ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ನನ್ನನ್ನು ಅವರೆಡೆಗೆ ತಿರುಗಿ ನಿಲ್ಲುವಂತೆ ಹೇಳಿದರು.. ಎದುರಿದ್ದ ನಿರ್ದೇಶಕ ಎದೆಯತ್ತ ನೋಡಿದರು.. ಪ್ರಿಯಾಂಕ ನೆನಪಿಸಿಕೊಂಡ ಘಟನೆ

ಎದೆಯತ್ತ ನೋಡಿದ ನಿರ್ದೇಶಕ ಮತ್ತಷ್ಟು ಮೆತ್ತನೆ ಕಾಷನ್‌ ಬ್ರಾಗೆ ತುಂಬುವಂತೆ ಹೇಳಿದ್ದರು ಎಂದು ತಮ್ಮ ಪುಸ್ತಕದಲ್ಲಿ ರಿವೀಲ್ ಮಾಡಿದ್ದಾರೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೋನಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ನನ್ನನ್ನು ಅವರೆಡೆಗೆ ತಿರುಗಿ ನಿಲ್ಲುವಂತೆ ಹೇಳಿದರು. ನಾನು ಮಾಡಿದೆ. ನಂತರ ನನ್ನತ್ತ ದಿಟ್ಟಿಸಿ ಬ್ರಾಒಳಗೆ ಇನ್ನಷ್ಟು ಕಾಷನ್ ತುಂಬಲು ಹೇಳಿರು ಎಂದಿದ್ದಾರೆ ಪ್ರಿಯಾಂಕ.

ಪ್ರಿಯಾಂಕ ಚೋಪ್ರಾ ಬರೆದ Unfinished ಫಸ್ಟ್ ಲುಕ್..! ಜನವರಿಯಲ್ಲಿ ಓದುಗರ ಕೈಸೇರಲಿದೆ ಬುಕ್

ನಟಿ ಪ್ರಿಯಾಂಕ ಚೋಪ್ರಾ ಫುಲ್ ಬ್ಯುಸಿಯಾಗಿದ್ದಾರೆ. ಮದುವೆಯಾದ ಮೇಲೂ ತಮ್ಮ ವೈಯಕ್ತಿಕ ಬದುಕಿಗೆ ಮೊದಲಿನಷ್ಟೇ ಪ್ರಾಮುಖ್ಯತೆ ಕೊಡುತ್ತಾ, ಸಿನಿಮಾ, ಪ್ರೊಡಕ್ಷನ್ ಎಂದು ಬ್ಯುಸಿಯಾಗಿದ್ದಾರೆ. ನಟಿಯ ನೆಟ್‌ಫ್ಲಿಕ್ಸ್ ರಿಲೀಸ್ ದಿ ವೈಟ್ ಟೈರ್ ಭಾರೀ ಪ್ರಶಂಸೆ ಪಡೆದಿದೆ.

View post on Instagram

ಈ ನಡುವೆ ನಟಿ ತಮ್ಮ ಪುಸ್ತಕ ಅನ್‌ಫಿನಿಶ್ಡ್ ಕುಡಾ ಬಿಡುಗಡೆ ಮಾಡಲಿದ್ದು, ಈ ಪುಸ್ತಕದಲ್ಲಿ ತಮ್ಮ ಬದುಕನ್ನೇ ಪುಟಗಳಲ್ಲಿ ತುಂಬಿದ್ದಾರೆ ಈಕೆ. ನಟಿಯ ಪುಸ್ತಕ ಪ್ರೀ ಬುಕ್ಕಿಂಗ್ ಆರಂಭವಾಗಿದ್ದು, ಈಗಾಗಲೇ ವೈರಲ್ ಆಗಿದೆ.