ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಮೊದಲ ಸಿನಿಮಾ ಮಾಡಿದ್ದು ದಕ್ಷಿಣದ ನಟ ಇಳಯ ದಳಪತಿ ವಿಜಯ್ ಜೊತೆ. ಮೊದಲ ಬಾರಿ ನಟ ವಿಜಯ್‌ನನ್ನು ನೋಡಿ ಎಂದೂ ಮರೆಯಲಾಗದ ಅನುಭವವಾಗಿತ್ತು ಎನ್ನುತ್ತಾರೆ ಆಕೆ.

ವಿಶ್ವಸುಂದರಿ ಪಟ್ಟ ಗೆದ್ದ ಪ್ರಿಯಾಂಕ ಚೋಪ್ರಾ ಮೊದಲು ನಟಿಸಿದ್ದು ವಿಜಯ್ ಜೊತೆ. ವಿಜಯ್ ಅಭಿಮಾನಿಗಳ ಜೊತೆ ತೋರಿಸುವ ನಮೃತೆ ಮತ್ತು ಪ್ರೀತಿ ನನ್ನ ಮೇಲೆ ದೀರ್ಘಕಾಲಿಕ ಪರಿಣಾಮವನ್ನು ಬೀರಿತು.

ಕ್ಲಾಸೆಟ್‌ನಲ್ಲಿ ಬಾಯ್‌ಫ್ರೆಂಡ್‌ನ ಅಡಗಿಸಿಟ್ಟ ಪ್ರಿಯಾಂಕ ಚೋಪ್ರಾ

ನ್ಯೂಯಾರ್ಕ್ ಸಿಟಿಯಲ್ಲಿ ಕ್ವಾಂಟಿಕೋ ಸಿನಿಮಾ ಶೂಟಿಂಗ್ ಆಗುತ್ತಿತ್ತು. ಫ್ಯಾನ್ಸ್ ಬಂದು ನನ್ನ ಜೊತೆ ಫೋಟೋ ತೆಗೆಯಲು ಬಯಸುತ್ತಿದ್ದರು. ನಾನು ಲಂಚ್‌ ಬ್ರೇಕ್‌ನಲ್ಲಿ ಎಲ್ಲರ ಜೊತೆಗೆ ಒಂದು ಸೆಲ್ಫೀ ತೆಗೆದೆ ಎಂದಿದ್ದಾರೆ.

ಈ ಸಂದರ್ಭ ನಾನು ನನ್ನ ಪ್ರತಿ ಸಹ ನಟರು ಅಭಿಮಾನಿಗಳೊಂದಿಗೆ ಡೀಲ್ ಮಾಡುವುದರ ಬಗ್ಗೆ ಆಲೋಚಿಸಿದೆ. ಈ ಸಂದರ್ಭ ವಿಜಯ್ ಅವರೇ ಬೆಸ್ಟ್ ಎನಿಸಿತು ಎಂದಿದ್ದಾರೆ.