ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ ಪವನ್ ಕಲ್ಯಾಣ್‌ಗೆ 'ವಕೀಲ್ ಸಾಬ್' ಸರಿಯಾದ ರೀತಿಯಲ್ಲಿ ಕಮ್‌ಬ್ಯಾಕ್‌ ನೀಡುತ್ತಾ? 

ಬಾಲಿವುಡ್‌ ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ ಪಿಂಕ್ ಚಿತ್ರವನ್ನು ಟಾಲಿವುಡ್‌ನಲ್ಲಿ 'ವಕೀಲ್ ಸಾಬ್' ಎಂಬ ಶೀರ್ಷಿkzಯಲ್ಲಿ ರಿಮೇಕ್ ಮಾಡಲಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಟೀಸರ್ ಬಿಡುಗಡೆ ಮಾಡಲಾಗಿದ್ದು, ಪವನ್ ರಗಡ್‌ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಮಲಯಾಳಂ ರಿಮೇಕ್ ಸಿನಿಮಾದಲ್ಲಿ ‌ಕಿಚ್ಚ ಸುದೀಪ್..! 

ಪಿಂಕ್‌ ಚಿತ್ರವನ್ನು 'ನೇರ್ಕೊಂಡ ಪಾರ್ವೈ' ಎಂದು ತಮಿಳಿನಲ್ಲಿಯೂ ರಿಮೇಕ್‌ ಮಾಡಲಾಗಿತ್ತು. ತಲಾ ಅಜಿತ್‌ ಬಚ್ಚನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಭ್ ಹಾಗೂ ಅಜಿತ್ ಪಾತ್ರ ಒಂದೇ ರೀತಿಯಲ್ಲಿದೆ. ಆದರೆ ನಿರ್ದೇಶಕ ಶ್ರೀರಾಮ್‌ ವೇಣು ಪವನ್ ಪಾತ್ರಕ್ಕೆ ಕೊಂಚ ಟ್ವಿಸ್ಟ್ ಕೊಟ್ಟಿದ್ದಾರೆ. ಆ್ಯಕ್ಷನ್‌ ಹಾಗೂ ಮಾಸ್‌‌ಲುಕ್‌ನಲ್ಲಿ ಪವನ್‌ ಪಾತ್ರಕ್ಕೆ ಎಂಟ್ರಿ ನೀಡಿದ್ದಾರೆ.

ಇಡೀ ಟೀಸರ್‌ನಲ್ಲಿ ಪವನ್‌ ಕಲ್ಯಾಣ್‌ ಬಿಟ್ಟರೆ, ಇನ್ಯಾವ ಪಾತ್ರಗಳನ್ನೂ ಪರಿಚಯಿಸಿಲ್ಲ, ವಿಡಿಯೋ ಪೂರ್ತಿ ಪವನ್‌ ಮಾಸ್‌ ಲುಕ್‌ ನೋಡಿ ಅಭಿಮಾನಿಗಳು ಕಣ್ಣು ತುಂಬಿಕೊಂಡಿದ್ದಾರೆ. ದಿಲ್ ರಾಜು ಬಂಡವಾಳ ಹಾಕಿರುವ ಈ ಚಿತ್ರದಲ್ಲಿ ಪವನ್‌ಗೆ ಪ್ರೇಯಸಿ ಇದ್ದಾರೆ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪವನ್‌ ಮೂವರು ಯುವತಿಯರನ್ನು ಕ್ರೈಂ ಪ್ರಕರಣದಿಂದ ಪಾರು ಮಾಡುತ್ತಾರೆ. ನಿವೇತಾ ಥಾಮಸ್, ಅಂಜಲಿ ಹಾಗೂ ಅನನ್ಯಾ ನಾಗಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಎನ್ನಲಾಗುತ್ತಿದೆ.