Asianet Suvarna News Asianet Suvarna News

ವಿಜಯ್-ರಶ್ಮಿಕಾ ಮಂದಣ್ಣ 'ವಾರಿಸು' ಕಲೆಕ್ಷನ್ ಬ್ರೇಕ್ ಮಾಡಿದ 'ಪೊನ್ನಿಯಿನ್ ಸೆಲ್ವನ್-2': ಮೊದಲ ದಿನ ಭರ್ಜರಿ ಗಳಿಕೆ

ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ವಾರಿಸು' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿ 'ಪೊನ್ನಿಯಿನ್ ಸೆಲ್ವನ್-2' ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. 

Ponniyin Selvan 2 collection Day 1: Mani Ratnam film earns Rs 38 crore and beats Vijay starrer Varisu sgk
Author
First Published Apr 29, 2023, 11:45 AM IST

ಖ್ಯಾತ ನಿರ್ದೇಶಕ ಮಣಿ ರತ್ನಂ ಸಾರಥ್ಯದಲ್ಲಿ ಮೂಡಿ ಬಂದ ಪೊನ್ನಿಯಿನ್ ಸೆಲ್ವನ್-2 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯಿನ್ ಸೆಲ್ವನ್-2 ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಗಳಿಕೆ ಮಾಡಿದೆ. ಮೊದಲ ದಿನವೇ ಪೊನ್ನಿಯಿನ್ ಸೆಲ್ವನ್ -2 ಭರ್ಜರಿ ತಲೆಕ್ಷನ್ ಮಾಡಿ ಬೀಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯಿನ್ ಸೆಲ್ವನ್ 2 ಮೊದಲ ದಿನ 38 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ. ಅತೀ ಹೆಚ್ಚು ತಮಿಳುನಾಡಿನಲ್ಲಿಯೇ ಕಲೆಕ್ಷನ್ ಮಾಡಿದೆ. ಈ ಮೂಲಕ ದಳಪತಿ  ವಿಜಯ್ ಮತ್ತು ರಶ್ಮಿಕಾ ನಟನೆಯ ವಾರಿಸು ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದೆ. ಜೊತೆಗೆ ಈದ್ ಪ್ರಯುಕ್ತ ಬಂದ ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಕಲೆಕ್ಷನ್ ಅನ್ನು ಸಹ ಹಿಂದಿಕ್ಕಿದೆ. 

ಪೊನ್ನಿಯಿನ್ ಸೆಲ್ವನ್-2 ತನ್ನ ಹೋಮ್ ಟೌನ್ ತಮಿಳುನಾಡಿನಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪಾರ್ಟ್ -1 ಇದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಮೊದಲ ದಿನ ತಮಿಳುನಾಡಿನಲ್ಲಿ 40 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇನ್ನೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮೊದಲ ದಿನ 3-4 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕರ್ನಾಟಕದಲ್ಲಿ4-5 ಕೋಟಿ ರೂಪಾಯಿ ಬಾಚಿಕೊಂಡಿದೆ. ಪೊನ್ನಿಯಿನ್ ಸೆಲ್ವನ್ ಮೊದಲ ಭಾಗ 327 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ವಿದೇಶದಲ್ಲಿ 169 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.   

ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದ ಮಣಿರತ್ನಂ ಸಿನಿಮಾ ವಾರಾಂತ್ಯಕ್ಕೆ ಮತ್ತಷ್ಟು ಹೆಚ್ಚಿನ ಗಳಿಕೆ ನಿರೀಕ್ಷೆ ಮಾಡಲಾಗಿದೆ. ಶನಿವಾರ, ಭಾನುವಾರ ಹಾಗೂ ಮೇ 1 ಕಾರ್ಮಿಕರ ದಿನ ರಜೆ ಇರುವ ಕಾರಣ ಸಿನಿಮಾದ ಗಳಿಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ. 



ಮೀ ಟೂ ಕಾರಣಕ್ಕೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಜೆಕ್ಟ್? ಏನಿದು ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಸುದ್ದಿ

ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ.  ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್​, ಪ್ರಕಾಶ್ ರಾಜ್​ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪುಸ್ತಕ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ.

ನಟಿ ತ್ರಿಷಾ ಸೆಲ್ವಾರ್ ನೋಡೋಕೆ ಸಿಂಪಲ್ ಆದ್ರೆ ಕೊಟ್ಟಿರೋ ಹಣ ಕೇಳಿದ್ರೆ ಹಾರ್ಟ್‌ ಅಟ್ಯಾಕ್ ಆಗುತ್ತೆ!

ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ  ವಾರಿಸು ಸಿನಿಮಾ ಮೊದಲ ದಿನ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮೊದಲ ದಿನ ಕೇವಲ 15 ಕೋಟಿ ರೂಪಾಯಿ ಮಾತ್ರ ಬಾಚಿಕೊಂಡಿತ್ತು. ಈ ಎಲ್ಲಾ ಸಿನಿಮಾಗಳ ಕಲೆಕ್ಷನ್ ಹಿಂದಿಕ್ಕಿ ಪೊನ್ನಿಯಿನ್ ಸೆಲ್ವನ್-2 ಉತ್ತಮ ಕಲೆಕ್ಷನ್ ಮಾಡಿದೆ. ಸದ್ಯ ಸಾಲು ಸಾಲು ರಜೆ ಇರುವ ಕಾರಣ ಕಲೆಕ್ಷನ್ 100 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ.  

Follow Us:
Download App:
  • android
  • ios