Adipurush Twitter Review: ರಾಮನಾಗಿ ಪ್ರಭಾಸ್ ಇಷ್ಟವಾದ್ರ? ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಹೇಳಿದ್ದೇನು?
ರಾಮನಾಗಿ ಪ್ರಭಾಸ್ ಇಷ್ಟವಾದ್ರ? ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಹೇಳಿದ್ದೇನು? ಆದಿಪುರುಷ್ ಟ್ವಿಟ್ಟರ್ ರಿವ್ಯೂ ಹೀಗಿದೆ.
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಆದಿಪುರುಷ್ ಫಸ್ಟ್ ಶೋ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಮೊದಲ ಶೋ ನೋಡಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಸೀತೆಯ ಪಾತ್ರದಲ್ಲಿ ಕೃತಿ ಸನೊನ್ ಮಿಂಚಿದ್ದಾರೆ. ಇನ್ನೂ ರಾವಣಾಗಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ.
ಆದಿಪುರುಷ್ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ. ಮೊದಲು ಟೀಸರ್ ಮೂಲಕ ಟ್ರೋಲ್ ಆಗಿದ್ದರು. ಬಳಿಕ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಸದ್ಯ ಸಿನಿಮಾ ಇಂದು (ಜೂನ್ 16) ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ. ಓಂ ರಾವುತ್ ಸಾರಥ್ಯದಲ್ಲಿ ಬಂದಿರುವ ಆದಿಪುರುಷ್ ಸಿನಿಮಾಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಿನಿಮಾ ನೋಡಿ ಇಷ್ಟಪಟ್ಟರೆ ಇನ್ನೂ ಕೆಲವರು ನಿರೀಕ್ಷೆಯಂತೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಆದಿಪುರುಷ್ ಚಿತ್ರಕ್ಕೆ 5ಕ್ಕೆ 2 ಸ್ಟಾರ್ ನೀಡಿದ್ದಾರೆ. 'ಆದಿಪುರುಷ'ನ ಅಭಿಮಾನಿಯಾಗಿ ಭಾರಿ ನಿರಾಶೆಗೊಂಡಿದ್ದೇನೆ. ಆದರೆ ಮುಂದಿನ ಬ್ಲಾಕ್‌ಬಸ್ಟರ್ ಸಲಾರ್ ಅನ್ನು ಹೆಚ್ಚಿನ ಭರವಸೆಯೊಂದಿಗೆ ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
ಮತ್ತೋರ್ವ ವ್ಯಕ್ತಿ ಪ್ರತಿಕ್ರಿಯೆ ನೀಡಿ, ಫೇಕ್ ವಿಮರ್ಶೆಗಳನ್ನು ನಂಬಬೇಡಿ. 3ಡಿಯಲ್ಲಿ ಅದ್ಭುತ ಅನುಭವ. ಮೊದಲ ಭಾಗ ಸೂಪರ್ ಆಗಿದೆ. 2ನೇ ಭಾಗ ಕೂಡ ಉತ್ತಮ. ವಿಎಫ್‌ಎಕ್ಸ್ ಇನ್ನು ಚೆನ್ನಾಗಿ ಮಾಡಬಹುದಿತ್ತು. ರಾವಣ ಲುಕ್ ಕೂಡ ಚೆನ್ನಾಗಿದೆ' ಎಂದು ಹೇಳಿದ್ದಾರೆ.
'ನೋಡಲೇಬೇಕಾದ ಒಳ್ಳೆಯ ಸಿನಿಮಾ. ನಂಬಲಾಗದ ದೃಶ್ಯಗಳು, ಪ್ರಭಾಸ್ ಅದ್ಭುತವಾಗಿದೆ ನಟಿಸಿದ್ದಾರೆ. ಬ್ಯಾಗ್ರೌಂಡ್ ಸ್ಕೋರ್ ಮತ್ತು ಮೆಲೋಡಿಗಳು ಸುಂದರವಾಗಿವೆ' ಎಂದು ಹೇಳಿದ್ದಾರೆ.
'ಫಸ್ಟ್ ಹಾಫ್ ಉತ್ತಮವಾಗಿದೆ. ಸೆಕೆಂಡ್ ಹಾಫ್ ಡೀಸೆಂಟ್ ಆಗಿದೆ. ಹನುಮಾನ್ ದೃಶ್ಯಗಳು ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಸಂಗೀತ ಮತ್ತು ಹಾಡುಗಳು ಅದ್ಭುತ. ಆದರೆ ವಿಎಕ್ಸ್‌ಎಫ್ ತುಂಬಾ ಹಿನ್ನಡೆಯಾಗಿದೆ. ಭಾವನಾತ್ಮಕ ಸಂಪರ್ಕ ಕೊರತೆ ಇದೆ. 5ಕ್ಕೆ 3 ಸ್ಟಾರ್' ಎಂದು ಹೇಳಿದ್ದಾರೆ.