Asianet Suvarna News Asianet Suvarna News

ತಾಜಾ ತಾಜಾ ಮಲ್ಲಿಗೆ, ಚೆಂಡು ಹೂವುಗಳಿಂದ ರಾಧಿಕಾ ದುಪ್ಪಟ್ಟಾ, ಆಭರಣ! ಘಮಘಮಿಸಿದ ಮದುಮಗಳ ಝಲಕ್​...

ಮುಖೇಶ್​ ಅಂಬಾನಿ ಅವರ ಭಾವಿ ಸೊಸೆ ರಾಧಿಕಾ ಮರ್ಚೆಂಟ್​ ಅವರ ಅರಿಶಿಣ ಕಾರ್ಯಕ್ರಮದಲ್ಲಿಲ ರಾಧಿಕಾ ಅವರ ಲೆಹಂಗಾ ದುಪ್ಪಟ್ಟಾ ಮತ್ತು  ಆಭರಣಗಳ ಸೊಗಸು ಹೀಗಿತ್ತು... 
 

Radhika Merchant adorns phoolon ki chadar with fresh mogras marigolds suc
Author
First Published Jul 10, 2024, 12:03 PM IST

ಈಗ ಎಲ್ಲೆಲ್ಲೂ ಮುಖೇಶ್​ ಮತ್ತು ನೀತಾ ಅಂಬಾನಿ ಪುತ್ರ ಅನಂತ್​ ಮತ್ತು ರಾಧಿಕಾ ಮರ್ಚೆಂಟ್​ ಅವರ ಮದುವೆಯ ವಿಷಯವೇ. ಕಳೆದ ಜೂನ್​ 29ರಿಂದ ಆರಂಭವಾಗಿರುವ ಈ ಮದುವೆ ಸಡಗರದಲ್ಲಿ ದಿನಕ್ಕೊಂದರಂತೆ ಹೊಸತು ಇರುತ್ತಿವೆ. ಇದೇ 12ರಂದು ಮದುವೆ ನಡೆಯಲಿದ್ದು, ಅಲ್ಲಿಯವರೆಗೂ ವಿಶ್ವಾದ್ಯಂತ ಅಂಬಾನಿ ಪುತ್ರನ ಮದುವೆಯ ಸುದ್ದಿಯೇ ಸುದ್ದಿ. ಮದುವೆಪೂರ್ವ ಸಮಾರಂಭ ಶುರುವಾದಾಗಿನಿಂದಲೂ ಒಂದೊಂದೇ ವಿಡಿಯೋಗಳು ವೈರಲ್​ ಆಗುತ್ತಿವೆ. ಇದಾಗಲೇ ಮದುವೆಪೂರ್ವ ಹಲವಾರು ಸಮಾರಂಭಗಳು ನಡೆದಿದ್ದು, ಮದುವೆಗೆ ಇನ್ನೆರಡೇ ದಿನ ಬಾಕಿ ಇವೆ. ಇದೀಗ ರಾಧಿಕಾ ಮರ್ಚೆಂಟ್​ ಧರಿಸಿದ್ದ ಲೆಹಂಗಾದ ದುಪ್ಪಟ್ಟಾ ಮತ್ತು ಆಭರಣಗಳು ಸಕತ್​ ವೈರಲ್​ ಆಗಿದೆ.

ಹೌದು. ಈ ದುಪ್ಪಟ್ಟಾ ಮತ್ತು ಕೆಲವು ಆಭರಣಗಳು ಸಂಪೂರ್ಣವಾಗಿ ತಾಜಾತಾಜಾ ಮಲ್ಲಿಗೆ ಮತ್ತು ಚೆಂಡು ಹೂವುಗಳಿಂದ ಅಲಂಕರಿಸಲಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಿದೆ.  ರಾಧಿಕಾ ಇಡೀ ಕಾರ್ಯಕ್ರಮದಲ್ಲಿ ಘಮಘಮಿಸುತ್ತಿದ್ದಾರೆ. ಅತ್ಯದ್ಭುತವಾಗಿ ಈ ದುಪ್ಪಟ್ಟಾ ಮತ್ತು ಆಭರಣಗಳನ್ನು ತಯಾರು ಮಾಡಲಾಗಿದೆ. ಕೆಜಿಗಟ್ಟಲೆ ಮಲ್ಲಿಗೆ  ಮತ್ತು ಚೆಂಡು ಹೂವುಗಳನ್ನು ದುಪ್ಪಟ್ಟಾಕ್ಕೆ ಬಳಸಲಾಗಿದೆ. ಮಲ್ಲಿಗೆ ಹೂವುಗಳು ದುಪ್ಪಟ್ಟಾ ಅಲಂಕಿಸಿದ್ದರೆ, ಬಾರ್ಡರ್​ಗೆ ಚೆಂಡುಹೂವುಗಳನ್ನು ಜೋಡಿಸಲಾಗಿದೆ. ಜೊತೆಗೆ ಆಭರಣಗಳಿಗೂ ತಾಜಾ  ಮಲ್ಲಿಗೆ ಹೂವುಗಳ ಟಚ್​ ಕೊಡಲಾಗಿದೆ. ಇದು ನಿಜವಾದ ಹೂವುಗಳು ಎಂದು ಹೇಳಿದರೆ ಸುಲಭದಲ್ಲಿ ಯಾರೂ ಒಪ್ಪದ ರೀತಿಯಲ್ಲಿ ಡಿಸೈನ್​ ಮಾಡಲಾಗಿದೆ.  

ಅಂಬಾನಿ ಫ್ಯಾಮಿಲಿ ಮದುವೆ ಡಾನ್ಸ್​ ಮಾಡಿದ್ರೆ ಇದು 'ಜಿಯೋ ರಿಚಾರ್ಜ್'​ ಖುಷಿ ಅಂತಿದ್ದಾರಲ್ಲ ತರ್ಲೆ ಕಮೆಂಟಿಗರು?
 
ಅಷ್ಟಕ್ಕೂ ಈ ದುಪ್ಪಟ್ಟಾ ಅನ್ನು ಮೊನ್ನೆ ಅಂದರೆ ಜುಲೈ 8ರಂದು ನಡೆದ ಅರಿಶಿಣ  ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ತೊಟ್ಟಿದ್ದರು. ಹಳದಿ ಲೆಹೆಂಗಾ ಇದಾಗಿದ್ದು, ಮಲ್ಲಿಗೆ ಹೂವುಗಳಿಂದ ದುಪಟ್ಟಾ ಅಲಂಕಿಸಲಾಗಿದೆ. ಹಳದಿ ಲೆಹಂಗಾಕ್ಕೆಮ್ಯಾಚ್​ ಆಗುವಂತೆ ಹಳದಿ ಚೆಂಡು ಹೂವುಗಳನ್ನು ಪೋಣಿಸಲಾಗಿದೆ.  ಹೂವಿನ ದುಪಟ್ಟಾ, ಜ್ಯುವೆಲರಿ ಧರಿಸಿ ರಾಧಿಕಾ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನು ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ ಕಪೂರ್ ಅವರು  ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್​  ಆಗಿದೆ. 

ಅಷ್ಟಕ್ಕೂ ಈ ಡ್ರೆಸ್​ ಅನ್ನು, ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದಾರೆ.   ಇನ್‌ಸ್ಟಾಗ್ರಾಮ್‌ನಲ್ಲಿ ಹಲ್ದಿ ಫೋಟೋಗಳನ್ನು ಹಂಚಿಕೊಂಡ ರಿಯಾ ಕಪೂರ್, ''ನಿಜವಾದ ಫೂಲ್ ದುಪಟ್ಟಾದಲ್ಲಿ ನನ್ನ ರಾಧಿಕಾ ಮರ್ಚೆಂಟ್'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ರಾಧಿಕಾರ ದುಪಟ್ಟಾ, ಮಲ್ಲಿಗೆ ಹೂವಿನ ಮೊಗ್ಗುಗಳಿಂದ ಅಲಂಕರಿಸಲ್ಪಟ್ಟಿದೆ. ದುಪ್ಪಟ್ಟಾದ  ಬಾರ್ಡರ್ ಹಳದಿ ಚೆಂಡು ಹೂವುಗಳಿಂದ ಮಾಡಲ್ಪಟ್ಟಿದೆ.  ದುಪಟ್ಟಾ ಮಾತ್ರವಲ್ಲದೇ, ಆಭರಣಗಳೂ ಸಹ ಹೂವಿನಿಂದಲೇ ಮಾಡಲ್ಪಟ್ಟಿವೆ. ಕೆಂಪು ಬಿಂದಿ ಮತ್ತು   ಲಿಪ್​ಸ್ಟಿಕ್​​ ವಧುವಿನ ಕಳೆ ಹೆಚ್ಚಿಸಿದೆ ಎಂದು ವಿನ್ಯಾಸಕಿ ಇದರ ವರ್ಣನೆ ಮಾಡಿದ್ದಾರೆ. ಅಂದಹಾಗೆ, ಮುಂಬೈ-ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12ರಂದು ರಾಧಿಕಾ ಮತ್ತು ಅನಂತ್ ಅಂಬಾನಿ ಸಪ್ತಪದಿ ತುಳಿಯಲಿದ್ದಾರೆ. ಜೂನ್ 29ರಂದು ಅಂಬಾನಿಯ ಐಷಾರಾಮಿ ಆಂಟಿಲಿಯಾ ನಿವಾಸದಲ್ಲಿ ಪೂಜಾ ಸಮಾರಂಭದೊಂದಿಗೆ ವಿವಾಹಪೂರ್ವ ಉತ್ಸವಗಳು ಪ್ರಾರಂಭವಾದವು. ನಂತರ, ಜುಲೈ 3ರಂದು 'ಮಾಮೆರು' ಸಮಾರಂಭ ನಡೆಯಿತು. ಜುಲೈ 5ರಂದು ಅದ್ಧೂರಿ ಸಂಗೀತ ಸಮಾರಂಭ ಜರುಗಿದ್ದು, ಬಹುತೇಕ ಬಾಲಿವುಡ್​ ಗಣ್ಯರು ಪಾಲ್ಗೊಂಡಿದ್ದರು. 

ಪರಿಸರ ಪ್ರೇಮ ಬಿತ್ತುವ ರಥದಲ್ಲಿ ಪ್ಲಾಸ್ಟಿಕ್​ ಗಿಡ-ಮರಗಳಾ? ಅಂಬಾನಿ ಪುತ್ರನ ಮದ್ವೆಯಲ್ಲಿ ಇದೆಂಥ ಅಪಸ್ವರ?

Latest Videos
Follow Us:
Download App:
  • android
  • ios