ಕೇರಳ ಸ್ಟೋರಿ ನೋಡಲು ಹರಿದು ಬಂದ ಜನ: ಚಿತ್ರ ವೀಕ್ಷಣೆ ಬಳಿಕ ಮತಾಂತರಕ್ಕೆ ಆಕ್ರೋಶ
ದಿ ಕೇರಳ ಸ್ಟೋರಿ ಚಲನಚಿತ್ರ ಹಿಂದೂ ಯುವತಿಯರು ಮುಸ್ಲಿಂ ಸಮುದಾಯಕ್ಕೆ ಮತಾಂತರವಾಗುವ ಕಥೆಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡುವ ವ್ಯವಸ್ಥೆ ಬಗ್ಗೆ ಯುವತಿಯರು ಜಾಗೃತರಾಗಬೇಕು ಎಂದು ಹಿರಿಯ ಸಾಹಿತಿ ಎ.ಎಸ್.ಪಾವಟೆ ತಿಳಿಸಿದರು.
ಬಾಗಲಕೋಟೆ (ಮೇ.25) : ದಿ ಕೇರಳ ಸ್ಟೋರಿ ಚಲನಚಿತ್ರ ಹಿಂದೂ ಯುವತಿಯರು ಮುಸ್ಲಿಂ ಸಮುದಾಯಕ್ಕೆ ಮತಾಂತರವಾಗುವ ಕಥೆಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡುವ ವ್ಯವಸ್ಥೆ ಬಗ್ಗೆ ಯುವತಿಯರು ಜಾಗೃತರಾಗಬೇಕು ಎಂದು ಹಿರಿಯ ಸಾಹಿತಿ ಎ.ಎಸ್.ಪಾವಟೆ ತಿಳಿಸಿದರು.
ಅವರು ದಿ ಕೇರಳ ಸ್ಟೋರಿ(The Keral story) ಚಲನಚಿತ್ರ ವೀಕ್ಷಿಸಿ ಮಾತನಾಡಿ, ಬಾಗಲಕೋಟೆಯ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಉಚಿತವಾಗಿ ವೀಕ್ಷಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅವರಿಗೆ ಧನ್ಯವಾದಗಳು. ಇಂತಹ ಅಪರೂಪದ ಜನರ ಅರಿವಿನ ಕಣ್ಣು ತೆರೆಸುವ ಚಿತ್ರಗಳನ್ನು ನೋಡಬೇಕು. ಯುವತಿಯರು ಮೊದಲಾಗಿ ಇಂಥ ಚಿತ್ರನೋಡಿ ಪ್ರಜ್ಞಾವಂತರಾಗಬೇಕು ಎಂದು ತಿಳಿಸಿದರು.
ಕೇರಳ ಸ್ಟೋರಿ ಚಿತ್ರಕ್ಕಾಗಿ ತರಗತಿ ಸಮಯ ಬದಲಾವಣೆ, ಆದೇಶ ವೈರಲ್ ಬೆನ್ನಲ್ಲೇ ಕ್ಷಮೆ ಕೋರಿದ ಪ್ರಿನ್ಸಿಪಾಲ್!
ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ವಿಜಯಲಕ್ಷ್ಮೇ ಪಟ್ಟಣಶೆಟ್ಟಿ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಉಚಿತವಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಧನ್ಯವಾದ ತಿಳಿಸಿ, ವೀರಣ್ಣ ಚರಂತಿಮಠವರು ಯಾವಾಗಲೂ ಮಹಿಳೆಯರ ಭದ್ರತೆ ಹಾಗೂ ಜಾಗೃತಿ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಾರೆ ಎಂದರು.
ಬಾಗಲಕೋಟೆ ನಗರ ಭಾಗಗಳಿಂದ ಆಗಮಿಸಿದ ಸಾರ್ವಜನಿಕರು ಕಾಲೇಜು ವಿದ್ಯಾರ್ಥಿಗಳು ಇಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಚಲನಚಿತ್ರ ವೀಕ್ಷಣೆ ಮಾಡಿದರು. ನವನಗರದ ಚಂದನ ಚಿತ್ರಮಂದಿರ ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. ಚಿತ್ರ ವೀಕ್ಷಿಸಿದ ಸಾರ್ವಜನಿಕರು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಉಚಿತವಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಅವರು ಧನ್ಯವಾದಗಳು ಅರ್ಪಿಸಿದ್ದಾರೆ.
ಇಳಕಲ್ ಕಾಲೇಜು ಪ್ರಾಂಶುಪಾಲರ ವಿವಾದ, ತರಗತಿ ರದ್ದುಗೊಳಿಸಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ