4 ಮಕ್ಕಳ ಸಾಕಲು ದುಡ್ಡಿಲ್ಲದೆ ತನ್ನದೇ ಕೊಲೆಗೆ ಸ್ಕೆಚ್ ಹಾಕಿದ್ದ ನಟ, ಕರಾಳ ದಿನ ನೆನೆದು ಕಣ್ಣೀರು!
ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲ. ಮಕ್ಕಳ ದೊಡ್ಡವರಾಗುತ್ತಿದ್ದಾರೆ. ಅವರ ಭವಿಷ್ಯ ರೂಪಿಸಬೇಕಾದ ತಂದೆಗೆ ಏನೂ ಮಾಡಲಾಗದ ಪರಿಸ್ಥಿತಿ. ಹೀಗಾಗಿ ನಾನು ನನ್ನದೇ ಕೊಲೆಗೆ ಪ್ಲಾನ್ ಮಾಡಿದೆ. ನನ್ನ ಇನ್ಶೂರೆನ್ಸ್ ಹಣ ನನ್ನ ಕುಟುಂಬಕ್ಕೆ ಸಿಗಲಿದೆ. ಅವರ ಬದುಕು ಹಸನಾಗಲಿದೆ ಎಂದು ನಿರ್ಧರಿಸಿದ್ದೆ. ಖ್ಯಾತ ನಟ ಕೆಲವೇ ವರ್ಷಗಳ ಹಿಂದಿನ ಕರಾಳ ದಿನವನ್ನು ನೆನಪಿಸಿ ಕಣ್ಣೀರಾಗಿದ್ದಾರೆ.
ನಟನೆ, ಉತ್ತಮ ಪಾತ್ರ, ಜನರ ಚಪ್ಪಾಳೆ, ಆದಾಯ ಎಲ್ಲವೂ ಚೆನ್ನಾಗಿತ್ತು. ಆದರೆ ಬರು ಬರುತ್ತಾ ಕೆಲಸ ಇಲ್ಲದಾಯಿತು. ಬದುಕು ದುಸ್ತರವಾಯಿತು. ದಿವಾಳಿಯತ್ತ ಸಾಗಿದ ಬದುಕನ್ನು ಸರಿದಾರಿಗೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿ ಸೋತಿದ್ದೆ. ಯಾವ ಪ್ರಯತ್ನಗಳೂ ಕೈಗೂಡಲಿಲ್ಲ. ಇತ್ತ ಪತ್ನಿ ಹಾಗೂ ನಾಲ್ವರ ಮಕ್ಕಳ ಭವಿಷ್ಯದ ಚಿಂತೆ ತಲೆಗೆ ಹೊತ್ತಿಕೊಂಡಿತ್ತು. ಮಕ್ಕಳ ಭವಿಷ್ಯ ರೂಪಿಸಬೇಕಾದ ತಂದೆ ಏನೂ ಮಾಡಲಾಗದೆ ನರಕಕ್ಕೆ ತಳ್ಳಿದ ಭಾವ. ಬದುಕು ಅಂತ್ಯಗೊಳಿಸಿದರೆ ನನ್ನ ಕುಟುಂಬಕ್ಕೆ ಪರಿಹಾರ ಸಿಗುತ್ತಾ ಅನ್ನೋದನ್ನು ವಿಚಾರಿಸಿದ್ದೆ. ಕೊನೆಗೆ ಅಪಘಾತದ ಮೂಲಕ ನನ್ನ ಬದುಕು ಅಂತ್ಯಗೊಳಿಸಲು ಪ್ಲಾನ್ ಮಾಡಿದೆ. ಇದರಿಂದ ನನ್ನ ಜೀವ ವಿಮೆ, ಜೊತೆಗೆ ಕಾರಿನ ವಿಮೆ ಎರಡರಿಂದಲೂ ನಾಲ್ವರು ಮಕ್ಕಳು ಹಾಗೂ ಪತ್ನಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಯೋಚಿಸಿದೆ. ಕೊನೆಯ ಹಂತದಲ್ಲಿ ನನ್ನ ಯೋಜನೆ ಕೈಗೂಡಲಿಲ್ಲ ಎಂದು ಖ್ಯಾತ ಹಾಲಿವುಡ್ ನಟ ಜಿಯಾನ್ಕಾರ್ಲೊ ಎಸ್ಪೋಸಿಟೊ ತಮ್ಮ ಕರಾಳ ದಿನಗಳನ್ನು ನೆನೆದು ಕಣ್ಣೀರಾಗಿದ್ದಾರೆ.
ಬ್ರೇಕಿಂಗ್ ಬ್ಯಾಡ್ ಕ್ರೈಂ ಸೀರಿಸ್ ನಟ ಜಿಯಾನ್ಕಾರ್ಲೊ ಎಸ್ಪೋಸಿಟೊ ಹಾಲಿವುಡ್‌ನ ಚಿರಪರಿಚಿತ ಮುಖ. ವಿಭಿನ್ನ ಪಾತ್ರ, ವಿಶೇಷ ಹಾಗೂ ಪಾತ್ರಕ್ಕೆ ಜೀವ ತುಂಬುವ ನಟನಾಗಿ ಗುರಿತಿಸಿಕೊಂಡಿರುವ ಜಿಯಾನ್ಕಾರ್ಲೊ ಎಸ್ಪೋಸಿಟೊ ಅತ್ಯಂತ ಜನಪ್ರಿಯ ಸೆಲೆಬ್ರೆಟಿ. ಆದರೆ 2008ರಲ್ಲಿ ಇದೇ ಜಿಯಾನ್ಕಾರ್ಲೊ ಎಸ್ಪೋಸಿಟೊ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.
ಅಮಿತಾಭ್ ಬಚ್ಚನ್ಗೆ ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ: ಏ.24ರಂದು ಪ್ರದಾನ
ಹಲವು ಡ್ರಾಮಾ ಸೀರಿಸ್‌ನಲ್ಲಿ ಜಿಯಾನ್ಕಾರ್ಲೊ ಎಸ್ಪೋಸಿಟೊ ಪ್ರಮುಖ ಪಾತ್ರದಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ 2007-08ರ ಹೊತ್ತಿಗೆ ದಿವಾಳಿಯಾಗಿದ್ದರು. ಪತ್ನಿ ಹಾಗೂ ಮಕ್ಕಳನ್ನು ಸಾಕುವುದು, ಅವರ ಭವಿಷ್ಯ ರೂಪಿಸುವುದು ಸವಾಲಾಗಿತ್ತು. ಕುಟುಂಬದ ಪರಿಸ್ಥಿತಿ ನೆನೆದು ನಾನು ಭಾವುಕನಾಗಿದ್ದೆ. ಇದರ ಜೊತೆಗೆ ನನ್ನ ಮನಸ್ಸು ಕೂಡ ಹಿಡಿತಕ್ಕೆ ಸಿಗದಾಯಿತು. ಮಕ್ಕಳು ಹಾಗೂ ಪತ್ನಿಯ ಉತ್ತಮ ಜೀವನಕ್ಕಾಗಿ ನಾನು ಬದುಕು ಅಂತ್ಯಗೊಳಿಸಲು ನಿರ್ಧರಿಸಿದ್ದೆ. ವಿಷ, ಅಥವಾ ನೀರಿಗೆ ಹಾರಿದರೆ ಜೀವ ವಿಮೆ ಪರಿಹಾರ ಕುಟುಂಬಕ್ಕೆ ಸಿಗುವುದಿಲ್ಲ ಅನ್ನೋದು ತಿಳಿಯಿತು. ಹೀಗಾಗಿ ಕಾರು ಅಪಘಾತದ ಮೂಲಕ ಬದುಕು ಅಂತ್ಯಗೊಳಿಸಲು ನಿರ್ಧರಿಸಿದೆ ಎಂದು ಜಿಯಾನ್ಕಾರ್ಲೊ ಎಸ್ಪೋಸಿಟೊ ಹೇಳಿದ್ದಾರೆ.
ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿ ನನ್ನನ್ನೇ ಹತ್ಯೆ ಮಾಡುವುದು. ಹೀಗಾಗಿ ನನ್ನ ಜೀವ ವಿಮೆ, ಕಾರಿನ ವಿಮೆ ಹಣ ಕುಟುಂಬಕ್ಕೆ ಸಿಗಲಿದೆ. ಇದರಿಂದ ಅವರ ಬದುಕು ಉತ್ತಮವಾಗಲಿದೆ ಅನ್ನೋದು ನನ್ನ ಯೋಚನೆಯಾಗಿತ್ತು. ಇದಕ್ಕಾಗಿ ಮನಸ್ಸು ಗಟ್ಟಿ ಮಾಡಿಕೊಂಡೆ. ಎಲ್ಲಾ ತಯಾರಿ ಮಾಡಿಕೊಂಡು ಸಜ್ಜಾಗಿದ್ದೆ. ಆದರೆ ಕೊನೆಯ ಹಂತದಲ್ಲಿ ಮನಸ್ಸು ಬದಲಾಯಿತು. ಕಾರಣ ಇಷ್ಟು ಪ್ರೀತಿಸುವ ನನ್ನ ಕುಟುಂಬ ನಾನಿಲ್ಲದೆ ಹೇಗೆ? ಅನ್ನೋ ಯೋಚನೆ ಮನಸ್ಸನ್ನು ಬದಲಾಯಿಸಿತು. ಹೇಗಾದರು ಮಾಡಿ ಸವಾಲು ಎದುರಿಸಲು ಪ್ರೇರಣೆ ನೀಡಿತು.
ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ತಲೈವಾ ರಜಿನಿಕಾಂತ್ ಆಸ್ತಿ ಮೌಲ್ಯ ಎಷ್ಟು?
ಇದಾದ ಬಳಿಕ ಸಿಕ್ಕ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿದ್ದೆ. ಆದರೆ ಎಲ್ಲಾ ಪಾತ್ರಗಳು ನನ್ನ ಕೈಹಿಡಿಯಿತು. ಇದು ನನಗೆ ಹೊಸ ಬದುಕು ನೀಡಿತು ಎಂದು ಜಿಯಾನ್ಕಾರ್ಲೊ ಎಸ್ಪೋಸಿಟೊ ಹೇಳಿದ್ದಾರೆ.