Asianet Suvarna News Asianet Suvarna News

ಅಳಿಯನಿಗೆ 500 ಕೋಟಿ ರೂ. ವರದಕ್ಷಿಣೆ ಕೊಟ್ರಾ 'ದೃಶ್ಯ' ನಟ? ನಿರ್ದೇಶಕನ ದುಬಾರಿ ಮದ್ವೆಯದ್ದೇ ಚರ್ಚೆ!

ಕಾಲಿವುಡ್​ ನಿರ್ದೇಶಕ ಅಧಿಕ್ ರವಿಚಂದ್ರನ್  ಜೊತೆ ಮಗಳನ್ನು ಮದ್ವೆ ಮಾಡಲು ನಟ ಪ್ರಭು ಅವರು 500 ಕೋಟಿ ರೂಪಾಯಿ ವರದಕ್ಷಿಣೆ ಕೊಟ್ರಾ? ಏನಿದು ವಿಷ್ಯ? 
 

Prabhu paid  500 crore dowry to Kollywood director Adhik Ravichandran suc
Author
First Published Dec 20, 2023, 3:52 PM IST

ಕಾಲಿವುಡ್ ಯುವ ನಿರ್ದೇಶಕ ಅಧಿಕ್ ರವಿಚಂದ್ರನ್  ಅವರು ಐಶ್ವರ್ಯ ಪ್ರಭು (Aishwarya Prabhu) ಜೊತೆ ಕೆಲ ದಿನಗಳ ಹಿಂದೆ ಅಂದರೆ ಇದೇ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಈ ವಿಚಾರ ಸಕತ್​ ಸದ್ದು ಮಾಡುತ್ತಿದೆ.  ಹಿರಿಯ ನಟ ಪ್ರಭು ಅವರ ಪುತ್ರಿ ಐಶ್ವರ್ಯ ಜೊತೆ ನಿರ್ದೇಶಕ ಅಧಿಕ್ ಮದುವೆ ನಡೆದಿದೆ.  ದೃಶ್ಯ, ಪವರ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪ್ರಭು ಅವರ ಪುತ್ರಿಯಾಗಿರುವ ಐಶ್ವರ್ಯ ಅವರಿಗೆ ಇದು ಎರಡನೇ ಮದುವೆಯಾಗಿದೆ. ಇವರ ಮೊದಲ ಮದುವೆ ಸಂಬಂಧಿಕರ ನಡುವೆಯೇ ನಡೆದಿತ್ತು. ಅಂದರೆ  ಪ್ರಭು ಅವರ ತಂಗಿ ಮಗನ ಜೊತೆ ಮದುವೆಯಾಗಿತ್ತು. ಆದರೆ ದಾಂಪತ್ಯ ಜೀವನ ಡಿವೋರ್ಸ್​ನಲ್ಲಿ ಅಂತ್ಯ ಕಂಡಿತ್ತು.  ಇದಾದ ಬಳಿಕ  ಅಧಿಕ್ ರವಿಚಂದ್ರನ್ ಅವರನ್ನು ಐಶ್ವರ್ಯ ಪ್ರೀತಿಸುತ್ತಿದ್ದರು. ನಂತರ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದೆ. ಅಧಿಕ್ ರವಿಚಂದ್ರನ್ ಮತ್ತು ಐಶ್ವರ್ಯ ಪ್ರಭು ಅವರ ಮದುವೆಗೆ  ನಟ ರಜನಿಕಾಂತ್, ನಟ ವಿಶಾಲ್ ಸೇರಿದಂತೆ ತಮಿಳಿನ ಅನೇಕ ನಟ-ನಟಿಯರು ಆಗಮಿಸಿ ಶುಭಕೋರಿದ್ದರು. 

ಆದರೆ ಈ ಮದುವೆ ಈಗ ಭಾರಿ ಸದ್ದು ಮಾಡುತ್ತಿರಲು ಕಾರಣ, ನಟ ಪ್ರಭು ಅವರು ನೀಡಿದ್ದಾರೆ ಎನ್ನಲಾದ ವರದಕ್ಷಿಣೆ! ಹೌದು. ಪ್ರಭು ಅವರು ವರದಕ್ಷಿಣೆಯ ರೂಪದಲ್ಲಿ 500 ಕೋಟಿ ರೂಪಾಯಿ ನೀಡಿದ್ದಾರೆ ಎನ್ನುವ ಸುದ್ದಿ ಹರಡಿದೆ! ಹಣಕ್ಕಾಗಿ ಅಧಿಕ್​ ಅವರು ಈಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಈ ಅದ್ಧೂರಿ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಈ ಸದ್ದು ಸದ್ದು ಮಾಡುತ್ತಿದೆ. ಈ ಪರಿಯ ಹಣ ನೀಡಿರುವ ಕಾರಣಕ್ಕೆನೇ ಅಧಿಕ್​ ಅವರು ಈ ಮೊದಲೇ ಮದುವೆಯಾಗಿರುವವಳನ್ನು ಮದುವೆಯಾಗಲು ತಯಾರಾದರು ಎನ್ನಲಾಗುತ್ತಿದೆ.  

ಮಾಜಿ ಗಂಡ ಅಂದ್ರೆ ನಿನ್ನಂಗಿರ್ಬೇಕಪ್ಪ ಅಂತ ಹೃತಿಕ್​ ರೋಷನ್ ಕಾಲೆಳೀತಿರೋ ನೆಟ್ಟಿಗರು​: ಅಷ್ಟಕ್ಕೂ ಆಗಿದ್ದೇನು?
 
 
ಅಷ್ಟಕ್ಕೂ ಈ ಹಿಂದೆ ಕಿಕಾರ್ ಬಾಲು ಕೂಡ ಇದೇ ಮಾತನ್ನು ಹೇಳಿದ್ದರು. ಅಲ್ಲಿಂದಲೇ ಈ ಸುದ್ದಿ ಅಷ್ಟು ಸದ್ದು ಮಾಡಿತ್ತು. ಆದರೆ ಆಮೇಲೆ ಅದೇನಾಯಿತೋ ಗೊತ್ತಿಲ್ಲ. ತಾವು ಹೇಳಿದ ಮಾತಿಗೆ ಉಲ್ಟಾ ಹೊಡೆದ ಕಿಕಾರ್​ ಬಾಲು ಅವರು,  ಪ್ರಭು ಮನಸ್ಸು ಮಾಡಿದ್ದರೆ ಇಷ್ಟು ವರದಕ್ಷಿಣೆ ಕೊಡಬಹುದಿತ್ತು ಎಂದು ಹೇಳಿದ್ದೆಯಷ್ಟೇ ಅಂದಿದ್ದಾರೆ. ಈ ಮದುವೆ  ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ನಡೆದಿದೆ ಎಂಬ ಹೇಳಿಕೆಯನ್ನು ಈಗ ಕೊಟ್ಟಿದ್ದಾರೆ. ಇದೇ ವೇಳೆ, ಈ ವೇಳೆ ಖ್ಯಾತ ಚಿತ್ರ ವಿಮರ್ಶಕ ಸೆಯ್ಯರು ಬಾಲು ಅವರು ಈ ಮದುವೆ ಬಗ್ಗೆ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನದಲ್ಲಿ ಅಧಿಕ್ ರವಿಚಂದ್ರನ್ ಅವರು ಪ್ರಭು ಅವರ ಮಗಳು ಐಶ್ವರ್ಯಾ ಅವರನ್ನು ಮದುವೆಯಾಗಲು ಒಂದೇ ಒಂದು ಷರತ್ತು ಹಾಕಿದ್ದರು.  ಪ್ರಭು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ಬಯಸಿದ್ದರು. ಆದರೆ ಅಧಿಕ್​ ಅವರು  ಈ ಮದುವೆಯನ್ನು ಅತ್ಯಂತ ಸರಳವಾಗಿ ನಡೆಸಬೇಕೆಂದು ಕೇಳಿಕೊಂಡಿದ್ದರು ಎಂದಿದ್ದಾರೆ.

ಅಷ್ಟಕ್ಕೂ ಈ ಪರಿಯ ಹಣವನ್ನು ಪಡೆದಿದ್ದಾರೆ ಎಂದು ಸುದ್ದಿಯಾಗಲೂ ಇನ್ನೂ ಒಂದು ಕಾರಣವಿದೆ. ಅದೇನೆಂದರೆ, ಮೊದಲೇ ಹೇಳಿದಂತೆ ಐಶ್ವರ್ಯಾ ಅವರಿಗೆ ಇದು ಎರಡನೆಯ ಮದುವೆ, ಇದಿಷ್ಟೇ ಅಲ್ಲದೇ ಐಶ್ವರ್ಯ ಅವರು, ಅಧಿಕ್​ ಅವರಿಗಿಂತ ಮೂರು ವರ್ಷ ದೊಡ್ಡವರು. ಇದೇ ಕಾರಣಕ್ಕೆ ಈ ಮದುವೆಯ ಮೂಲಕ, ಅಧಿಕ್ ರವಿಚಂದ್ರನ್ ಅವರ ವೃತ್ತಿಜೀವನ ಮತ್ತು ಜೀವನ ಲಾಭವು ದೊಡ್ಡದಾಗಲಿದೆ ಅಷ್ಟೇ ಅಲ್ಲದೇ,  ಶಿವಾಜಿ ಗಣೇಶನ ಮನೆಯ ಅಳಿಯ ಎಂದು ಹೇಳಿಕೊಂಡು ತಿರುಗಬಹುದು ಎನ್ನುವ ಕಾರಣಕ್ಕೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.
ಕರಣ್​ ಷೋನಲ್ಲಿ ಅಮಿತಾಭ್​ ಪುತ್ರಿ ಶ್ವೇತಾ, ಐಶ್ವರ್ಯ ಬಗ್ಗೆ ಹೇಳಿದ್ದೇನು? ಕುತೂಹಲದ ವಿಡಿಯೋ ವೈರಲ್​

Latest Videos
Follow Us:
Download App:
  • android
  • ios