ಕೆಜಿಎಫ್ ಭಾಗ ಎರಡಕ್ಕೆ ಎದುರಾಗಿದ್ದ ವಿಘ್ನ ದೂರ/ ಸಂಜಯ್  ದತ್ ಅಭಿನಯಿಸುವುದನ್ನು ತಡೆಹಿಡಿಯಲು ಸಾಧ್ಯವಿಲ್ಲ/ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ/   ಸಂಜಯ್ ದತ್ ಅಭಿನಯಿಸಬಾರದು ಎಂದು ಕೋರಿದ್ದ ಅರ್ಜಿ

ಬೆಂಗಳೂರು(ಆ. 18) ಬಾಲಿವುಡ್‌ ನಟ ಸಂಜಯ್ ದತ್ 'ಕೆಜಿಎಫ್‌- 2' ಚಿತ್ರದಲ್ಲಿ ಅಭಿನಯಿಸಬಾರದು ಎಂದು ತಡೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಸಿನಿಮಾದಲ್ಲಿ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ನಂಟು ಇರುವ ಸಂಜಯ್ ದತ್ ಅಭಿನಯಿಸಬಾರದು. ಸಂಜಯ್‌ ದತ್‌ ಅವರು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, ಅಂಥವರು ಕನ್ನಡದ ಸಿನಿಮಾದಲ್ಲಿ ನಟಿಸಿದರೆ ಕರ್ನಾಟಕದ ಜನರ ಘನತೆಗೆ ಧಕ್ಕೆ ಆಗುತ್ತದೆ ಎಂದು ಜಿ. ಶಿವಶಂಕರ್‌ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು.

ಕೆಜಿಎಫ್ ಗೆ ಕಾಯುತ್ತಿದ್ದವರಿಗೆ ಅತಿದೊಡ್ಡ ಆಘಾತ

ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದ ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ಸಿನಿಮಾದಲ್ಲಿ ಸಂಜಯ್ ದತ್ ಅಭಿನಯಿಸುವುದು ಕಾನೂನು ಬಾಹಿರ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಹೇಳಿ ಅರ್ಜಿ ವಜಾ ಮಾಡಿತ್ತು.

ಕೆಜಿಎಫ್‌ ಚಾಪ್ಟರ್‌ 2' ಸಿನಿಮಾದಲ್ಲಿ ಸಂಜಯ್ ದತ್ ಖಡಕ್‌ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹೊಸ ಇತಿಹಾಸ ನಿರ್ಮಾಣ ಮಾಡಲು ಕಾರಣವಾದ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ. ಕೆಜಿಎಫ್ ಮೊದಲನೆ ಭಾಗ ಭರ್ಜರಿ ಯಶಸ್ಸು ದಾಖಲಿಸಿತ್ತು.

1993 ಮುಂಬೈ ಬಾಂಬ್ ಬ್ಲಾಸ್ಟ್ ಸಂಬಂಧ ಸಂಜಯ್ ದತ್ ಶಿಕ್ಷೆಗೆ ಗುರಿಯಾಗಿದ್ದರು. ನ್ಯಾಯಾಲಯ ದತ್ ಗೆ ಆರು ವರ್ಷ ಸಜೆ ವಿಧಿಸಿತ್ತು. 2013 ರಿಂದ 2016ರ ವರೆಗೆ ದತ್ ಜೈಲಿನಲ್ಲಿ ಇದ್ದರು. ದತ್ ಆರೋಗ್ಯದಲ್ಲಿಯೂ ಇತ್ತೀಚೆಗೆ ಏರುಪೇರಾಗಿತ್ತು.