Asianet Suvarna News Asianet Suvarna News

150 ಮಕ್ಕಳನ್ನು ದತ್ತು ಪಡೆದ ನಟ ರಾಘವ್; ಅಪರೂಪಕ್ಕೆ ಕಾಮೆಂಟ್ ಮಾಡಿದ ಅಲ್ಲು ಅರ್ಜುನ್

ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ನಟ ರಾಘವ್ ಲಾರೆನ್ಸ್‌. ಕೆಲಸ ಮೆಚ್ಚಿ ಕಾಮೆಂಟ್ ಮಾಡಿದ ಅಲ್ಲು.... 

Raghava Lawrence adopts 150 children and provide education for free Allu Arjun comments vcs
Author
First Published Apr 14, 2023, 2:03 PM IST | Last Updated Apr 14, 2023, 2:03 PM IST

ತಮಿಳು-ತೆಲುಗು ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ಕೋರಿಯೋಗ್ರಾಫರ್ ಆಗಿ ಹೆಸರು ಮಾಡಿರುವ ರಾಘವ್ ಲಾರೆನ್ಸ್‌ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಸುಮಾರು 150 ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ವಿದ್ಯಾಭ್ಯಾಸ ಒದಗಿಸುವ ಭರವಸೆ ಕೊಟ್ಟಿದ್ದಾರೆ. ರಾಘವ್ ಮತ್ತು ಮಕ್ಕಳು ಕ್ಲಿಕ್ ಮಾಡಿಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋಗೆ ನಟ ಅಲ್ಲು ಅರ್ಜುನ್‌ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಟ್ವಿಟರ್‌ನಲ್ಲಿ ಆಕ್ಟಿವ್ ಆಗಿರುವ ರಾಘವ್ ಲಾರೆನ್ಸ್‌ ಒಂದಷ್ಟು ಮಕ್ಕಳ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡು '150 ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿಯನ್ನು ಹೊತ್ತಿರುವೆ. ನಮ್ಮ ಹೊಸ ಸಂಸ್ಥೆ ರುಧ್ರ ಆಡಿಯೋ ಲಾಂಚ್‌ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಈ ಖುಷಿ ಸುದ್ದಿಯನ್ನು ನಿಮ್ಮ ಜೊತೆ ಹೆಮ್ಮೆಯಿಂದ ಹಂಚಿಕೊಳ್ಳುತ್ತಿರುವೆ. ಹೀಗಾಗಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ' ಎಂದು ರಾಘವ್ ಬರೆದುಕೊಂಡಿದ್ದಾರೆ. ನಿಮ್ಮದು ಗೋಲ್ಡನ್ ಹಾರ್ಟ್‌ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನಟನು ಈ ಹಿಂದೆ ತನ್ನ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಅನೇಕ ಮಕ್ಕಳು ಮತ್ತು ಯುವಕರನ್ನು ಬೆಂಬಲಿಸಿದ್ದಾರೆ. 

150 ಕ್ಕೂ ಹೆಚ್ಚು ಜನರಿಗೆ ಹಾರ್ಟ್ ಸರ್ಜರಿ ಮಾಡಿಸಿದ ಈ ನಟನಿಗೊಂದು ಸಲಾಂ!

ಲಾರೆನ್ಸ್‌ ಮುಂದಿನ ರುಧ್ರುಡು ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಈ ಸಿಹಿ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ. ಈ ವೇಳೆ ತೆಲುಗು ಮಾತನಾಡುವ ಮಕ್ಕಳ ವಿದ್ಯಾಭ್ಯಾಸ ಕಷ್ಟ ಪಡುತ್ತಿದ್ದರೆ ಅಥವಾ ಹೃದಯ ಸಮಸ್ಯೆ ಇದ್ದು ಚಿಕಿತ್ಸೆಗೆ ಕಷ್ಟ ಪಡುತ್ತಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ ಎಂದು ಲಾರೆನ್ಸ್‌ ವೇದಿಕೆ ಮಾತನಾಡಿದರು. ಲಾರೆನ್ಸ್‌ ಫೋಟೋ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಟ ಅಲ್ಲು ಅರ್ಜುನ್ 'Respect' ಎಂದು ಕಾಮೆಂಟ್ ಮಾಡಿದ್ದಾರೆ. 

ಸಾಮಾಜ ಸೇವೆ ಹೊರತು ಪಡಿಸಿ ನೋಡಿದರೆ ಲಾರೆನ್ಸ್‌ VA Duari ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ. ರಜನಿಕಾಂತ್ ಮತ್ತು ಸೂರ್ಯ ಕೂಡ ಸಹಾಯ ಮಾಡಿದ್ದು. ನಿರ್ಮಾಪಕರು ಆದಷ್ಟು ಬೇಗ ಚೇತರಿಸಿಕೊಳ್ಳಬೇಕು ಎಂದು ಮೂರು ಲಕ್ಷ ಹಣವನ್ನು ನೀಡುವ ಮೂಲಕ ಅವರ ಔಷಧಿಗಳನ್ನು ನೋಡಿಕೊಂಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ VA Duari ಅನಾರೋಗ್ಯದಿಂದ ಬಳಲುತ್ತಿದ್ದು ಸಹಾಯ ಮಾಡಲು ಯಾರೂ ಇಲ್ಲವೆಂದು ಸ್ನೇಹಿತರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಕಾಲಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಸಹಾಯ ಬೇಡುತ್ತಿರುವ ವಿಡಿಯೋವನ್ನು ಅವರ ಸ್ನೇಹಿತರು ಶೇರ್ ಮಾಡಿಕೊಂಡಿದ್ದಾರೆ. 

ನಟ ಅಕ್ಷಯ್‌ಗೆ ಆ್ಯಕ್ಷನ್ ಕಟ್ ಹೇಳಿದ ಇವರು ಹಿಂದೊಮ್ಮೆ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿದ್ರು..!

ಕೋವಿಡ್‌ನಲ್ಲೂ ಸಹಾಯ ಮಾಡಿದ ನಟ:

ನಟ ರಾಘವ್‌ ಲಾರೆನ್ಸ್‌ 3 ಕೋಟಿ ಹಣವನ್ನು ಪರಿಹಾರ ನಿಧಿಗೆ  ನೀಡಿದ್ದರು. ಈ 3 ಕೋಟಿ ಎಲ್ಲರಿಗೂ ಸಮಾನವಾಗಿ ಸಿಗಬೇಕೆಂದು ತೀರ್ಮಾನಿಸಿ 50 ಲಕ್ಷ ರೂ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ, 50 ಲಕ್ಷ ರೂ. ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ, 50 ಲಕ್ಷ ರೂ ಸಿನಿಮಾ ಕಾರ್ಮಿಕರ ಒಕ್ಕೂಟಕ್ಕೆ, 50 ಲಕ್ಷ ರೂ. ತಮಿಳು ನಾಡು ನೃತ್ಯಗಾರರ ಒಕ್ಕೂಟಕ್ಕೆ, 25 ಲಕ್ಷ ರೂ. ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ ಹಾಗೂ 75 ಲಕ್ಷ ರೂ. ನಿರ್ಗತಿಕರಿಗೆ ಆಹಾರ ಪೂರೈಸಲು  ನೀಡಿದ್ದರು.

 

Latest Videos
Follow Us:
Download App:
  • android
  • ios