ನಟಿ ಪ್ರಿಯಾಂಕ ಚೋಪ್ರಾ ತಮ್ಮ ವೈಯಕ್ತಿಕ ಬದುಕಿನ ಮತ್ತು ಔದ್ಯೋಕಿ ಬದುಕಿನ ಬಹಳಷ್ಟು ಮುಖ್ಯ ವಿಚಾರಗಳನ್ನು ತಮ್ಮ ಪುಸ್ತಕ ಅನ್‌ಫಿನಿಶ್ಡ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಒಂದಷ್ಟು ಹಾಸ್ಯಾಸ್ಪದ ಸಂಗತಿ, ಪೇಚಿಗೆ ಬಿದ್ದ ಸಂದರ್ಭ, ಕಾಮೆಡಿಯೂ ಇದೆ.

ಪುಸ್ತಕ ಮಂಗಳವಾರ ಬಿಡುಗಡೆಯಾಗಿದ್ದು, ಇದು ಪ್ರಿಯಾಂಕ ಚೋಪ್ರಾಳ ಬದುಕಿನ ಹತ್ತಿರದ ನೋಟವನ್ನು ಓದುಗರಿಗೆ ಕೊಡುತ್ತದೆ. ಪುಸ್ತಕದಲ್ಲಿ ಪ್ರಿಯಾಂಕ ತಮ್ಮ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಅಲ್ಲಿಯೇ ಓದುತ್ತಿದ್ದ ಸಮಯವನ್ನು ನೆನಪಿಸಿಕೊಂಡಿದ್ದಾರೆ.

ಪ್ರಿಯಾಂಕ ಎದೆಯತ್ತ ನೋಡಿ ಬ್ರಾಗೆ ಕಾಟನ್ ತುಂಬಲು ಹೇಳಿದ ನಿರ್ದೇಶಕ

ತಾನು ಪ್ರೀತಿಸುತ್ತಿದ್ದ ಹುಡುಗ ಬಾಬ್‌ ಕುರಿತು ಬರೆದಿದ್ದಾರೆ ಪ್ರಿಯಾಂಕ. ನಂತರ ಆಕೆಯ ಅತ್ತೆಯ ಜೊತೆ ಇದು ಹೇಗೆ ಸಮಸ್ಯೆಯಾಯಿತು, ಆಕೆಯನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಿತು ಎಂಬುದನ್ನೂ ಬರೆದಿದ್ದಾರೆ.

10ನೇ ತರಗತಿಯಲ್ಲಿದ್ದಾಗ ಅತ್ತೆ ಕಿರಣ್ ಜೊತೆ ವಾಸವಿದ್ದರು. ಶಾಲೆಯಲ್ಲಿ ಬಾಬ್‌ನನ್ನು ಭೇಟಿಯಾದಳು.  ರೊಮ್ಯಾಂಟಿಕ್ ಮತ್ತು ಫನ್ನಿ ನೇಚರ್‌ ಪ್ರಿಯಾಂಕಳನ್ನು ಬಾಬ್‌ನತ್ತ ಆಕರ್ಷಿಸಿತ್ತು. ಆತನನ್ನು ಮದುವೆಯಾಗುವುದಕ್ಕೂ ಪ್ಲಾನ್ ಮಾಡಿದ್ರು ಪ್ರಿಯಾಂಕ.

ಸಲಾರ್‌ನಲ್ಲಿ ಪ್ರಭಾಸ್ ಜೊತೆ ಪ್ರಿಯಾಂಕ ಚೋಪ್ರಾ..?

ಒಂದು ದಿನ ಟಿವಿ ನೋಡ್ತಾ ಇಬ್ಬರೂ ಕುಳಿತುಕೊಂಡಿದ್ದರು. ಪರಸ್ಪರ ಕೈ ಹಿಡಿದು ಟಿವಿ ನೋಡೋದರಲ್ಲಿ ತಲ್ಲೀನರಾಗಿದ್ದರು. ಆಗ ಅತ್ತೆ ಮನೆಗೆ ಬಂದಿದ್ದು ಗೊತ್ತಾಯಿತು. ಬಾಬ್ ತಟ್ಟಂತ ಪ್ರಿಯಾಂಕಳ ರೂಂಇಗೆ ನುಗ್ಗಿದ. ಪ್ರಿಯಾಂಕ ಬಾಬ್‌ಗೆ ತನ್ನ ಕ್ಲಾಸೆಟ್‌ನಲ್ಲಿ ಅಡಗುವಂತೆ ಹೇಳಿದ್ದರು.

ನಂತರ ಬಂದು ರೂಂ ಚೆಕ್ ಮಾಡಿದ್ದರು ಪ್ರಿಯಾಂಕ ಅತ್ತೆ. ಆಗ ಬಯಾಲಜಿ ಪುಸ್ತಕ ಹಿಡಿದು ಸಿಕ್ಕಾಪಟ್ಟೆ ಓದುತ್ತಿರೋ ಹಾಗೆ ಪೋಸ್ ಕೊಟ್ಟಿದ್ದರು ಪ್ರಿಯಾಂಕ, ಆದ್ರೆ ಕ್ಲಾಸೆಟ್ ಬಾಗಿಲು ತೆಗೆದಾಗ ಸಿಕ್ಕಿಬಿದ್ದಿದ್ದರು.

ಪಿಗ್ಗಿ ಜೊತೆ ಡಯಾನಾ.! ವೈಟ್ ಟೈಗರ್ ಲುಕ್‌ನಲ್ಲಿ ಮಾಜಿ ವಿಶ್ವಸುಂದರಿ

ಅವಳು ನನಗೇ ಸುಳ್ಳು ಹೇಳಿದ್ದಾಳೆ. ಆಕೆಯ ಕ್ಲಾಸೆಟ್‌ನಲ್ಲಿ ಒಬ್ಬ ಹುಡುಗನಿದ್ದ ಎಂದು ಅತ್ತೆ ಅಮ್ಮನಿಗೆ ಕಾಲ್ ಮಾಡಿ ತಿಳಿಸಿದ್ದರು. ನಂತರ ಭಾರತಕ್ಕೆ ಬಂದ ನಟಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಮಿಸ್ ಇಂಡಿಯಾ ಆಗಿ, ಮಿಸ್‌ ವಲ್ರ್ಡ್ ಆಗಿ ಸಕ್ಸಸ್‌ ಆದರು.