Asianet Suvarna News Asianet Suvarna News

ಅಮೆಜಾನ್​ಗೆ ಬಿಗ್​ಶಾಕ್​ ನೀಡಿದ ಪ್ರಿಯಾಂಕಾ ಚೋಪ್ರಾ! ಸಮಂತಾಗೂ ಶುರುವಾಯ್ತು ಸಂಕಟ

ನಟಿ ಪ್ರಿಯಾಂಕಾ ಚೋಪ್ರಾ ಅವರ ಸಿಟಾಡೆಲ್​ ವೆಬ್​ ಸೀರಿಸ್​ ಫ್ಲಾಪ್​ ಆಗಿದ್ದು, ಅಮೆಜಾನ್​ ಪ್ರೈಂ ಭಾರಿ ನಷ್ಟ ಅನುಭವಿಸಿದೆ. ಇದರಿಂದ ಸಮಂತಾ ಅವರಿಗೂ ಶಾಕ್​ ತಟ್ಟಿದೆ. 
 

Priyanka Chopras Citadel comes under scrutiny of Amazon CEO suc
Author
First Published Jul 8, 2023, 3:31 PM IST

ಸಿನಿಮಾಕ್ಕಿಂತಲೂ ಹೆಚ್ಚಾಗಿ ಈಗ ವೆಬ್​ ಸರಣಿಗಳು ಓಟಿಟಿಯಲ್ಲಿ ಸಕತ್​ ಫೇಮಸ್​ ಆಗುತ್ತಿವೆ. ಇದೇ ಕಾರಣಕ್ಕೆ ಇವುಗಳ ಮೇಲೆ  ನಿರ್ಮಾಪಕರು, ನಿರ್ದೇಶಕರು ಹೆಚ್ಚು ಕಣ್ಣಿಟ್ಟಿದ್ದಾರೆ. ಓಟಿಟಿಯ ಮೇಲೆ ಹೆಚ್ಚು ಗಮನ ಹರಿಸಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಇಲ್ಲಿ ಸೆನ್ಸಾರ್​ ಹಾವಳಿ ನಿರ್ದೇಶಕರಿಗೆ ಇಲ್ಲ. ಎಷ್ಟೇ ಅಶ್ಲೀಲ ಎನಿಸುವ ದೃಶ್ಯವಿರಲಿ ಅಥವಾ ಜನರನ್ನು ಬೆಚ್ಚಿಬೀಳಿಸುವ ಭಯಾನಕ ದೃಶ್ಯಗಳೇ ಇರಲಿ ಓಟಿಟಿಯಲ್ಲಿ ಯಾವುದೇ ಕತ್ತರಿ ಪ್ರಯೋಗ ಮಾಡದೇ ಅದನ್ನು ಪ್ರಸಾರ ಮಾಡುವ ಅವಕಾಶಗಳು ಇವೆ. ಇಂಥ ದೃಶ್ಯಗಳನ್ನು ನೋಡುವುದಕ್ಕಾಗಿಯೇ ಓಟಿಟಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಕೂಡ ಬರುತ್ತಿದೆ. ಚಲನಚಿತ್ರ ಮಂದಿರಕ್ಕಿಂತಲೂ  ಇಲ್ಲಿಯೇ ಹೆಚ್ಚು ಲಾಭ ಮಾಡಿಕೊಳ್ಳುವ ಹಾಗೂ ಇಲ್ಲಿ ಬೇಡಿಕೆಯನ್ನು ಕುದುರಿಸಿಕೊಳ್ಳುವ ಯೋಚನೆ ಮೇರೆಗೆ ಚಿತ್ರತಂಡ ಈಗ ಓಟಿಟಿಯತ್ತ (OTT) ಹೆಚ್ಚು ಗಮನ ಹರಿಸುತ್ತಿವೆ. 

ಆದರೆ ಎಲ್ಲಾ ಸಮಯವೂ ಒಂದೇ ತೆರನಾಗಿ ಇರುವುದಿಲ್ಲ. ಅತ್ಯಂತ ಹೆಚ್ಚು ಬಂಡವಾಳ ಹೂಡಿ ದೊಡ್ಡ ದೊಡ್ಡ ಸ್ಟಾರ್​ಗಳನ್ನು ಹಾಕಿಕೊಂಡು ಚಿತ್ರ ಮಾಡಿದರೂ ಅದು ಮಕಾಡೆ ಮಲಗುವುದೂ ಇದೆ, ಇಲ್ಲವೇ ಅತ್ಯಂತ ಕಡಿಮೆ ಬಜೆಟ್​ನಲ್ಲಿ ಯಾವ ಫೇಮಸ್​ ನಟ-ನಟಿಯರೂ ಇಲ್ಲದ ಚಿತ್ರಗಳು ಸಕತ್​ ಹಿಟ್​ ಆಗಿ ಬ್ಲಾಕ್​ಬಸ್ಟರ್​ ಎನಿಸಿಕೊಳ್ಳುವುದೂ ಇದೆ. ಇದು ಓಟಿಟಿಗೂ ಹೊರತಾಗಿಲ್ಲ. ಈಗ ನಟಿ ಪ್ರಿಯಾಂಕಾ ಚೋಪ್ರಾ   (Priyanka Chopra) ಅವರ ಬಹು ನಿರೀಕ್ಷಿತ ಸಿಟಾಡೆಲ್​ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಹಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿಟಾಡೆಲ್ ವೆಬ್ ಸರಣಿಗೆ ಸುಮಾರು 2000 ಕೋಟಿ ಹಣವನ್ನು ಅಮೆಜಾನ್ ಪ್ರೈಂ ಸುರಿದಿತ್ತು. ಅಮೆಜಾನ್​ ಪ್ರೈಂ ನಿರ್ಮಾಣದ ಅತಿ ದೊಡ್ಡ ಬಜೆಟ್​ನ ವೆಬ್​ ಸರಣಿಗಳಲ್ಲಿ ಒಂದು ಎಂಬ ಖ್ಯಾತಿಗೆ ಸಿಟಾಡೆಲ್ ಪಾತ್ರವಾಗಿತ್ತು. ಇದರ ಮೇಲೆ ಇಡೀ ತಂಡಕ್ಕೆ ಬಹಳ ನಿರೀಕ್ಷೆ ಇತ್ತು. ಆ್ಯಕ್ಷನ್ ಥ್ರಿಲ್ಲರ್ ವೆಬ್​ಸರಣಿಯಾಗಿರುವ ಸಿಟಾಡೆಲ್​ನಲ್ಲಿ  ದೊಡ್ಡ ದೊಡ್ಡ ಸ್ಟಾರ್​ಗಳು ಇದ್ದರೂ ಚಿತ್ರ ಫ್ಲಾಪ್​ ಆಗಿ ಹೋಗಿದೆ.  

ಆರ್ಯನ್​ ಡ್ರಗ್ಸ್​ ಕೇಸ್​ಗೆ ಟ್ವಿಸ್ಟ್​: 25 ಕೋಟಿ ಲಂಚ ಕೇಸಲ್ಲಿ ಸಿಲುಕಿದ ಶಾರುಖ್​ಗೆ ಬಂಧನದ ಭೀತಿ? ​

ಅಮೆಜಾನ್​ ಪ್ರೈಂ (Amazon Prime)  ನಿರ್ಮಾಣದ ಅತಿ ದೊಡ್ಡ ಬಜೆಟ್​ನ ವೆಬ್​ ಸರಣಿ ಎಂದೇ ಫೇಮಸ್​ ಆಗಿದ್ದ  ಸಿಟಾಡೆಲ್​ ಅನ್ನು ಜನರು ನಿರ್ಲಕ್ಷಿಸಿದ್ದಾರೆ. ಇದರ ಪ್ರಮೋಷನ್​ಗೂ ಸಿಕ್ಕಾಪಟ್ಟೆ ಹಣ ಖರ್ಚು ಮಾಡಲಾಗಿತ್ತು. ಆದರೆ ಯಾವ ಸಮಯದಲ್ಲಿ ಏನಾಗುತ್ತದೋ ಗೊತ್ತಿಲ್ಲ, ಅದೇ ರೀತಿ ಸಿಟಾಡಲ್​ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಇದರಿಂದ ಅಮೇಜಾನ್​ ಪ್ರೈಂಗೆ ಮರ್ಮಾಘಾತವಾಗಿದೆ.  ಇದಾಗಲೇ ಕಾಸ್ಟ್ ಕಟಿಂಗ್ ಹೆಸರಿನಲ್ಲಿ ಸಾವಿರಾರು ನೌಕರರನ್ನು ಮನೆಗೆ ಕಳಿಸಿರುವ ಅಮೇಜಾನ್​ಗೆ ಸಿಟಾಡಲ್​ ತುಂಬಲಾರದ ನಷ್ಟ ತಂದಿಟ್ಟಿದೆ.  ಸದ್ಯ ತಿಳಿದಿರುವ ವಿಷಯ ಏನೆಂದರೆ,  ಅಮೆಜಾನ್​ ಸಿಇಒ ಆ್ಯಂಡಿ ಜಸ್ಸಿ ಅವರು, ಸಿಟಾಡೆಲ್ ಸೇರಿದಂತೆ ಇನ್ನೂ ಕೆಲವು ಷೋಗಳ ಬಜೆಟ್ ನಿರ್ವಹಣೆ ಸೇರಿದಂತೆ ಕೆಲವು  ಮಾಹಿತಿಗಳ ಪರಿಪೂರ್ಣ ವರದಿಯನ್ನು ಕೇಳಿದ್ದಾರೆ ಎನ್ನಲಾಗಿದೆ.  ಇದು ಸಿಟಾಡೆಲ್ ಒಂದರ ವಿಷಯವಲ್ಲ. ಇದು ಬಹು ದೊಡ್ಡ ಹಿನ್ನಡೆ ತಂದಿದ್ದರೂ ಇದರಂತೆಯೇ,  ಅಮೆಜಾನ್ ಅವರೇ ನಿರ್ಮಾಣ ಮಾಡಿರುವ ವಿಶ್ವದ ಅತಿ ದೊಡ್ಡ ಬಜೆಟ್​ನ ವೆಬ್ ಸರಣಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಲಾರ್ಡ್ ಆಫ್​ ದಿ ರಿಂಗ್ಸ್; ದಿ ರಿಂಗ್ಸ್ ಆಫ್ ಪವರ್ ಸೇರಿದಂತೆ ಡೈಸಿ ಜೋನಸ್ ಆಂಡ್ ದಿ ಸಿಕ್ಸ್, ದಿ ಪವರ್, ಡೆಡ್ ರಿಂಗರ್ಸ್ ಇನ್ನೂ ಕೆಲವು ವೆಬ್ ಸರಣಿಗಳು ಫ್ಲಾಪ್​ ಎನಿಸಿದ್ದು, ಅವುಗಳ ವರದಿಯನ್ನೂ ಕೇಳಲಾಗಿದೆ ಎಂದು ತಿಳಿದುಬಂದಿದೆ.  ಲಾರ್ಡ್ ಆಫ್​ ದಿ ರಿಂಗ್ಸ್; ದಿ ರಿಂಗ್ಸ್ ಆಫ್ ಪವರ್ ವೆಬ್ ಸರಣಿಯ ಒಂದು ಸೀಸನ್​ ಮೇಲೆಯೇ ಅಮೆಜಾನ್   3,300 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ ಎನ್ನಲಾಗಿದೆ.

ಸಿಟಾಡೆಲ್​ ಮೂಲಕ ಅಮೆಜಾನ್​ಗೆ ಪ್ರಿಯಾಂಕಾ ಚೋಪ್ರಾ ಶಾಕ್​ ನೀಡಿರೋ ಬೆನ್ನಲ್ಲೇ ನಟಿ ಸಮಂತಾಗೂ (Samantha) ಸಂಕಟ ಶುರುವಾಗಿದೆ. ಇದಕ್ಕೆ ಕಾರಣ,  ಸಿಟಾಡೆಲ್ ವೆಬ್ ಸರಣಿ ಹಿಂದಿಯಲ್ಲಿಯೂ ನಿರ್ಮಾಣವಾಗುತ್ತಿತ್ತು. ಅದರಲ್ಲಿ ಸಮಂತಾ   ನಟಿಸುತ್ತಿದ್ದಾರೆ. ನಟ ವರುಣ್ ಧವನ್ ನಾಯಕರಾಗಿದ್ದಾರೆ.  ಆದರೆ ಇದೀಗ  ಸಿಟಾಡೆಲ್ ಅನ್ನು ಪ್ರೇಕ್ಷಕರು ತಿರಸ್ಕರಿಸಿರುವುದರಿಂದ ಸಮಂತಾಗೂ ಶಾಕ್​ ಆಗಿದೆ. ಇದರ  ಚಿತ್ರೀಕರಣ ಬಹುತೇಕ ಮುಗಿದಿದ್ದು, ಚಿತ್ರತಂಡ ಆತಂಕದಲ್ಲಿದೆ. 

ನಾನು ಅವ್ರ ಜೊತೆ ದೇಹ ಹಂಚಿಕೊಂಡಿದ್ರೆ 30 ಸಿನಿಮಾ ಸಿಕ್ತಿದ್ವು: ನಟಿ Payal Ghosh

Follow Us:
Download App:
  • android
  • ios