Asianet Suvarna News Asianet Suvarna News

ಸುಶಾಂತ್  ಶರೀರದ ಪೋಟೋ ಶೇರ್ ಮಾಡಿದ್ದೀರಾ? ದೊಡ್ಡ ಅಪರಾಧ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ/ ಶವದ ಪೋಟೋ ಹಂಚಿಕೊಳ್ಳುವುದು ಸೈಬರ್ ಅಪರಾಧ/ ಯಾವ ಕಾರಣಕ್ಕೂ ಪೋಟೋ ಹಂಚಿಕೊಳ್ಳಬೇಡಿ/ ಪೋಟೋ ಶೇರ್ ಮಾಡಿದರೆ ಕಾನೂನು ಕ್ರಮ

Police ask people not to post pictures of deceased actor Sushant Singh Rajput
Author
Bengaluru, First Published Jun 15, 2020, 3:23 PM IST

ಮುಂಬೈ (ಜೂ. 15)  ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಶವದ ಫೋಟೋ  ಯಾವುದೇ ಕಾರಣಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು. ಹಂಚಿಕೊಂಡಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುತ್ತದೆ ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ತನ್ನದೇ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಸುಶಾಂತ್ ಶವವನ್ನು ಕೆಳಗೆ ಇಳಿಸಿದ್ದ ಸಂದರ್ಭ ತೆಗೆಯಲಾದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ.

ಸುಶಾಂತ್ ಸಿಂಗ್ ರಜಪೂತ ಮಾಜಿ ಗೆಳತಿ ಆಡಿದ ಮಾತುಗಳಿವು

ಪೋಟೋ ಹಂಚಿಕೊಳ್ಳಿವುದು ಸೈಬರ್ ಅಪರಾಧವಾಗುತ್ತದೆ. ಈಗಾಗಲೇ ಪೋಟೋ ವೈರಲ್ ಆಗಿದ್ದು ಶೇರ್ ಮಾಡಿದವರು ಡಿಲೀಟ್ ಮಾಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯೂ ಮುಗಿದಿದ್ದು, ಇದರಲ್ಲೂ ಆತ್ಮಹತ್ಯೆ ಎಂದು ಖಚಿತವಾಗಿದೆ. ಆದರೆ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವರನ್ನು ಕೊಲೆ ಮಾಡಲಾಗಿದೆ ಎಂದು ಸುಶಾಂತ್ ಚಿಕ್ಕಪ್ಪ ಆರ್.ಸಿ. ಸಿಂಗ್ ಗಂಭೀರ ಆರೋಪ ಮಾಡಿದ್ದರು. ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆ ಮಾತಾಗಿದ್ದ ನಟ ಮುಂಬೈನ ಬಾಂದ್ರಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 

 

Follow Us:
Download App:
  • android
  • ios