ನಟಿ ಪೂನಂ ಪಾಂಡೆ  ಲಾಕಪ್ ರಿಯಾಲಿಟಿ ಶೋನಲ್ಲಿ ಪತಿ ಶ್ಯಾಮ್ ಬಾಂಬೆ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿ ಕಣ್ಣೀರಾಕಿದ್ದಾರೆ. 'ನಾನು ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗಿಲ್ಲ. ನನ್ನ ಮದುವೆ ಉಳಿಯಬೇಕೆಂದು ನಾನು ಬಯಾಸುತ್ತೇನೆ' ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ಬಾಲಿವುಡ್ ನ ವಿವಾದಾತ್ಮಕ ನಟಿ, ಹಾಟ್ ವಿಡಿಯೋಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸೋ ಪೂನಂ ಪಾಂಡೆ ಲಾಕಪ್ ರಿಯಾಲಿಟಿ ಶೋನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಬಾಲಿವುಡ್ ನ ಬೋಲ್ಡ್ ನಟಿ ಕಂಗನಾ ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ನಡೆಸುವ ರಿಯಾಲಿಟಿ ಶೋ ಇದಾಗಿದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೀಶನ್ ಖಾನ್ ಮತ್ತು ಪಾಯಲ್ ರೋಹಟಗಿ ನಡುವಿನ ಜಗಳದ ಬಳಿಕ ಇತ್ತೀಚಿಗೆ ಲಾಕಪ್ ಭಾರಿ ನಾಟಕೀಯ ಬೆಳವಣಿಗೆಳನ್ನು ಕಂಡಿದೆ.

ಈ ಶೋನಲ್ಲಿ ಯಾರಿಗೂ ಗೊತ್ತಿರದ ಪೂನಂ ಮತ್ತೊಂದು ಮುಖವನ್ನು ಇಲ್ಲಿ ನೋಡಬಹುದು. ಹಾಟ್ ವಿಡಿಯೋಗಳನ್ನು ಶೇರ್ ಮಾಡುತ್ತಾ, ವಿವಾದಗಳಲ್ಲಿಯೇ ಸದ್ದು ಮಾಡುತ್ತಿದ್ದ ಪೂನಂ ಮಾಜಿ ಪತಿಯ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ವೀಕೆಂಡ್ ನಲ್ಲಿ ವಿಶೇಷ ಅತಿಥಿ ಭಾಗಿಯಾಗುತ್ತಾರೆ. ಕಳೆದ ಬಾರಿ ನಟಿ ಅಂಕಿತಾ ಲೋಖಂಡೆ ಲಾಕಪ್ ನಲ್ಲಿ ಕಾಣಿಸಿಕೊಂಡಿದ್ದರು. ಅಂಕಿತಾ ಹೊರಟ ಬಳಿಕ ಪೂನಂ ಭಾವುಕರಾಗಿದ್ದಾರೆ.

ಪತಿ ಸ್ಯಾಮ್ ಬಾಂಬೆ ಜೊತೆಗಿನ ಬ್ರೇಕಪ್ ನೆನೆದು ಕಣ್ಣೀರಾಕಿದ್ದಾರೆ. 'ನಾನು ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗಿಲ್ಲ. ನನ್ನ ಮದುವೆ ಸಹ ಉಳಿಯಬೇಕೆಂದು ನಾನು ಬಯಾಸುತ್ತೇನೆ' ಎಂದು ಹೇಳುತ್ತಾ ಕಣ್ಣೀರಾಕಿದ್ದಾರೆ. ಅಂಜಲಿ, ಪೂನಂ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೂ ಅಳು ನಿಲ್ಲಿಸಿಲ್ಲ. 'ನಾನು ಜೀವನದಲ್ಲಿ ಏನನ್ನು ಪಡೆಯುವುದಿಲ್ಲ ಎಂದು ಭಾವಿಸಿದ್ದೇನೆ. ಒಂಟಿಯಾಗಿಯೇ ಸಾಯುತ್ತೇನೆ' ಎಂದಿದ್ದಾರೆ. ಇದೇ ಸಮಯದಲ್ಲಿ ಜನರು ಅವಮಾನ ಮಾಡಿದಾಗ ತುಂಬಾ ನೋವಾಗುತ್ತೆ ಎಂದು ಹೇಳಿದ್ದಾರೆ.

ಜನರು ವೋಟ್ ಮಾಡಿದರೆ ಕ್ಯಾಮೆರಾ ಮುಂದೆ ಶರ್ಟ್‌ ಬಿಚ್ಚುವೆ: ಪೂನಂ ಪಾಂಡೆ

ಇದೇ ಶೋನಲ್ಲಿ ಪೂನಂ ಗಂಡ ನೀಡುತ್ತಿದ್ದ ಕಷ್ಟಗಳ ಬಗ್ಗೆಯೂ ವಿವರಿದ್ದರು. ಅವನು ಹಗಲು-ರಾತ್ರಿ ಕುಡಿಯುತ್ತಿದ್ದ. ನನ್ನ ಬಗ್ಗೆ ಸಿಕ್ಕಾಪಟ್ಟೆ ಪೊಸೆಸಿವ್​ ಆಗಿದ್ದ. ನಾನು ಮನೆಯಲ್ಲಿದ್ದರೂ ಕೂಡ ನನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದ. ನನ್ನ ಫೋನ್​ ಆತನ ಬಳಿಯೇ ಇರಬೇಕಿತ್ತು. ನನಗೆ ಮುಟ್ಟಲು ಕೊಡುತ್ತಿರಲಿಲ್ಲ. ಅವರ ವರ್ತನೆ ಕಂಡು ಮನೆ ಕೆಲಸದವರು ಕೂಡ ಹೆದರುತ್ತಿದ್ದರು. ಯಾರೂ ಕೂಡ ಮನೆಯಲ್ಲಿ ಇರುತ್ತಿರಲಿಲ್ಲ’ ಎಂದು ಪೂನಂ ಪಾಂಡೆ ಹೇಳಿದ್ದರು.

ಮಿಡಲ್ ಫಿಂಗರ್ ತೋರಿಸಿದ ಪೂನಂ ಪಾಂಡೆ; ನಿನಗೆ ಅದು ಬೇಕಾ ಎಂದ ನಟ!

ಪೂನಂ ಪಾಂಡೆ 2020ರ ಸೆಪ್ಟೆಂಬರ್​ 1ರಂದು ಸ್ಯಾಮ್​ ಬಾಂಬೆ ಜೊತೆ ಮದುವೆ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ದೊಡ್ಡ ಮಟ್ಟದಲ್ಲಿ ಜಗಳ ನಡೆದಿತ್ತು. ಆ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು. ಬಳಿಕ ಮತ್ತೆ ಒಂದಾಗಿದ್ದ ಜೋಡಿ ನಂತರದ ದಿನಗಳಲ್ಲಿ ಬ್ರೇಕಪ್ ಮಾಡಿಕೊಂಡು ದೂರ ದೂರ ಆಗಿದ್ದಾರೆ.