ಪೂನಂ ತಾನು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನನಗೆ ಯಾವುದೇ ವಸ್ತುಗಳ ವಾಸನೆ ಬರುವುದಿಲ್ಲ. ನಾನು ವಾಸನೆಯ ಬಗ್ಗೆ ನನ್ನ ಸುತ್ತಮುತ್ತಲಿನ ಜನರನ್ನು ಕೇಳುತ್ತೇನೆ. ಕೌಟುಂಬಿಕ ಹಿಂಸೆಯಿಂದ ನಾನು ವಾಸನೆಯನ್ನು ಕಳೆದುಕೊಂಡೆ ಎಂದುಹೇಳಿದ್ದಾರೆ. 

ಬಾಲಿವುಡ್‌ನ ವಿವಾದಾತ್ಮಕ ನಟಿ, ಹಾಟ್ ವಿಡಿಯೋಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸೋ ಪೂನಂ ಪಾಂಡೆ(Poonam Pandey) ಲಾಕಪ್(Lock Up) ರಿಯಾಲಿಟಿ ಶೋನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಬಾಲಿವುಡ್‌ನ ಬೋಲ್ಡ್ ನಟಿ ಕಂಗನಾ ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ನಡೆಸುವ ರಿಯಾಲಿಟಿ ಶೋ ಇದಾಗಿದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಶೋನಲ್ಲಿ ಸ್ಪರ್ಧಿಯಾಗಿದ್ದ ಪೂನಂ ಪಾಂಡೆ ಇತ್ತೀಚಿಗಷ್ಟೆ ಹೊರ ಬಂದಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದ ಹೊರಬಂದಿರುವುದಾಗಿ ಹೇಳಿದ್ದಾರೆ.

ಈ ಶೋ ಮೂಲಕ ಪೂನಂ ಪಾಂಡೆ ಮತ್ತೊಂದು ಮುಖ ಬಹಿರಂಗವಾಗಿದೆ. ಪೂನಂ ತಾನು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಾಟ್ ವಿಡಿಯೋಗಳನ್ನು ಶೇರ್ ಮಾಡುತ್ತಾ, ವಿವಾದಗಳಲ್ಲಿಯೇ ಸದ್ದು ಮಾಡುತ್ತಿದ್ದ ಪೂನಂ ಮಾಜಿ ಪತಿಯ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ತಾನು ಹಲವು ಬಾರಿ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದರು. ಇದರಿಂದ ಹಲವು ಬಾರಿ ಕೊಲ್ಲಲು ಪ್ರಯತ್ನ ಪಟ್ಟಿದ್ದರು ಎಂದಿದ್ದಾರೆ. ರಿಯಾಲಿಟಿ ಶೋನಿಂದ ಹೊರಬಂದಿರುವ ಪೂನಂ ಸದ್ಯ ಆಂಗ್ಲ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಪೂನಂ ತನಗೆ ವಾಸನೆಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.

ನನಗೆ ಯಾವುದೇ ವಸ್ತುಗಳ ವಾಸನೆ ಬರುವುದಿಲ್ಲ. ನಾನು ವಾಸನೆಯ ಬಗ್ಗೆ ನನ್ನ ಸುತ್ತಮುತ್ತಲಿನ ಜನರನ್ನು ಕೇಳುತ್ತೇನೆ. ಕೌಟುಂಬಿಕ ಹಿಂಸೆಯಿಂದ ನಾನು ವಾಸನೆಯನ್ನು ಕಳೆದುಕೊಂಡೆ. ಮೆದುಳಿನ ರಕ್ತಸ್ರಾವದಿಂದ ನಾನು ವಾಸನೆ ಕಳೆದುಕೊಂಡೆ. ಆದರೀಗ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಈಗ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಬಲಶಾಲಿಯಾಗಿದ್ದೇನೆ ಎಂದು ಹೇಳಿದರು.

ಪತಿಯ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿ ಕಣ್ಣೀರಾಕಿದ ಪೂನಂ ಪಾಂಡೆ

2020ರಲ್ಲಿ ಪೂನಂ ಪಾಂಡೆ, ಸ್ಯಾಮ್ ಅವರನ್ನು ಮದುವೆಯಾದರು. ಆದರೆ ಮದುವೆಯಾಗಿ ಕೆಲವೇ ವಾರಗಳಲ್ಲಿ ಪೂನಂ ಗಂಡನ ವಿರುದ್ಧ ಕ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಲಾಕ್ ಅಪ್ ಶೋನಲ್ಲಿ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಪತಿಯು ಹೊಡೆದ ಪರಿಣಾಮ ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಯಿತು ಎಂದು ಬಹಿರಂಗಪಡಿಸಿದರು.

ಸ್ಯಾಮ್ ತನ್ನ ಮಿದುಳಿನ ಗಾಯವನ್ನು ಸರಿಯಾಗಿ ಗುಣಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಸ್ಯಾಮ್ ಪದೇ ಪದೇ ಹೊಡೆಯುತ್ತಿದ್ದ ಕಾರಣ ಮತ್ತಷ್ಟು ಜಾಸ್ತಿಯಾಯಿತು ಎಂದು ಹೇಳಿದರು. ಅದನ್ನು ಮರೆಮಾಚಲು ಎಲ್ಲರ ಮುಂದೆ ಮೇಕಪ್ ಮಾಡಿ, ಗ್ಲಾಸ್ ಮಾಡಿ ನಗುತ್ತಿದ್ದೆ. ಎಲ್ಲರ ಮುಂದೆ ಕೂಲ್ ಆಗಿ ನಟಿಸುತ್ತಿದೆ. ಮತ್ತೆ ಮತ್ತೆ ಅದೇ ಜಾಗದಲ್ಲಿ ಪೆಟ್ಟು ಬೀಳುತ್ತಿತ್ತು ಎಂದು ಹೇಳಿದರು.

ಗೆಲ್ಲಬೇಕು ಅಂದ್ರೆ ನೀನು ಬೇರೆಯವರ *** ನೆಕ್ಕುತ್ತೀಯಾ; ಲಾಕಪ್‌ ಶೋನಲ್ಲಿ ಫುಲ್ ಬೀಪ್ ಪದಗಳು!

ಲಾಕ್ ಅಪ್ ಶೋನಲ್ಲಿ ಪೂನಂ ಗಂಡ ನೀಡುತ್ತಿದ್ದ ಕಷ್ಟಗಳ ಬಗ್ಗೆ ವಿವರಿದ್ದರು. 'ಅವನು ಹಗಲು-ರಾತ್ರಿ ಕುಡಿಯುತ್ತಿದ್ದ. ನನ್ನ ಬಗ್ಗೆ ಸಿಕ್ಕಾಪಟ್ಟೆ ಪೊಸೆಸಿವ್​ ಆಗಿದ್ದ. ನಾನು ಮನೆಯಲ್ಲಿದ್ದರೂ ಕೂಡ ನನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದ. ನನ್ನ ಫೋನ್​ ಆತನ ಬಳಿಯೇ ಇರಬೇಕಿತ್ತು. ನನಗೆ ಮುಟ್ಟಲು ಕೊಡುತ್ತಿರಲಿಲ್ಲ. ಅವರ ವರ್ತನೆ ಕಂಡು ಮನೆ ಕೆಲಸದವರು ಕೂಡ ಹೆದರುತ್ತಿದ್ದರು. ಯಾರೂ ಕೂಡ ಮನೆಯಲ್ಲಿ ಇರುತ್ತಿರಲಿಲ್ಲ’ ಎಂದು ಪೂನಂ ಪಾಂಡೆ ಹೇಳಿದ್ದರು.