ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಕುಟುಂಬಕ್ಕೆ ಕ್ಯೂಟ್ ಮೆಂಬರ್ ಎಂಟ್ರಿಯಾಗಿದೆ. ನಟಿ ಫೋಟೋಸ್ ಶೇರ್ ಮಾಡಿಕೊಂಡಿದ್ದು, ಖುಷಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕ ನಾಯಿಯೊಂದನ್ನು ದತ್ತು ಪಡೆದಿದ್ದು, ಇದರ ಹೆಸರು ಮಾತ್ರ ಪಾಂಡ. ಪಾಂಡ ಜಿನೋ ಹಾಗೂ ಡಯಾನ ಜೊತೆ ಪಿಗ್ಗಿ ಮನೆಯೊಳಗೆ ಸೇರಿಕೊಂಡಿದೆ.

ರಾಷ್ಟ್ರೀಯ ಕೈಮಗ್ಗ ದಿನ: ನೇಯ್ಗೆ ಸೀರೆಯುಟ್ಟು ವೋಕಲ್ ಫಾರ್ ಲೋಕಲ್ ಎಂದ ಸೆಲೆಬ್ರಿಟಿಗಳು..!

ವೆಲ್‌ಕಮ್‌ ಫ್ಯಾಮಿಲಿ ಪಾಂಡ. ನಾವು ಈ ಪುಟ್ಟ ನಾಯಿಮರಿಯನ್ನು ದತ್ತು ಪಡೆದಿದ್ದೇವೆ. ಕಣ್ಣು ಮತ್ತು ಕಿವಿ ನೋಡಿದಾಗ ಹಸ್ಕಿ ಆಸ್ಟ್ರೇಲಿಯನ್ ಶೆಫರ್ಡ್ ತರ ಇದೆ ಎಂದು ಬರೆದುಕೊಂಡಿದ್ದಾರೆ.

ನಿಕ್, ಪಿಗ್ಗಿ ಪಾಂಡಾ ಮತ್ತು ಜಿನೋನನ್ನು ಮುದ್ದು ಮಾಡುತ್ತಿರುವ ಫೋಟೋವನ್ನು ಪ್ರಿಯಾಂಕ ಹಂಚಿಕೊಂಡಿದ್ದಾರೆ. ಡಯಾನ ಫೋಟೋ ತೆಗೆಯುವಾಗ ಹತ್ತಿರವಿರದ ಕಾರಣ ನಂತರ ಎಡಿಟ್ ಮಾಡಿ ಸೇರಿಸಲಾಗಿದೆ.