Asianet Suvarna News Asianet Suvarna News

'ಪುಷ್ಪಕ ವಿಮಾನ' ಚಿತ್ರಕ್ಕೆ 35 ವರ್ಷದ ಸಂಭ್ರಮ; ಹೃದಯಸ್ಪರ್ಶಿ ಸಾಲು ಹಂಚಿಕೊಂಡ ಕಮಲ್ ಹಾಸನ್

ಸಕಲಕಲಾ ವಲ್ಲಭ ಕಮಲ್ ನಟನೆಯ ಸೂಪರ್ ಹಿಟ್ ಪುಷ್ಪಕ ವಿಮಾನ ಸಿನಿಮಾಗೆ 35 ವರ್ಷದ ಸಂಭ್ರಮ. ಕಮಲ್ ಹಾಸನ್ ಭಾವುಕ ಸಾಲು ಹಂಚಿಕೊಂಡಿದ್ದಾರೆ.  

pushpaka vimana turns 35 and Kamal Haasan pens heartfelt note for director Singeetham Srinivasa Rao sgk
Author
First Published Nov 28, 2022, 1:28 PM IST

ಸಕಲಕಲಾ ವಲ್ಲಭ ಕಮಲ್ ನಟನೆಯ ಸೂಪರ್ ಹಿಟ್ ಪುಷ್ಪಕ ವಿಮಾನ ಸಿನಿಮಾಗೆ 35 ವರ್ಷದ ಸಂಭ್ರಮ. ಕಮಲ್ ಹಾಸನ್ ವೃತ್ತಿ ಜೀವನಕ್ಕೆ ಮತ್ತಷ್ಟು ಮೈಲೇಜ್ ತಂದುಕೊಟ್ಟ ಸಿನಿಮಾವಿದು. ವಿಶೇಷ ಎಂದರೆ ಈ ಸಿನಿಮಾ ಮೂಕಿ ಚಿತ್ರ. ಚಿತ್ರದಲ್ಲಿ ಒಂದೇ ಒಂದು ಮಾತು ಇಲ್ಲ. ಕಮಲ್ ಹಾಸನ್ ಅಕ್ಟಿಂಗ್ ಅಭಿಮಾನಿಗಳ ಹೃದಯ ಗೆದ್ದಿತ್ತು. ವಿಭಿನ್ನ ಮತ್ತು ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಲು ಕಮಲ್ ಹಾಸನ್ ಯಾವಾಗಲೂ ಸಿದ್ಧರಿರುತ್ತಾರೆ. ಅನೇಕ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಕಮಲ್ ಹಾಸನ್ ಪುಷ್ಪಕ ವಿಮಾನ ಎಲ್ಲಾ ಸಿನಿಮಾಗಳಿಂದ ವಿಭಿನ್ನ ಎಂದರೆ ತಪ್ಪಲ್ಲ. ಖ್ಯಾತ ನಿರ್ದೇಶಕ ಸಂಗೀತಂ ಶ್ರೀನಿವಾಸ ರಾವ್ ಅವರ ಸಾರಥ್ಯದಲ್ಲಿ ಬಂದ ಈ ಸಿನಿಮಾ ಆ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸುಮಾರು 35 ಲಕ್ಷ ರೂಪಾಯಿನಲ್ಲಿ ತಯಾರಾಗಿದ್ದ ಈ ಸಿನಿಮಾ ಬರೋಬ್ಬರಿ 1 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದಿತ್ತು. ಪುಷ್ಪಕ ವಿಮಾನ ಮೂಲತಃ ಕನ್ನಡದಲ್ಲಿ ತಯಾರಾದ ಸಿನಿಮಾ. ಬಳಿಕ  ಅನೇಕ ಭಾಷೆಯಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಪುಷ್ಪಕ ವಿಮಾನ ಹೆಸರಿನಲ್ಲಿ ರಿಲೀಸ್ ಆದರೆ ಹಿಂದಿಯಲ್ಲಿ ಪುಷ್ಪಕ್ ಹೆಸರಿನಲ್ಲಿ ರಿಲೀಸ್ ಆಗಿತ್ತು. 

ಸದ್ಯ ಈ ಸಿನಿಮಾ 35 ವರ್ಷಗಳನ್ನು ಪೂರೈಸಿದೆ. 1987 ನವೆಂಬರ್ 27ರಂದು ರಂದು ಪುಷ್ಪಕ ವಿಮಾನ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಅಮಲಾ ಅಕ್ಕಿನೇನಿ, ಟಿನು ಆನಂದ್, ಪ್ರತಾಪ್ ಪೋತನ್ ಮತ್ತು ಫರೀದಾ ಜಲಾಲ್ ಸೇರಿದಂತೆ ಅನೇಕರು ನಟಿಸಿದ್ದರು. ತನ್ನ ವೃತ್ತಿ ಜೀವನದ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದ ಪುಷ್ಪಕ ವಿಮಾನ ಸಿನಿಮಾದ ಬಗ್ಗೆ ಭಾವುಕ ಸಾಲು ಹಂಚಿಕೊಂಡಿದ್ದಾರೆ. 35 ವರ್ಷ ಪೂರೈಸಿದ ಈ ಸಮಯದಲ್ಲಿ ಕಮಲ್ ಹಾಸನ್ ಶೇರ್ ಮಾಡಿರುವ ಸಾಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Kantara ಸಿನಿಮಾ ವೀಕ್ಷಿಸಿದ ಕಮಲ್ ಹಾಸನ್; ರಿಷಬ್ ಶೆಟ್ಟಿ ಬಗ್ಗೆ ಹೇಳಿದ್ದೇನು?

'ಪುಷ್ಪಕ್ ಎಂಬ ನಮ್ಮ ಪ್ರಯತ್ನ ಈಗ ನಮಗಿಂತ ದೊಡ್ಡದಾಗಿದೆ. ಇದೀಗ 35 ವರ್ಷ ಕಳೆಯಿತು. ಸರ್ ನಾವು ನಮ್ಮ ಕಲೆಗೆ ವಯಸ್ಸಾಗದಂತೆ ನೋಡಿಕೊಳ್ಳಬೇಕು. ನೀವು ನಕ್ಕಿದ್ದೀರಿ ಎಂದು ನನಗೆ ಗೊತ್ತಿದೆ. ಇದು ನನ್ನ ನೆಚ್ಚಿನ ಸಂಗೀತ' ಎಂದು ಕಮಲ್ ಹಾಸನ್ ಬರೆದುಕೊಂಡಿದ್ದಾರೆ. 

ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಪುಷ್ಪಕ ವಿಮಾನ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದು ಬೀಗಿತ್ತು. ಅಂದಹಾಗೆ ಸಿನಿಮಾವ ನಿರ್ಧಾರವನ್ನು 1981ರಲ್ಲೇ ಮಾಡಿದ್ದರು ಕಮಲ್ ಹಾಸನ್ ಮತ್ತು ಸಿಂಗೀತಂ. ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ರಿವೀಲ್ ಮಾಡಿದ್ದರು. 'ನಾವು ರಾಜ ಪಾರ್ವೈ ಸಿನಿಮಾ ಮಾಡುವಾಗ ಮೊದಲು ತಮ್ಮ ಕಲ್ಪನೆ ವಿವರಿಸಿದರು. ಆದರೆ ಬಳಿಕ ಅವರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದರು. ಈ ಚಿತ್ರಕ್ಕೆ ಮೊದಲ ಅದೈತಂ ಎಂದು ಹೆಸರಿಡಲಾಗಿತ್ತು. ಹಾಗೆ ಇಟ್ಟರೆ ಕಲಾತ್ಮಕ ಸಿನಿಮಾವಾಗುತ್ತದೆ ಎಂದು ಯೋಚಿಸಿದೆ. ಎಲ್ಲಾ ಸಿನಿಮಾಗಳು ಕಲಾತ್ಮಕ ಸಿನಿಮಾಗಳೇ. ಆದರೆ ನಾನು ಚಾರ್ಲಿ ಚಾಪ್ಲಿನ್ ಅವರ ಸಿನಿಮಾಗಳನ್ನು ಹೋಲುವ ಮನರಂಜನೆ ಮತ್ತು ಫನ್ ಇರುವ ಹಾಗೆ ಯಾಕೆ ಮಾಡಬಾರದು ಎಂದು ಹೇಳಿದೆ. ನಾನು ಕೂಡ ಈ ಸಿನಿಮಾದ ರಚನೆಯಲ್ಲಿ ಒಬ್ಬನಾಗಿದ್ದೇನೆ' ಎಂದು ಹೇಳಿದ್ದರು.

Shruti Haasan Nepotism ಕಮಲ್‌ ಹಾಸನ್‌ ಮಗಳಿಗೆ ಅವಕಾಶ ಸಿಗುತ್ತೆ ಆದ್ರೆ ಉಳಿಯಲು ಜಾಗ ಸಿಗಲ್ಲ

ಕಮಲ್ ಹಾಸನ್ ಸದ್ಯ ಇಂಡಿಯ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ವರ್ಷಗಳೇ ಆಗಿದೆ. ಆದರೆ ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿತ್ತು. ಇದೀ ಮತ್ತೆ ಚಿತ್ರಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿದ್ದು ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕಮಲ್ ಹಾಸನ್ ಕೊನೆಯದಾಗಿ ವಿಕ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿತ್ತು.   

Follow Us:
Download App:
  • android
  • ios