2015ರಲ್ಲಿ ರಾತ್ರೋರಾತ್ರಿ 2 ಮಕ್ಕಳ ತಾಯಿಯನ್ನು ಗಂಡನೇ ಕಂಠಪೂರ್ತಿ ಕುಡಿದು ಕ್ರೂರವಾಗಿ ಹೊಡೆದು, ಬಡಿದು ಮನೆಯಿಂದ ಹೊರ ಹಾಕಿದ. ಮದುರೈನ ಮೇಲೂರ್‌ನ ಮನೆಯೊಂದರಲ್ಲಿ ನಡೆದ ಘಟನೆ ಇದು. ಆಕೆ ಕಗ್ಗತ್ತಲಿನಲ್ಲಿ ಮಗುವನ್ನೆತ್ತಿ ಕಣ್ಣೀರು ಹಾಕುತ್ತಾ 13 ಕಿಮೀ ದೂರದ ತವರು ಮನೆಗೆ ನಡೆದುಕೊಂಡೇ ಬಂದಳು.

ಈಕೆಯ ಜೀವನದಿಂದ ಪ್ರೇರೇಪಿತವಾದ ಸಿನಿಮಾ ಅಂತಾರಾಷ್ಟ್ರೀಯ ಟೈಗರ್ ಅವಾರ್ಡ್ ಪಡೆದ ಮೊದಲ ತಮಿಳು ಸಿನಿಮಾ ಮತ್ತು ಭಾರತದ ಎರಡನೇ ಸಿನಿಮಾ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಸಿಂಗಂ ಸೂರ್ಯಗೆ ಕೊರೋನಾ ಪಾಸಿಟಿವ್ ದೃಢ

ಕೂಳಂಗಂಞಳ್(ಪೆಬಲ್ಸ್) ಸಿನಿಮಾ ನಿರ್ದೇಶಕ ಈ ಯುವತಿಯ ನಿಜ ಜೀವನದ ಹಿರಿಯ ಸಹೋದರ ಪಿಎಸ್ ವಿನೋದ್ ರಾಜ್. ಸನಲ್ ಕುಮಾರ್ ಸಸಿಧರನ್ ಅವರ ದುರ್ಗಾ ಸಿನಿಮಾ ನಂತರ ಟೈಗರ್ ಅವಾರ್ಡ್ ಪಡೆದ ಎರಡನೇ ಸಿನಿಮಾ ಇದು.

ಇದು ವಿನೋದ್ ರಾಜ್ ಅವರ ಮೊದಲ ನಿರ್ದೇಶನ ಸಿನಿಮಾ, ಇದಕ್ಕೆ ವಿಘ್ನೇಶ್ ಕುಮಿಲಿ ಹಾಗೂ ಜಿ. ಪ್ರತಿಭ್ ಛಾಯಾಗ್ರಹಣ ಮಾಡಿದ್ದು, ಗಣೇಶ್ ಶಿವ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಈ ಪ್ರಶಸ್ತಿ 40,000 ಯುರೋಸ್ ಅಂದರೆ 35,19,240 ರೂಪಾಯಿ ಒಳಗೊಂಡಿದೆ. ವಿಶೇಷ ಎಂದರೆ ಈ ಸಿನಿಮಾ ನಿರ್ಮಿಸಿದ್ದು ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್.