ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ಅವರ ತಂದೆ ಮಸೀದಿಯಲ್ಲಿ ಹಾಡ್ತಿದ್ರು ಎಂಬುದು ನಿಮಗೆ ಗೊತ್ತಾ..?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಪುಸ್ತಕ ಅನ್ಫಿನಿಶ್ಡ್ನ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಜೀವನದ ಒಂದೊಂದೇ ಅಚ್ಚರಿಯ ಸಂಗತಿಗಳು ಹೊರ ಬರುತ್ತಿವೆ.

ಇತ್ತೀಚೆಗೆ ನಟಿ ಕೊಟ್ಟ ಸಂದರ್ಶನವೊಂದರಲ್ಲಿ ಧರ್ಮ, ಜಾತ್ಯಾತೀತ ಸಮಾಜ, ಅಲ್ಲಿ ಬೆಳೆಯುವ ಮಕ್ಕಳು, ಅವರ ಮೇಲಾಗುವ ಪ್ರಭಾವಗಳ ಬಗ್ಗೆಯೂ ಮಾತನಾಡಿದ್ದಾರೆ.

20 ವರ್ಷದ ನಿಕ್ ಮೆಸೇಜ್ ಮಾಡ್ತಿದ್ದಾಗ ಸೀರಿಯಸ್ ಆಗಿ ತಗೊಂಡಿರ್ಲಿಲ್ಲ ಪ್ರಿಯಾಂಕ

ನಮ್ಮ ದೇಶದಲ್ಲಿ ಬಹಳಷ್ಟು ಧರ್ಮಗಳಿವೆ. ಅವುಗಳ ಮಧ್ಯೆಯೇ ನಾವು ಬೆಳೆಯುತ್ತೇವೆ. ನಾನು ಕಾನ್ವೆಂಟ್ನಲ್ಲಿ ಕಲಿತೆ. ನನಗೆ ಕ್ರಿಶ್ಚಿಯಾನಿಟಿ ಬಗ್ಗೆ ಗೊತ್ತಿತ್ತು. ನನ್ನ ತಂದೆ ಮಸೀದಿಯಲ್ಲಿ ಹಾಡುತ್ತಿದ್ದರು. ನನಗೆ ಇಸ್ಲಾಂ ಬಗ್ಗಗೆಯೂ ಗೊತ್ತಿತ್ತು. ನಾನು ಬೆಳೆದದ್ದು ಹಿಂದೂ ಕುಟುಂಬದಲ್ಲಿ,ನನಗೆ ಅದರ ಬಗ್ಗೆಯೂ ಗೊತ್ತು. ಧಾರ್ಮಿಕತೆ ಎಂಬುದು ಭಾರತದ ದೊಡ್ಡ ಅಂಗ. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ನನ್ನ ತಂದೆ ಡಾ. ಅಶೋಕ್ ಚೋಪ್ರಾ ಅವರು ಎಲ್ಲಾ ಧರ್ಮ ನಮ್ಮನ್ನು ಒಂದೇ ದೇವರ ಬಳಿ ಒಯ್ಯುತ್ತದೆ ಎಂದಿದ್ದರು. ನಾಣು ಹಿಂದೂ, ನಾನು ಪ್ರಾರ್ಥಿಸುತ್ತೇನೆ. ನನ್ನ ಮನೆಯಲ್ಲಿ ದೇವರಕೋಣೆ ಇದೆ. ಸಮಯ ಸಿಕ್ಕಾಗ ಅಲ್ಲಿ ಪೂಜೆ ಮಾಡುತ್ತೇನೆ, ಎಲ್ಲಕ್ಕಿಂತ ಮಿಗಿಲು ಶಕ್ತಿಯೊಂದಿದೆ, ಅದನ್ನು ನಾನು ನಂಬುತ್ತೇನೆ ಎಂದಿದ್ದಾರೆ.