ಅಮೆರಿಕದಿಂದ ಅಯೋಧ್ಯೆಗೆ ಬಂದ ನಟಿ ಪ್ರಿಯಾಂಕಾ ಚೋಪ್ರಾ: ಪತಿ, ಮಗಳ ಜೊತೆ ವಿಶೇಷ ಪೂಜೆ ಸಲ್ಲಿಸಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಮೇರಿ ಜೊತೆ ಭಾರತಕ್ಕೆ ಬಂದಿದ್ದಾರೆ. ಇವರ ಹಿಂದೆಯೇ ಪತಿ ನಿಕ್​ ಜೋನಸ್​ ಅವರೂ ಭಾರತಕ್ಕೆ ಬಂದಿದ್ದರು. ಇದೀಗ ಮೂವರೂ ಸೇರಿ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿ, ಶ್ರೀರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದೇ ವೇಳೆ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಕಳೆದ ವರ್ಷ ಸಹೋದರಿ ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್‌ಗೆ ಹಾಜರಿ ಹಾಕಿದ ಬಳಿಕ ಇದೀಗ ಭಾರತಕ್ಕೆ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ. ಸದ್ಯ ಮುಂಬೈಗೆ ಬಂದಿಳಿರುವ ನಟಿ, ಅಲ್ಲಿಂದ ಅಯೋಧ್ಯೆಗೆ ಭೇಟಿ ಕೊಟ್ಟಿದ್ದಾರೆ. 

ಜನವರಿಯಲ್ಲಿ ನಡೆದ ಶ್ರೀರಾಮ ಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪ್ರಿಯಾಂಕಾ ಜನವರಿಯಲ್ಲಿ ಭಾರತದಲ್ಲಿ ಇರಲಿಲ್ಲ. ಅಮಿತಾಭ್​ ಬಚ್ಚನ್ , ರಣಬೀರ್ ಕಪೂರ್, ಆಲಿಯಾ ಭಟ್ , ವಿಕ್ಕಿ ಕೌಶಲ್, ಕತ್ರಿನಾ ಕೈಫ್ , ರಜನಿಕಾಂತ್ , ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ಪ್ರಿಯಾಂಕಾ! ನೆಟ್ಟಿಗರು ಏನೆಂದ್ರು?

ಅಂದಹಾಗೆ ಸದ್ಯ ನಟಿ ಬಾಲಿವುಡ್​ ತೊರೆದು ಹಾಲಿವುಡ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸದ್ಯ ಬಾಲಿವುಡ್​ಗೆ ಬೈ ಬೈ ಹೇಳಿರುವ ಪ್ರಿಯಾಂಕಾ ಹಾಲಿವುಡ್​ನಲ್ಲಿ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಸಿಟಾಡೆಲ್​ ವೆಬ್​ ಸೀರಿಸ್​ನ ಮೇಲೆ ನಟಿ ಭಾರಿ ಹೋಪ್ಸ್​ ಇಟ್ಟುಕೊಂಡಿದ್ದರು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಜನರ ಮೆಚ್ಚುಗೆ ಗಳಿಸಲು ವಿಫಲವಾಗಿದೆ. ಪಾಪ್ ಸಿಂಗರ್ ನಿಕ್​ ಜೋನಸ್​ ಅವರನ್ನು ಮದುವೆಯಾಗಿರೋ, ಪ್ರಿಯಾಂಕಾ ಚೋಪ್ರಾ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie) ಮಗಳನ್ನು ಪಡೆದಿದ್ದಾರೆ. ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ, 2000ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಸಿನಿಮಾ ಅವಕಾಶವನ್ನು ಪಡೆದರು. ಬಾಲಿವುಡ್​ನಲ್ಲಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಎಂಬ ಸಿನಿಮಾದ (2003) ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಸದ್ಯ ಹಾಲಿವುಡ್​ನಲ್ಲಿ ಬಿಜಿಯಾಗಿದ್ದು, ಮಗಳ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. 

ಪತಿಯ ಜೊತೆ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ಅವರು ಅಲ್ಲಿ ಹೋಟೆಲ್ ಉದ್ಯಮವನ್ನೂ ಆರಂಭಿಸಿದ್ದರು. ಪಾರ್ಟನರ್ ಜೊತೆ ಹೊಂದಾಣಿಕೆ ಆಗದ ಕಾರಣ ಅವರು ಉದ್ಯಮದಿಂದ ಹೊರ ಬಂದರು. ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಯಾವುದೇ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ, ಯಾವುದೇ ಬಾಲಿವುಡ್ ಚಿತ್ರದ ಆಫರ್‌ಅನ್ನು ಅವರು ಒಪ್ಪಿಕೊಂಡಿಲ್ಲ. ಹಾಲಿವುಡ್‌ ಸಿನಿಮಾ, ಸೀರಿಯಲ್‌ ಹಾಗೂ ವೆಬ್‌ ಸಿರೀಸ್‌ನಲ್ಲಿ ಮಾತ್ರ ನಟಿಸುತ್ತಿದ್ದಾರೆ. ಅಂದಹಾಗೆ 2017ರಲ್ಲಿ, ಹಾಲಿವುಡ್‍ನಲ್ಲಿ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದರು. ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದರು. ಹಿಂದೊಮ್ಮೆ ಕಪ್ಪು ಬಣ್ಣದಿಂದಾಗಿ ಸಾಕಷ್ಟು ಬಾಡಿ ಶೇಮಿಂಗ್​ಗೆ ಒಳಗಾಗಿದ್ದ ಪ್ರಿಯಾಂಕಾ ಈಗ ಇಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ.

ಒಂದೊಂದೇ ಬಟ್ಟೆ ಕಳಚಿ ಲವ್‌ ಮಾಡಬೇಕು, ಅದಕ್ಕಾಗಿ ಅಂಡರ್‌ವೇರ್‌ ನೋಡಬೇಕು ಎಂದ್ರು ಆ ನಿರ್ದೇಶಕ! ಪ್ರಿಯಾಂಕಾ ಹೇಳಿದ್ದೇನು?

View post on Instagram