LIVE: Bidar Elections 2024: ಬೀದರ್ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪರ ಅಲೆ
ಬೀದರ್ ನಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ.
ಬೀದರ್ (ಮೇ.7): ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ. ಬೀದರ್ ನಲ್ಲಿ ಸಂಜೆ 5 ಗಂಟೆವರೆಗೆ ಶೇ. 60.17 ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆವರೆಗೆ ಶೇ.49.89ರಷ್ಟು ಮತದಾನವಾಗಿದೆ. ಮಧ್ಯಾಹ್ನ 1 ಗಂಟೆಗೆ ವೇಳೆಗೆ ಶೇ..41.5ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆಯವರೆಗೆ ಶೇ. 22.33ರಷ್ಟು ಮತದಾನವಾಗಿತ್ತು. ಬೆಳಗ್ಗೆ 9 ಗಂಟೆವರೆಗೆ ಶೇ. 8.90ರಷ್ಟು ಮತದಾನವಾಗಿತ್ತು.
ಬೀದರ್ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪರ ಅಲೆ ಇದೆ. ಕೈ ಅಭ್ಯರ್ಥಿ ಸಾಗರ್ ಖಂಡ್ರೆ ಗೆದ್ದೇ ಗೇಲ್ತಾರೆ. ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಾದ್ಯಂತ ಜನರು ಯುವಕ ಸಾಗರ್ ಖಂಡ್ರೆ ಗೆಲ್ಲಿಸಬೇಕು ಅಂತಾ ನಿಶ್ಚಯಿಸಿದ್ದಾರೆ. ಯುವಕನಾಗಿರೋ ಸಾಗರ್ ಖಂಡ್ರೆ ಉತ್ತಮ ಕೆಲಸ ಮಾಡ್ತಾನೆ ಅಂತಾ ವಿಶ್ವಾಸ ಇದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೇಲ್ತಾರೆ ಎಂದರು.
ಎಐಸಿಸಿ ಹಿರಿಯ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ ಮತ ಚಲಾವಣೆ. ಬೀದರ್ ನಗರದ ಹಿರಾಲಾಲ ಪನ್ನಾಲಾಲ ಕಾಲೇಜಿನ ಮತಗಟ್ಟೆ ಸಂಖ್ಯೆ127 ರಲ್ಲಿ ಮತದಾನ. ಸುಡು ಬಿಸಿಲಿನಲ್ಲಿ ಕೊಡೆ ಹಿಡಿದುಕೊಂಡು ಬಂದ ಹಿರಿಯ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ.
ಧನ್ನೂರಾ ಗ್ರಾಮದಲ್ಲಿ ಕೆಎಸ್ಆರ್ಪಿ ತುಕುಡಿ ನಿಯೋಜನೆ. ಏಕಕಾಲಕ್ಕೆ ಮತಗಟ್ಟೆಗೆ ನುಗ್ಗಲು ಬಿಜೆಪಿ ಕಾರ್ಯಕರ್ತರ ಪ್ರಯತ್ನ. ಈ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ. ಉಭಯ ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ. ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು.
ಹಾಕಕೂಡ ಶ್ರೀಗಳಿಂದ ಮತದಾನ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಮಠ. ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಮತದಾನ. ಗ್ರಾಮದ ಮತಗಟ್ಟೆ ಸಂಖ್ಯೆ 240ಕ್ಕೆ ತೆರಳಿ ಹಕ್ಕು ಚಲಾಯಿಸಿದ ಶ್ರೀಗಳು.
ಒಟ್ಟು ಮತದಾರರು: 18,92,962
ಪುರುಷ ಮತದಾರರು :9,71,424
ಮಹಿಳಾ ಮತದಾರರು : 9,21,435
ಮೊದಲ ಬಾರಿ ಮತದಾನ: 42,404
India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ ...
ಕ್ಷೇತ್ರದಲ್ಲಿ ಒಟ್ಟು 2024 ಮತಗಟ್ಟೆಗಳಿವೆ. 2024 ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿವಯ ನೀರು, ವಿಕಲಚೇತನರಿಗೆ ರೇಲಿಂಗ್, ರ್ಯಾಂಪ್ ನೆರಳಿನ ವ್ಯವಸ್ಥೆ ಮಾಡಲಾಗಿದೆ. 5046 ಬ್ಯಾಲೆಟ್, 2743 ಕಂಟ್ರೋಲ್ ಯುನಿಟ್, 2908 ವಿವಿಪ್ಯಾಟ್ ಗಳ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳು ಮತದಾನ ಕೇಂದ್ರಕ್ಕೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. 1724 ಪಿಆರ್ಒ, 1724 ಪಿಒ, 6896 ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಎಸ್ಪಿ ಚನ್ನಬಸವಣ್ಣ ಎಸ್.ಎಲ್ ನೇತೃತ್ಚದಲ್ಲಿ ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿದೆ. ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿ ಸಿವಿಲ್ ಪೋಲಿಸ್ 1141, ಡಿಎಆರ್ 160, KSRP, ಗೃಹ ರಕ್ಷಕ ದಳ ಸಿಬ್ಬಂದಿ, ಅರಣ್ಯ ಸಿಬ್ಬಂದಿಗೆ ಭದ್ರತೆ ನಿಯೋಜನೆ. ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಮೇ 7 ರಾತ್ರಿ 12 ಗಂಟೆವರಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮತದಾನದ ಮುಗಿದ ಬಳಿಕ ಬಿವಿಬಿ ಕಾಲೇಜಿನ ಸ್ಟ್ರಾಂಗ್ ರೂಮ್ ನಲ್ಲಿ ಭದ್ರಗೊಳಿಸಲಾಗುವುದು. ಒಟ್ಟು ೮ ವಿಧಾನಸಭೆ ಕ್ಷೇತ್ರದ ಇವಿಎಮ್ಗಳು ಬೀದರ್ ನಗರದ ಬಿವಿಬಿ ಕಾಲೇಜ್ ಸ್ಟ್ರಾಂಗ್ ರೂಮ್ ನಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ.