಶೇಷವಾದ ನಂಟಿದೆ. ಹಾಗಾಗಿ ರಾಘಣ್ಣ ಅಪ್ಪು ನಟನೆಯ ಕೊನೆಯ ಸಿನಿಮಾವನ್ನು ವೀರೇಶ್ ಚಿತ್ರಮಂದಿರದಲ್ಲೇ ನೋಡಿ ಕಣ್ತುಂಬಿಕೊಂಡಿದ್ದಾರೆ.

James 2022: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಶುರುವಾಗಲಿದೆ 'ಜೇಮ್ಸ್' ಮೇನಿಯಾ!

ರಾಘಣ್ಣ ತನ್ನ ಪ್ರೀತಿಯ ಸಹೋದರ ಅಪ್ಪು ಹುಟ್ಟುಹಬ್ಬವನ್ನು ನಿನ್ನೆ (ಮಾರ್ಚ್ 16) ರಾತ್ರಿಯೇ ಕೇಕ್ ಕತ್ತರಿಸಿ ಆಚರಿಸಿದ್ದಾರೆ. ರಾತ್ರಿ ಅಪ್ಪು ಸಮಾಧಿಗೆ ತೆರಳಿದ್ದ ರಾಘಣ್ಣ ಸಮಾಧಿ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ್ದ ರಾಘವೇಂದ್ರ ರಾಜ್ ಕುಮಾರ್ ಅಪ್ಪು ಸಿನಿಮಾವನ್ನು ವೀರೇಶ್ ಚಿತ್ರಮಂದಿರದಲ್ಲಿ(Veeresh Theatre) ನೋಡುವುದಾಗಿ ತಿಳಿಸಿದ್ದರು. ಜೊತೆಗೆ ಅಲ್ಲೇ ಯಾಕೆ ಸಿನಿಮಾ ವೀಕ್ಷಿಸುತ್ತಿದ್ದೇವೆ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಬಹಿರಂಗ ಪಡಿಸಿದರು.

'ಯಾಕೆ ಅಲ್ಲೇ ಸಿನಿಮಾ ನಡುತ್ತೇವೆ ಎಂದರೆ ಅಣ್ಣನ ಮೊದಲ ಸಿನಿಮಾ, ನನ್ನ ಮೊದಲ ಸಿನಿಮಾ, ಅಪ್ಪು ಮೊದಲ ಸಿನಿಮಾವನ್ನು ತಂದೆ ಅವರು ಅಲ್ಲೇ ವೀಕ್ಷಣೆ ಮಾಡಿದ್ದರು. ಅವರು ಶಿಳ್ಳೆ ಹೊಡೆದುಕೊಂಡು ಸಿನಿಮಾ ವೀಕ್ಷಿಸಿದ್ದರು. ಹಾಗಾಗಿ ಅಲ್ಲೇ ಸಿನಿಮಾ ನೋಡಬೇಕು ಎನ್ನುವುದು ನನ್ನ ಆಸೆ. ಎಲ್ಲೊ ಒಂದು ಕಡೆ ಅಪ್ಪು, ಅಪ್ಪಾಜಿ ಆ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವ ನಂಬಿಕೆ ಇದೆ' ಎಂದು ರಾಘಣ್ಣ ವೀರೇಶ್ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಿದ ಕಾರಣ ತಿಳಿಸಿದ್ದಾರೆ.

James 2022: ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಜೇಮ್ಸ್' ದರ್ಶನ

ಇನ್ನು ಅಪ್ಪು ಬಗ್ಗೆ ಮಾತನಾಡಿದ ರಾಘಣ್ಣ ಪುನೀತ್ ಎಲ್ಲೂ ಹೋಗಿಲ್ಲ, ಜೊತೆಯಲ್ಲೇ ಇದ್ದಾರೆ ಎಂದರು. 'ಅಪ್ಪು ಜೊತೆಯಲ್ಲೇ ಇದ್ದಾರೆ. ಪ್ರತಿಯೊಬ್ಬರ ಅಭಿಮಾನಿಗಳಲ್ಲಿ ಇದ್ದಾರೆ. ಅವರ ಕೂಗು, ಅವರ ಮನಸ್ಸಲ್ಲಿ ಅಪ್ಪು ಇದ್ದೇ ಇದ್ದಾರೆ.' ಎಂದು ರಾಘಣ್ಣ ಕೇಕ್ ಕತ್ತರಿಸಿ ಪ್ರತಿಕ್ರಿಯೆ ನೀಡಿದರು.

ಇನ್ನು ಜೇಮ್ಸ್ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ರಾಘಣ್ಣ ಫುಲ್ ಖುಷ್ ಆಗಿದ್ದಾರೆ. ಅಪ್ಪಾಜಿ ,ಅಪ್ಪು ಇಬ್ಬರು ಮೇಲೆ ಕುಳಿತುಕೊಂಡು ಸಿನಿಮಾ ವೀಕ್ಷಿಸುತ್ತಿದ್ದಾರೆ ಎಂದು ರಾಘಣ್ಣ ಜೇಮ್ಸ್ ನೋಡಿ ಪ್ರತಿಕ್ರಿಯೆ ನೀಡಿದರು. ಇನ್ನು ನಟ ಶಿವರಾಜ್ ಕುಮಾರ್ ಸಹ ಇಂದು ಜೇಮ್ಸ್ ಸಿನಿಮಾ ವೀಕ್ಷಿಸಲಿದ್ದಾರೆ. ಇಂದು ಸಂಜೆ ಶಿವಣ್ಣ ಕುಟುಂಬದ ಜೊತೆ ಸಿನಿಮಾ ನೋಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.