ಮುಂಬೈ(ಜೂ.13): ಮುಂಬೈ ನಿವಾಸಿಗಳಿಗೆ ಗರಿಷ್ಠ ಸುರಕ್ಷತೆ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ಅದರಲ್ಲೂ ಮಹಾನಗರಿಯ ವಾಯುವಿಹಾರ ಸ್ಥಳಗಳಲ್ಲಿ ಹೆಚ್ಚಿನ ಸುರಕ್ಷತೆ ನೀಡಲು ಮುಂಬೈ ಪೊಲೀಸರು ಸೆಗ್ವೇ ಬೈಕ್ ಸರ್ವೀಸ್ ಆರಂಭಿಸಿದೆ. ಇದಕ್ಕಾಗಿ ಮಂಬೈ ಪೊಲೀಸ್ ಇಲಾಖೆಗೆ ಸೇರಿಕೊಂಡ ನೂತನ ಸೆಗ್ವೇ ಬೈಕ್‌ಗಳನ್ನು ಮುಂಬೈ ಪೊಲೀಸ್ ಪ್ಯಾಟ್ರೋಲ್ ಮಾಡುವ ಮೂಲಕ ಸೆಗ್ವೆ ಸುರಕ್ಷತಾ ಸೇವೆಯನ್ನು ಆರಂಭಿಸಿತು.

 

ರಕ್ಷಣೆ ಅಂದ್ರೆ ಇದಪ್ಪಾ; ಕ್ಯಾಮೆರಾಗಳಿಗೆ ಅಂಜದೆ ಪಿಪಿ ಕಿಟ್‌ ಧರಿಸಿ ಬಂದ ನಟಿ!

ಮುಂಬೈ ಪೊಲೀಸರಿಗೆ 50 ಸೆಗ್ವೇ ಬೇಕ್ ನೀಡಲಾಗಿದೆ. ಮಹಾರಾಷ್ಟ ಗೃಹ ಮಂತ್ರಿ ಅನಿಲ್ ದೇಶ್‌ಮುಖ್ ನೂತನ ಸೆಗ್ವೇಗಳನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಬಳಿಕ ಪೊಲೀಸರು ಈ ಸೆಗ್ವೇ ಬೈಕ್ ಮೂಲಕ ಮರಿನ್ ಡ್ರೈವ್‌ನಲ್ಲಿ ಪ್ಯಾಟ್ರೋಲಿಂಗ್ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನೂತನ ಸೇವೆಗೆ ಎಲ್ಲರೂ ಜೈ ಎಂದಿದ್ದರೆ, ಇತ್ತ ಬಾಲಿವುಡ್ ನಟಿ ಪೂಜಾ ಭಟ್, ಪೊಲೀಸರು ಹೆಲ್ಮೆಟ್ ಹಾಕದೆ ತಿರುಗಾಡಿದ್ದಾರೆ. ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್‌ಗೆ ಪೊಲೀಸರ ಬ್ರೇಕ್!

ಮುಂಬೈ ಪೊಲೀಸರ ಟ್ವಿಟರ್ ಮೂಲಕ ಹಾಕಿರು ವಿಡಿಯೋಗೆ ಪೂಜಾ ಭಟ್ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಹೆಲ್ಮೆಟ್ ಬೇಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪೂಾ ಭಟ್ ಟ್ವೀಟ್ ಇದೀಗ ವೈರಲ್ ಆಗಿದೆ. ಪೊಲೀಸರೇ ಹೆಲ್ಮೆಟ್ ಹಾಕದಿದ್ದರೆ ಹೇಗೆ? ಎಂದು ಹಲವರು ಪ್ರಶ್ನಿಸಿದ್ದಾರೆ. 

ಪೂಜಾ ಭಟ್ ಮತ್ತೆ ಬೆಳ್ಳಿ ತೆರೆಗೆ ವಾಪಸ್ ಆಗಲು ಸಜ್ಜಾಗಿದ್ದಾರೆ. ಮಹೇಶ್ ಭಟ್ ನಿರ್ದೇಶದ ಸಾದಕ್2 ಮೂಲಕ ಪೂಜಾ ಭಟ್ ಮತ್ತೆ ಬಣ್ಣ ಹಚ್ಚಲಿದ್ದಾರೆ. ಸಾದಕ್2 ಚಿತ್ರದಲ್ಲಿ ಅಲಿಯಾ ಭಟ್, ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವು ಸ್ಟಾರ್‌ಗಳು ತುಂಬಿದ್ದಾರೆ.