ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ, ಸಮಂತಾ(Samantha) ಅವರ ಸೂಪರ್ ಹಿಟ್ ಹೂ ಅಂತೀಯಾ ಮಾವ ಊಹೂ ಅಂತೀಯಾ...ಹಾಡಿನ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಮುಂಬೈ ಪೋಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ

ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ, ಸಮಂತಾ(Samantha) ಅವರ ಸೂಪರ್ ಹಿಟ್ 'ಹೂ ಅಂತೀಯಾ ಮಾವ ಊಹೂ ಅಂತೀಯಾ..' .ಹಾಡಿನ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಮುಂಬೈ ಪೋಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ(Charge Sheet Against Choreographer Ganesh Acharya). ಪುಷ್ಪ ಸಿನಿಮಾದ ಸಮಂತಾ ಹಾಡಿಗೆ ನೃತ್ಯ ನಿರ್ದೇಶನ ಮಾಡಿ ಸಿಕ್ಕಾಪಟ್ಟೆ ಪ್ರಶಂಸೆ ಗಳಿಸಿದ್ದ ಗಣೇಶ್ ಆಚಾರ್ಯ(Ganesh Acharya) ಈಗ ಕಾನೂನು ಸಮಸ್ಯೆಯಲ್ಲಿ ಸಿಲುಕಿದ್ದಾರೆ. 2020ರಲ್ಲಿ ಸಹ ನೃತ್ಯಗಾರ್ತಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮುಂಬೈನ ಉಪನಗರದಲ್ಲಿರುವ ಮ್ಯಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಮುಂಬೈನ ಓಶಿವಾರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಗಣೇಶ್ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354 ಎ, 354 ಸಿ, 354 ಡಿ, 504, 509, 506, 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನೃತ್ಯ ನಿರ್ದೇಶಕ ಗಣೇಶ್ ನಿರಾಕರಿಸಿದ್ದಾರೆ. ಈ ಬಗ್ಗೆ ಗಣೇಶ್ ಆಚಾರ್ಯ ಪರ ವಕೀಲ ರವಿ ಸೂರ್ಯವಂಶಿ ಪ್ರತಿಕ್ರಿಯೆ ನೀಡಿ, 'ನನ್ನ ಬಳಿ ಚಾರ್ಚ್ ಶೀಟ್ ಇಲ್ಲ ಆದ್ದರಿಂದ ನಾನು ಏನನ್ನೂ ಹೇಳಲಾರೆ, ಆದರೆ ಈ ಎಲ್ಲಾ ಸೆಕ್ಷನ್ ಗಳು ಜಾಮೀನು ನೀಡಬಹುದಾಗಿದೆ' ಎಂದು ಹೇಳಿದ್ದಾರೆ.

ಒಂದು Instagram ಪೋಸ್ಟ್‌ನಿಂದ ಇಷ್ಟೊಂದು ಸಂಪಾದನೆ ಮಾಡ್ತಾರಾ ನಟಿ Samantha

ಏನಿದು ಪ್ರಕರಣ?

2020ರಲ್ಲಿ ಗಣೇಶ್ ಆಚಾರ್ಯ ವಿರುದ್ಧ ಸಹ ನೃತ್ಯಗಾರ್ತಿ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರಿಗೆ ನೀಡಿದ ದೂರಿನಲ್ಲಿ ನೃತ್ಯಗಾರ್ತಿ, ಗಣೇಶ್ ಆಚಾರ್ಯ ಕಿರುಕುಳ ನೀಡಿದ್ದಾರೆ, ಅಶ್ಲೀಲ ಕಾಮೆಂಟ್ ಗಳನ್ನು ಮಾಡಿದ್ದಾರೆ, ಅಶ್ಲೀಲ ವಿಡಿಯೋಗಳನ್ನು ತೋರಿಸಿದ್ದಾರೆ. ಅವರ ಲೈಂಗಿಕ ಬೆಳವಣಿಗೆಗಳನ್ನು ನಿರಾಕರಿಸಿರುವುದಾಗಿ ದೂರಿನಲ್ಲಿ ಹೇಳಿದ್ದಾರೆ.

2020ರಲ್ಲಿ ಆಂಗ್ಲ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ನೃತ್ಯಗಾರ್ತಿ, 'ಚಿತ್ರರಂಗದಲ್ಲಿ ಯಶಸ್ವಿಯಾಗಬೇಕಾದರೆ ದೈಹಿಕವಾಗಿ ಸಂಬಂಧ ಹೊಂದಬೇಕು ಎಂದು ಗಣೇಶ್ ಆಚಾರ್ಯ ಹೇಳಿದ್ದರು' ಎಂದು ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿದ್ದಾರೆ. 'ಗಣೇಶ್ ಸಹಚರರು ತನಗೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸಹಾಯಕರು ನನ್ನನ್ನು ಹೊಡೆದರು. ಮಾನಹಾನಿ ಮಾಡಿದರು. ನಾನು ದೂರು ಕೊಡಲು ಹೋದಾಗ ಪೊಲೀಸರು ದೂರು ತೆಗೆದುಕೊಳ್ಳಲು ನಿರಾಕರಿಸಿದರು. ನಂತರ ನಾನ್ ಕಾಗ್ನಿಸಬಲ್ ಪ್ರಕರಣ ದಾಖಲಿಸಿದೆ. ನಂತರ ನಾನು ವಕೀಲರ ಬಳಿ ಹೋದೆ' ಎಂದು ದೂರುದಾರೆ ಬಹಿರಂಗ ಪಡಿಸಿದ್ದರು.

'ಫ್ಯಾಮಿಲಿ ಮ್ಯಾನ್' ನಿರ್ದೇಶಕರ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾಗೆ ಜೋಡಿಯಾದ ಸ್ಟಾರ್ ನಟ

ತಮಿಳುನಾಡು ಮೂಲದ ಖ್ಯಾತ ನೃತ್ಯನಿರ್ದೇಶಕ ಗಣೇಶ್ ಆಚಾರ್ಯ ಬಾಲಿವುಡ್ ನಲ್ಲಿ ಫೇಮಸ್ ಆಗಿದ್ದಾರೆ. ಬಾಲಿವುಡ್ ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಗಣೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ಹಾಡಿಗೂ ನೃತ್ಯ ನಿರ್ದೇಶನ ಮಾಡುವ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದರು.