ಅಮಿತಾಭ್​ ಬಚ್ಚನ್​ಗೆ ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ: ಏ.24ರಂದು ಪ್ರದಾನ

ನಟ ಅಮಿತಾಭ್​ ಬಚ್ಚನ್​ ಅವರಿಗೆ  ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಲಭಿಸಿದ್ದು, ಇದೇ 24ರಂದು ಪ್ರದಾನ ಮಾಡಲಾಗುವುದು. ಡಿಟೇಲ್ಸ್ ಇಲ್ಲಿದೆ... 
 

Amitabh Bachchan To Attend Lata Deenanath Mangeshkar Award Ceremony On April 24 suc

ಸಿನಿಮಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ ರಾಷ್ಟ್ರ ಮತ್ತು ಸಮಾಜಕ್ಕೆ ನೀಡಿರುವ ಅಮೋಘ ಕೊಡುಗೆ ಗಮನಿಸಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ  ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಲಭಿಸಿದೆ.  ಕಳೆದ ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸುತ್ತಿದೆ.  ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪ್ರಶಸ್ತಿ ಘೋಷಣೆಯಾಗಿತ್ತು. ಪ್ರಶಸ್ತಿ ಪುರಸ್ಕೃತರನ್ನು ಏಪ್ರಿಲ್ 24 ರಂದು ವಿಲೆ ಪಾರ್ಲೆಯಲ್ಲಿರುವ ದೀನಾನಾಥ್ ಮಂಗೇಶ್ಕರ್ ನಾಟ್ಯಗೃಹದಲ್ಲಿ ಸನ್ಮಾನಿಸಲಾಗುವುದು.

ಅಂದಹಾಗೆ ಈ ಪ್ರಶಸ್ತಿಯನ್ನು 2022ರಿಂದ ಆರಂಭಿಸಲಾಗಿದೆ.   ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ ಮತ್ತು ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಸ್ಥಾಪಿಸಿದ ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ತಮ್ಮ ಕ್ಷೇತ್ರಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಹಲವಾರು ವ್ಯಕ್ತಿಗಳಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಮೊದಲು ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಜನಪ್ರಿಯ ಗಾಯಕಿ ಆಶಾ ಭೋಸ್ಲೆ ಅವರಿಗೆ ನೀಡಲಾಗಿದ್ದು, ಇದೀಗ ನಟ ಅಮಿತಾಭ್​ ಬಚ್ಚನ್​ ಪ್ರಶಸ್ತಿಗೆ  ಭಾಜನರಾಗಿದ್ದಾರೆ. 

ಅಮೃತಧಾರೆ ಗೌತಮ್‌ಗೆ ಹುಟ್ಟುಹಬ್ಬವಿಂದು: ನಟನ ರಿಯಲ್‌ ಜೀವನದ ಇಂಟರೆಸ್ಟಿಂಗ್‌ ವಿಷ್ಯದ ಜೊತೆ ವಿಡಿಯೋ ರಿಲೀಸ್‌
 
ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಮಾತ್ರವಲ್ಲದೇ, ಇದೇ ಸಂದರ್ಭದಲ್ಲಿ  ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನದ ವತಿಯಿಂದ ಅತ್ಯುತ್ತಮ ಸಾಧನೆ ಮಾಡಿದ ಹಲವಾರು ದಿಗ್ಗಜರಿಗೆ ಈ ಪ್ರಶಸ್ತಿ ಸಿಗುತ್ತಿದೆ.  ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಹಿರಿಯ ಮರಾಠಿ ಸಿನಿಮಾ ಕಲಾವಿದ ಅಶೋಕ್ ಸರಾಫ್, ಮರಾಠಿ ನಟಿ ಪದ್ಮಿನಿ ಕೊಲ್ಹಾಪುರೆ, ಗಾಯಕ ರೂಪ್‌ಕುಮಾರ್ ರಾಥೋಡ್, ಮರಾಠಿ ರಂಗಭೂಮಿಯ ದಿಗ್ಗಜ ಅತುಲ್ ಪರ್ಚುರೆ ಹಾಗೂ ಖ್ಯಾತ ಲೇಖಕಿ ಮಂಜಿರಿ ಫಡ್ಕೆ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ನಟ, ನಿರ್ದೇಶಕ, ನಿರ್ಮಾಪಕ ರಣದೀಪ್ ಹೂಡಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಮೂರು ವರ್ಷಗಳಿಂದ ನೀಡುತ್ತಾ ಬಂದಿದ್ದರೆ, ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನದ ವತಿಯಿಂದ ಹಲವು ಪ್ರಶಸ್ತಿಗಳನ್ನು ಕಳೆದ 34 ವರ್ಷಗಳಿಂದ ನೀಡುತ್ತಾ ಬರಲಾಗಿದೆ. ಇದಾಗಲೇ  ವಿವಿಧ ಕ್ಷೇತ್ರಗಳ 212 ಗಣ್ಯರನ್ನು ಗೌರವಿಸಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. 

ದೀಪಿಕಾ ಪಡುಕೋಣೆ ಅಮ್ಮ ಆಗೋದು ನಿಜ, ಆದ್ರೆ ಗರ್ಭಿಣಿ ಅನ್ನೋದೇ ಸುಳ್ಳಾ? ಏನಿದು ಹೊಸ ವಿಷ್ಯ?
 

Latest Videos
Follow Us:
Download App:
  • android
  • ios