Asianet Suvarna News Asianet Suvarna News

ಸಕ್ಸಸ್​ ಅನ್ನೋದು ಅಂಡರ್​ವೇರ್​ ಇದ್ದಂಗೆ, ನೀವ್ಯಾಕೆ ಪದೇ ಪದೇ ಷರ್ಟ್​ ಬಿಚ್ಚೋದು? ಸಲ್ಮಾನ್​ಗೆ ನಟಿ ಪೂಜಾ ಪ್ರಶ್ನೆ

ನಟ ಸಲ್ಮಾನ್​ ಖಾನ್​ ಪದೇ ಪದೇ ಷರ್ಟ್​ ಬಿಚ್ಚುವ ಔಚಿತ್ಯವನ್ನು ನಟಿ ಪೂಜಾ ಬೇಡಿ ಸಂದರ್ಶನದಲ್ಲಿ ಕೇಳಿದಾಗ, ನಟ ಕೊಟ್ಟ ಉತ್ತರ ಏನು?
 

Pooja Bedi asked Salman Khan taking off his shirt repeatedly see his answer suc
Author
First Published Aug 31, 2024, 3:44 PM IST | Last Updated Aug 31, 2024, 3:44 PM IST

ಬಾಲಿವುಡ್​ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎಂದೇ ಫೇಮಸ್​ ಆಗಿರೋ ಸಲ್ಮಾನ್​ ಖಾನ್​​ ಅವರಿಗೆ ಈಗ 58 ವರ್ಷ ವಯಸ್ಸು. ಹಾಗೆಂದು ವರ್ಚಸ್ಸಿಗೇನೂ ಕಮ್ಮಿಯಾಗಿಲ್ಲ. ಇಷ್ಟೇ ವಯಸ್ಸಿನ ಶಾರುಖ್​ ಖಾನ್​ರಂತೆ ಇಂದಿಗೂ ಹೀರೋ ಆಗಿಯೇ ಮಿಂಚುತ್ತಿದ್ದಾರೆ. ಮಗಳ ವಯಸ್ಸಿನಂತಿರುವ ಹೀರೋಯಿನ್​ಗಳ ಜೊತೆ ಬಿಂದಾಸ್​ ಆಗಿ ರೊಮಾನ್ಸ್​ ಮಾಡುತ್ತಾರೆ. ಆದರೆ ಎಲ್ಲಾ ಸಂದರ್ಭಗಳೂ ಒಂದೇ ರೀತಿ ಇರುವುದಿಲ್ಲವಲ್ಲ. ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ ಎನ್ನುವುದನ್ನು ಈ ನಟ ಸಾಬೀತು ಮಾಡಿದ್ದಾರೆ. ಇವರು ವರ್ಕೌಟ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಫಿಟ್ ಅಂಡ್ ಫೈನ್ ಆಗಿದ್ದಾರೆ. ಪ್ರತಿ ದಿನ ಅವರು ಜಿಮ್​ನಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಾರೆ.  ಅವರು ಬಾಡಿಯನ್ನು ಉತ್ತಮವಾಗಿ ಕಾಯ್ದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ವೇದಿಕೆ ಮೇಲೆ ಈ ಅನುಮಾನವನ್ನು ಸಲ್ಮಾನ್ ಖಾನ್ ಬಗೆಹರಿಸಿದ್ದರು. ಇನ್ನು ಸಲ್ಲು ತೆರೆಮೇಲೆ ಶರ್ಟ್ ಬಿಚ್ಚಿ ದರ್ಶನ ಕೊಟ್ಟರೆ ಸಿನಿಮಾ ಸಕ್ಸಸ್ ಎನ್ನುವ ಮಾತಿದೆ. ಅಷ್ಟರಮಟ್ಟಿಗೆ ಬಾಲಿವುಡ್‌ ಬಾಕ್ಸಾಫೀಸ್ ಸುಲ್ತಾನ್ ಹುರಿಗಟ್ಟಿದ ದೇಹ ಪ್ರದರ್ಶನಕ್ಕೆ ಹೆಸರಾಗಿದ್ದಾರೆ.
 
ಇದೀಗ ನಟಿ ಪೂಜಾ ಬೇಡಿ ಷೋನಲ್ಲಿ ಷರ್ಟ್​ ಬಿಚ್ಚುವುದು ಏಕೆ ಎನ್ನುವ ಪ್ರಶ್ನೆ ಸಲ್ಮಾನ್​ ಖಾನ್​ಗೆ ಎದುರಾಗಿದೆ. ಅದರಲ್ಲಿ ನಟಿ, ಸಕ್ಸಸ್​ ಎನ್ನುವುದು ಅಂಡರ್​ವೇರ್​ ಇದ್ದಂತೆಯೇ. ಅದು ಜೀವನದಲ್ಲಿ ಬೇಕೇ ಬೇಕು, ಆದ್ರೆ ಎಲ್ಲಾ ಸಲ ತೋರಿಸುವುದು ಕಷ್ಟ ಎನ್ನುತ್ತಲೇ ಪ್ರತಿಸಲವೂ ನಟ ಷರ್ಟ್​ ಬಿಚ್ಚುವುದು ಏಕೆ, ಅದು ಯಶಸ್ಸಿನ ಭಾಗವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟ, ನನಗೆ ನನ್ನದೇ ಆದ ಸ್ಟೈಲ್​ ಇದೆ. ಅದರಂತೆಯೇ ನಡೆಯುತ್ತೇನೆಯೇ ಹೊರತು ಬೇರೆಯವರು ಅದರಿಂದ ಏನು ಅಂದುಕೊಳ್ಳುತ್ತಾರೆ ಎನ್ನುವುದನ್ನು ನೋಡುವುದಿಲ್ಲ ಎಂದಿದ್ದಾರೆ. ನಾನು ಪದೇ ಪದೇ ಷರ್ಟ್​ ಬಿಚ್ಚುವುದು, ಜಿಮ್​ಗೆ ಹೋಗುವುದು ಸೋಷಿಯಲ್​ ಮೀಡಿಯಾಗಳಲ್ಲಿ ಹೈಲೈಟ್​ ಆಗುತ್ತದೆ. ಇದನ್ನು ನೋಡಿ ಮಕ್ಕಳೂ ಅದನ್ನೇ ಫಾಲೋ ಮಾಡುತ್ತಾರೆ. ಕೆಟ್ಟ ಅಭ್ಯಾಸಗಳಾದ ಕುಡಿಯುವುದು, ಸ್ಮೋಕಿಂಗ್​ ಇವೆಲ್ಲವುಗಳ ಬದಲು ಇಂಥದ್ದೊಂದು ಒಳ್ಳೆಯ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದಲ್ಲವೆ ಎಂದು ಪ್ರತ್ಯುತ್ತರ ನೀಡುವ ಮೂಲಕ ನಟಿಯ ಬಾಯಿ ಮುಚ್ಚಿಸಿದ್ದಾರೆ! 

ಸಲ್ಮಾನ್​ ಖಾನ್​ರ ಸೆಕ್ಸ್​- ಕಿಸ್​ ಬಗ್ಗೆ ಓಪನ್ನಾಗಿ ಹೀಗೆ ಮರ್ಯಾದೆ ತೆಗೆಯೋದಾ ಅಣ್ಣ ಅರ್ಬಾಜ್​!

ಷರ್ಟ್​ ಬಿಚ್ಚುವುದು ಏನೇ ಇದ್ದರೂ, ಸಲ್ಮಾನ್​ ಖಾನ್​ ಅವರ ಒಂದು ಇಷ್ಟವಾದ ವಿಷಯ ಎಲ್ಲರಿಗೂ ಪ್ರೀತಿಯಾಗುವುದು ಏನೆಂದರೆ,  ಸಲ್ಮಾನ್ ಖಾನ್   ಪರದೆಯ ಮೇಲೆ ಅಂದ್ರೆ ಚಿತ್ರಗಳಲ್ಲಿ ನಟಿಯರಿಗೆ ಕಿಸ್ ಮಾಡಲ್ಲ. ಇದು ಅವರು ಮೊದಲಿನಿಂದ ತಮ್ಮಷ್ಟಕ್ಕೇ ತಾವು ಹಾಕಿಕೊಂಡಿರುವ ನಿಯವಾಗಿದ್ದು, ಅದರಂತೆಯೇ ನಡೆಯುತ್ತಿದ್ದಾರೆ. ಇದಕ್ಕೆ ನಟ ಕಾರಣವನ್ನೂ  ನೀಡಿದ್ದಾರೆ.  ಸಿನಿಮಾ ನೋಡಲು ಬರೋ ಫ್ಯಾಮಿಲಿ ಆಡಿಯನ್ಸ್​ಗೆ ಮುಜುಗರ ಆಗಬಾರದು ಅನ್ನೋದು ತಮ್ಮ ಉದ್ದೇಶ ಎಂದಿದ್ದಾರೆ. ಷರ್ಟ್​ ಬಿಚ್ಚುವುದು ಕೆಟ್ಟ ಅಭ್ಯಾಸವಲ್ಲ, ಅದನ್ನು ಮಕ್ಕಳು ನೋಡಿ ಅಭ್ಯಾಸ ಮಾಡಿಕೊಂಡರೆ ಮಾಡಿಕೊಳ್ಳಲಿ ಬಿಡಿ ಎನ್ನುವುದು ಅವರ ಮಾತು.  

ಇನ್ನು ಸಲ್ಮಾನ್ ಖಾನ್ ಅವರ ಸಿನಿಮಾದ ಕುರಿತು ಹೇಳುವುದಾದರೆ ಸದ್ಯ ‘ಸಿಕಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.  ಸಲ್ಮಾನ್ ಖಾನ್ ಸಾಲು ಸಾಲು ಸೋಲು ಕಂಡಿದ್ದಾರೆ. ಈ ಚಿತ್ರದ ಮೂಲಕ ಗೆಲ್ಲೋ ಭರವಸೆಯಲ್ಲಿ ಅವರಿದ್ದಾರೆ. ಈ ಚಿತ್ರಕ್ಕೆ ತಮಿಳಿನ ಎ.ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.ಈ ಸಿನಿಮಾ 2025ರ ಈದ್​ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 

ಸೋನಾಲಿ ಬೇಂದ್ರೆಯನ್ನು ತಬ್ಬಿಕೊಳ್ಳಲು ಪರದಾಡಿದ ಸಲ್ಮಾನ್: ಹಗ್​ ಮಾಡ್ತಿದ್ದಂತೆಯೇ ನಡೆಯಿತು ಮ್ಯಾಜಿಕ್​!
 

Latest Videos
Follow Us:
Download App:
  • android
  • ios