ಅತೀ ಹೆಚ್ಚು ಲಾಭಗಳಿಸಿದ ಚಿತ್ರ ಪುಷ್ಪಾ2 ಅಲ್ಲ, ಈ ಸಿನಿಮಾ ಗಳಿಕೆ ಬಜೆಟ್‌ಗಿಂತ 45 ಪಟ್ಟು ಹೆಚ್ಚು!

2024ರಲ್ಲಿ ಕೆಲ ಚಿತ್ರಗಳು ಭಾರಿ ಕಲೆಕ್ಷನ್ ಮಾಡಿದೆ. ಪುಷ್ಪಾ2, ಕಲ್ಕಿ, ಸ್ತ್ರೀ2 ಚಿತ್ರ ಹೊಸ ದಾಖಲೆ ಬರೆದಿದೆ. ಆದರೆ ಅತೀ ಹೆಚ್ಚು ಲಾಭಗಳಿಸಿದ ಚಿತ್ರ ಇದ್ಯಾವುದು ಅಲ್ಲ. ಈ ಚಿತ್ರದಲ್ಲಿ ಯಾವುದೇ ಸ್ಟಾರ್ ನಟ ನಟಿಯರಿಲ್ಲ. ಆದರೆ ಬರೋಬ್ಬರಿ 45 ಪಟ್ಟು ಹೆಚ್ಚು ಆದಾಯಗಳಿಸಿದೆ. 
 

Premalu India most profitable film in 2024 not Pushpa2 kalki or stree 2 ckm

ಬೆಂಗಳೂರು(ಜ.03) ಸಿನಿಮಾ ಕ್ಷೇತ್ರ ಹಲವು ಏರಿಳಿತ ಕಾಣುತ್ತಲೇ ಇರುತ್ತದೆ. ಹಲವು ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣದೆ ಸೋತು ಹೋಗಿದೆ. ಆದರೆ ಪುಷ್ಪಾ 2 ಚಿತ್ರ ಭಾರಿ ಯಶಸ್ಸು ಕಂಡಿದೆ. ಸದ್ಯ ಪುಷ್ಪಾ 2 ಚಿತ್ರ ಎಲ್ಲಾ ದಾಖಲೆ ಮುರಿದಿ 1800 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಕಲ್ಕಿ 2898 ಎಡಿ ಚಿತ್ರ, ಸ್ತ್ರೀ 2 ಚಿತ್ರ ಕೂಡ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ 2024ರಲ್ಲಿ ಬಜೆಟ್‌ಗಿಂತ ದುಪ್ಪಟ್ಟು ಆದಾಯಗಳಿಸಿದ ಚಿತ್ರ ಇದ್ಯುವುದು ಅಲ್ಲ. ಪುಷ್ಪಾ2 ಸೇರಿದಂತೆ ಹಲವು ದಾಖಲೆಯನ್ನು ಈ ಚಿತ್ರ ಮುರಿದಿದೆ. ಈ ಚಿತ್ರ ಮಲೆಯಾಳಂನಲ್ಲಿ ತೆರೆಕಂಡ ಪ್ರೇಮಲು.

ಪ್ರೇಮಲು ಚಿತ್ರದಲ್ಲಿ ಸ್ಟಾರ್ ನಟ ನಟಿಯರಿಲ್ಲ. ಇತರ ಚಿತ್ರಗಳಲ್ಲಿ ಒಂದೆರೆಡು ಸೀನ್‌ಗಳಲ್ಲಿ ಕಾಣಿಸಿಕೊಂಡ ಹಾಗೂ ಹೊಸ ಮುಖಗಳೇ ಪ್ರಮುಖ ಪಾತ್ರ ಮಾಡಿದೆ. ಇತರ ಚಿತ್ರಗಳಂತೆ ಎಲ್ಲಾ ನಗರ, ಪಟ್ಟಣಗಳಲ್ಲಿ ಈ ಪ್ರೇಮಲು ಚಿತ್ರವನ್ನು ಪ್ರಮೋಶನ್ ಮಾಡಿಲ್ಲ. ಬಿಡುಗಡೆಯಾದ ಬಳಿಕ ಈ ಚಿತ್ರ ಹಲವು ದಾಖಲೆ ಮುರಿದಿದೆ. ಇಷ್ಟೇ ಅಲ್ಲ 2024ರಲ್ಲಿ ಅತೀ ಹೆಚ್ಚು ಆದಾಯಗಳಿಸಿದ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಕಿದ ಬಜೆಟ್‌ಗಿಂತ ಅತೀ ಹೆಚ್ಚು ಆದಾಯ ಹಾಗೂ ಲಾಭ ಗಳಿಸಿದ ದಾಖಲೆ ಬರೆದಿದೆ. ಪ್ರೇಮಲು ಚಿತ್ರದ ಬಜೆಟ್ ಕೇವಲ 3 ಕೋಟಿ ರೂಪಾಯಿ. ಆದರೆ ಈ ಚಿತ್ರದ ಗಳಿಕೆ 136 ಕೋಟಿ ರೂಪಾಯಿ. ಅಂದರೆ ಹಾಕಿದ ಬಜೆಟ್‌ಗಿಂತ 45 ಪಟ್ಟು ಹೆಚ್ಚು.

ಮಂತ್ರವಾದಿಯಾಗಲಿರುವ ಗೋಲ್ಡನ್‌ ಸ್ಟಾರ್‌: ತೀವ್ರ ಕುತೂಹಲ ಸೃಷ್ಟಿಸಿದ ಗಣೇಶ್ 49ನೇ ಸಿನಿಮಾ

ಹಾಗಾದರೆ ಪುಷ್ಪಾ2 ಸೇರಿದಂತೆ ಇತರ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಚಿತ್ರದ ಬಜೆಟ್ ಹಾಗೂ ಗಳಿಕೆ ಮಾಹಿತಿ ಇಲ್ಲಿದೆ. ಅಲ್ಲು ಅರ್ಜುನ್, ಪುಷ್ಪಾ 2 ಚಿತ್ರದ ಬಜೆಟ್ 350 ಕೋಟಿ ರೂಪಾಯಿ. ಇನ್ನು ಈ ಚಿತ್ರ 1800 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಂದರೆ ಹಾಕಿದ ಬಜೆಟ್‌ಗಿಂತ 5 ಪಟ್ಟು ಹೆಚ್ಚು. ಇನ್ನು ಕಲ್ಕಿ 2898 ಎಡಿ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಆದರೆ ಗಳಿಸಿದ್ದು ಹಾಕಿದ ಬಜೆಟ್‌ಗಿಂತ 2 ಪಟ್ಟು ಆದಾಯ. ಇನ್ನು ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ ಸ್ತ್ರೀ2 ಚಿತ್ರ 875 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಬಜೆಟ್ 90 ಕೋಟಿ ರೂಪಾಯಿ. ಅಂದರೆ ಹಾಕಿದ ಬಜೆಟ್‌ಗಿಂತ ಸರಿಸುಮಾರು 10 ಪಟ್ಟು ಹೆಚ್ಚು ಗಳಿಕೆ ಮಾಡಿದೆ. 

ಹಾಕಿದ ಬಜೆಟ್ ಹಾಗೂ ಗಳಿಸಿದ ಆದಾಯ ನೋಡಿದರೆ ಮಲೆಯಾಳಂ ಪ್ರೇಮಲು ಚಿತ್ರ ಎಲ್ಲಾ ದಾಖಲೆ ಮುರಿದಿದೆ. ಕಾರಣ 45 ಪಟ್ಟು ಹೆಚ್ಚು ಗಳಿಕೆ ಮಾಡಿದೆ. ಈ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ ಮೆಲಯಾಂಳ ಸಿನಿಮಾ ಇಂಡಸ್ಟ್ರೀಯ ಹಲವು ದಾಖಲೆ ಮುರಿದಿದೆ. ಕಾರಣ 2024ರಲ್ಲಿ ಮಳೆಯಾಳಂ ಸಿನಿಮಾ ಕ್ಷೇತ್ರದಲ್ಲಿ ಗರಿಷ್ಠ ಕಲೆಕ್ಷನ್ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ 100 ಕೋಟಿ ಗಳಿಕೆ ಮಾಡಿದ ಕೆಲವೇ ಕೆಲವು ಸಿನಿಮಾ ಪಟ್ಟಿಯಲ್ಲಿ ಪ್ರಮೇಲು ಸೇರಿಕೊಂಡಿದೆ.

2025ರಲ್ಲಿ ಕನ್ನಡ ಚಿತ್ರರಂಗದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ರಿಷಬ್ ಶೆಟ್ಟಿಯ ಕಾಂತಾರ1 ಚಿತ್ರ ಹಲವು ದಾಖಲೆ ಮುರಿಯುವ ಸಾಧ್ಯತೆ ಇದೆ. ರಿಷಬ್ ಶೆಟ್ಟಿ ಕಾಂತಾರ ಚಿತ್ರ ಹೊಸ ಅಧ್ಯಾಯ ಬರೆದಿತ್ತು. ಇದೀಗ ಕಾಂತಾರ 1 ಚಿತ್ರದ  ಮೇಲೆ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿದೆ. ಇದರೊಂದಿಗೆ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಮೇಲಿ ನಿರೀಕ್ಷೆ ಹೆಚ್ಚಾಗಿದೆ. 

ಸಂಜು ವೆಡ್ಸ್ ಗೀತಾ 2 ಕತೆ ಕೊಟ್ಟಿದ್ದು ಕಿಚ್ಚ ಸುದೀಪ್‌: ನಿರ್ದೇಶಕ ನಾಗಶೇಖರ್‌
 

Latest Videos
Follow Us:
Download App:
  • android
  • ios