Asianet Suvarna News Asianet Suvarna News

ಒಂದು ಸಿನಿಮಾ ಮಾಡಿನೇ ತನ್ನನ್ನು ತಾನು ರಾಣಿ ಅಂದ್ಕೊಡ್ರಾ ಕಂಗನಾ: ಪ್ರಕಾಶ್ ರಾಜ್ ಟಾಂಗ್

ಕಂಗನಾ ರಣಾವತ್ ಹಾಗೂ ಶಿವಸೇನೆ ನಡುವಿನ ವಾಕ್ಸಮರದ ಮಧ್ಯೆ ನಟ ಪ್ರಕಾಶ್ ರಾಜ್ ಟ್ರೋಲ್ ಮೆಮ್ ಶೇರ್ ಮಾಡೋ ಮೂಲಕ ನಟಿಯ ಕಾಲೆಳೆದಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ಓದಿ.

Prakash Raj takes a dig at Kangana Ranaut by sharing a funny meme
Author
Bangalore, First Published Sep 13, 2020, 3:41 PM IST
  • Facebook
  • Twitter
  • Whatsapp

ಶಿವಸೇನೆ ಮತ್ತು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮಧ್ಯೆ ಭಾರೀ ವಾಕ್ಸಮರ ನಡೆಯುತ್ತಿರುವಗಾಲೇ ನಟ ಪ್ರಕಾಶ್ ರಾಜ್ ಮೆಮ್ ಶೇರ್ ಮಾಡಿದ್ದಾರೆ. ಮಣಿಕರ್ಣಿಕಾ: ದ ಕ್ವೀನ್ ಆಫ್ ಝಾನ್ಸಿ ಸಿನಿಮಾದಲ್ಲಿ ಮಣಿಕರ್ಣಿಕಾ ಪಾತ್ರ ಮಾಡಿದ ನಟಿ ಒಂದು ಪಾತ್ರ ಮಾಡಿದ ಕೂಡಲೇ ರಾಣಿಯಂತೆ ಫೀಲ್ ಮಾಡತೊಡಗಿದ್ದಾರೆ ಎಂಬಂರ್ಥದಲ್ಲಿರುವ ಮೆಮ್ಸ್ ಶೇರ್ ಮಾಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಮೆಮ್ ಶೇರ್ ಮಾಡಿದ ನಟ, ನೀವು ಒಂದು ಸಿನಿಮಾ ಮಾಡಿ ರಾಣಿಯಂತೆ ಫೀಲ್ ಆಗ್ತಿದ್ಯಾ..? ಹಾಗಾದರೆ ಇವರು..? ಎಂದು ದೀಪಿಕಾ ಪಡುಕೋಣೆಯ ಪದ್ಮಾವತ್ ಲುಕ್, ಅಕ್ಬರನ ಪಾತ್ರದ ಹೃತಿಕ್, ಅಶೋಕನ ಪಾತ್ರದ ಶಾರೂಖ್ ಖಾನ್ ಸೇರಿ ಹಲವು ಇಂತಹ ಸಿನಿಮಾ ಮಾಡಿದ ನಟರ ಫೋಟೋ ಇರೋ ಮೆಮ್ಸ್ ಶೇರ್ ಮಾಡಿದ್ದಾರೆ.

ಉದ್ಧವ್ ಸರ್ಕಾರಕ್ಕೆ ದೊಡ್ಡ ಮುಜುಗರ, ದೋಸ್ತಿಗಳ ವಿರುದ್ಧವೇ ಪವಾರ್ ಗುಟುರು!

ಕಂಗನಾ ಹಾಗೂ ಶಿವಸೇನೆ ಮಧ್ಯೆ ಬಹಳ ಕಳೆದ ಕೆಲವು ದಿನಗಳಿಂದ ವಾಕ್ಸಮರ ನಡೆಯುತ್ತಲೇ ಬಂದಿದೆ. ಇನ್ನು ನಟಿ ಮುಂಬೈಗೆ ಹೊರಟು ನಿಂತಾಗ ನಟಿಯ ಮುಂಬೈಯ ಬಂಗಲೆಯಲ್ಲಿ ಅಕ್ರಮ ಭಾಗವನ್ನು ಗುರುತಿಸಿ ಬಿಎಂಸಿ ತೆರವುಗೊಳಿಸಿತ್ತು. 

Follow Us:
Download App:
  • android
  • ios