ಚುನಾವಣೆ ಪ್ರಯುಕ್ತ ಬ್ರೇಕ್  ಹಾಕಲಾಗಿದ್ದ ಪಿಎಂ ಮೋದಿ ಬಯೋಪಿಕ್ ರಿಲೀಸ್ ಗೆ ಡೇಟ್ ಪಕ್ಕಾ ಆಗಿದೆ.  ಚುನಾವಣಾ ಫಲಿತಾಂಶ ಹೊರ ಬಿದ್ದ ಮಾರನೇ ದಿನ ಅಂದರೆ ಮೇ 24 ಕ್ಕೆ ಮೋದಿ ಬಯೋಪಿಕ್ ರಿಲೀಸ್ ಆಗಲಿದೆ. 

ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಅಥವಾ ವೈಯಕ್ತಿಕವಾಗಿರುವ ಯಾವುದೇ ಬಯೋಪಿಕ್ ನ್ನು ಚುನಾವಣೆ ಮುಗಿಯುವವರೆಗೆ ಪ್ರಸಾರ ಮಾಡುವಂತಿಲ್ಲ. ಇದು ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ಚುನಾವಣಾ ಆಯೋಗ ಚಿತ್ರ ಬಿಡುಗಡೆಗೆ ಬ್ರೇಕ್ ಹಾಕಿತ್ತು. 

‘ಈ ದೇಶದ ಪ್ರಜೆಯಾಗಿ ಕಾನೂನನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ತಜ್ಞರ ಜೊತೆ ಚರ್ಚೆ ನಡೆಸಿ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಬಿಡುಗಡೆ ಮಾಡಲು ನಿರ್ಧರಿಸಿದೆವು. ಮೇ 24 ರಂದು ಮೋದಿ ಬಯೋಪಿಕ್ ರಿಲೀಸ್ ಆಗಲಿದೆ. ಯಾರಿಗೂ ಇದರಿಂದ ಸಮಸ್ಯೆ ಆಗುವುದಿಲ್ಲ‘ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.