ರಣವೀರ್ ಸಿಂಗ್ ಪ್ಯಾಂಟ್ ಹಾಕದೇ ಬಂದು ಪಕ್ಕದಲ್ಲೇ ಕುಳಿತುಕೊಳ್ತಾರೆ.ನಮಗೆ ಮುಜುಗರವಾಗಿ ಕನಿಷ್ಠ ಪ್ಯಾಂಟ್ ಹಾಕೋ ಎಂದು ನಾವೇ ಸೂಚಿಸಬೇಕು ಎಂದು ನಟಿ ಪರಿಣಿತಿ ಚೋಪ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ
ಮುಂಬೈ(ಮೇ.23)ಬಾಲಿವುಡ್ ನಟ ರಣವೀರ್ ಸಿಂಗ್ ಫ್ಯಾಶನ್ ಕುರಿತು ಸಾಕಷ್ಟು ಬಾರಿ ಚರ್ಚೆಯಾಗಿದೆ. ರಣವೀರ್ ಧರಿಸುವ ಡ್ರೆಸ್, ಶೂ , ಸೇರಿದಂತೆ ಪ್ರತಿ ಫ್ಯಾಶನ್ ಕುರಿತು ಮೀಮ್ಸ್ ಹರಿದಾಡಿದೆ. ಆದರೆ ರಣವೀರ್ ಸಿಂಗ್ ಪ್ಯಾಂಟ್ ಹಾಕದೇ ಬರುತ್ತಾರೆ ಅನ್ನೋ ಸ್ಫೋಟಕ ಮಾಹಿತಿಯನ್ನು ನಟಿ ಪರಿಣಿತಿ ಚೋಪ್ರಾ ಬಿಚ್ಚಿಟ್ಟಿದ್ದಾರೆ. ರಣವೀರ್ ವ್ಯಾನ್‌ನಲ್ಲಿ ಡ್ರೆಸ್ ಇಲ್ಲದೆ ಇರುತ್ತಾರೆ. ನಮಗೆ ಮುಜುಗರವಾಗಿ ಕನಿಷ್ಠ ಪ್ಯಾಂಟ್ ಆದರೂ ಹಾಕು ಎಂದು ಸೂಚಿಸಬೇಕು ಎಂದು ಪರಿಣಿತಿ ಹೇಳಿದ್ದಾರೆ. ರಣವೀರ್ ಸಿಂಗ್‌ಗೆ ನಾಚಿಕೆ ಅನ್ನೋದೆ ಇಲ್ಲ ಎಂದಿದ್ದಾರೆ.
ಖಾಸಗಿ ಮಾಧ್ಯಮದ ಜೊತೆಗಿನ ಸಂದರ್ಶನದಲ್ಲಿ ಪರಿಣಿತಿ ಚೋಪ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಣವೀರ್ ಸಿಂಗ್ ಕುರಿತು ಮಾಧ್ಯಮದಲ್ಲಿ ಚಿತ್ರ ವಿಚಿತ್ರ ಡ್ರೆಸ್ ಹಾಕಿ ಬರುತ್ತಾರೆ ಎಂದು ಸುದ್ದಿಯಾಗುತ್ತಿದ್ದರೆ, ನಾವು ಲೈವ್ ನೋಡಿದ್ದೇವೆ. ಡ್ರೆಸ್ ಹಾಕದೇ ಬರುತ್ತಾರೆ. ರಣವೀರ್ ಸಿಂಗ್‌ಗೆ ಬೇರೆ ಯಾರೂ ಸಾಟಿ ಇಲ್ಲ ಎಂದಿದ್ದಾರೆ.
ಹಾಸಿಗೆಯಲ್ಲಿ ಸುಖ ಕೊಡೋದು ಹೇಗೆ? ಲೈಂಗಿಕ ರಾಯಭಾರಿಯಾಗಿ ಟಿಪ್ಸ್ ಹೇಳಿದ ರಣವೀರ್ ಸಿಂಗ್
ರಣವೀರ್ ಸಿಂಗ್ ಹೇಗೆ ಅಂದರೆ ಆತ ಪ್ಯಾಂಟ್ ಹಾಕದೇ ಬರುತ್ತಾನೆ. ನಿಮ್ಮ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ನಿಮಗೆ ಮುಜುಗರವಾಗಿ ಕನಿಷ್ಠ ಪ್ಯಾಂಟ್ ಹಾಕಿಕೊಳ್ಳಿ ಎಂದು ಹೇಳುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ರಣವೀರ್ ಏನೂ ಆಗಿಲ್ಲ ಎಂಬಂತೆ ಇರುತ್ತಾರೆ. ಈ ರೀತಿ ಸೆಟ್‌ನಲ್ಲಿ ಕನಿಷ್ಠ 2 ದಿನಕ್ಕೊಮ್ಮೆ ಆಗುತ್ತಿತ್ತು ಎಂದಿದ್ದಾರೆ.
ಶೂಟಿಂಗ್ ವೇಳೆ ನಾನು ಇತರ ಯಾವುದೇ ನಟರ ಮೇಕ್ ಅಪ್ ವ್ಯಾನ್‌ಗೆ ಎಂಟ್ರಿ ಕೊಡುತ್ತೇನೆ. ಅಚಾನಕ್ಕಾಗಿ ಯಾರ ವ್ಯಾನ್‌ಗೂ ಪ್ರವೇಶ ಮಾಡಿದರೂ ಸಮಸ್ಯೆಯಿಲ್ಲ. ಆದರೆ ಇದುವರೆಗೂ ರಣವೀರ್ ಸಿಂಗ್ ವ್ಯಾನ್ ಮಾತ್ರ ಹತ್ತಿಲ್ಲ. ರಣವೀರ್ ಸಿಂಗ್ ಮೇಕ್‌ಅಪ್ ವ್ಯಾನ್‌ನಲ್ಲಿ ಮಲಗಿರುತ್ತಾರೆ ಅಥವಾ ವಾಶ್‌ರೂಂನಲ್ಲಿರುತ್ತಾರೆ. ಆದರೆ ಮೇಕ್ ರೂಂ ಒಳಗಡೆ ರಣವೀರ್ ಡ್ರೆಸ್‌ನಲ್ಲಿದ್ದಾರೋ ಅಥವಾ ಹಾಗೇ ಇದ್ದಾರೋ ಗೊತ್ತಿರಲ್ಲ. ಹೀಗಾಗಿ ರಣವೀರ್ ರೂಂಗೆ ತೆರಳುವಾಗ ಕನಿಷ್ಠ ಆತನ ಬಳಿ ಕೇಳಿ ಹೋಗಬೇಕು ಎಂದು ಪರಿಣಿತಿ ಹೇಳಿದ್ದಾರೆ.
ರಣವೀರ್- ದೀಪಿಕಾ ಬೇರೆಯಾಗಿದ್ದು ನಿಜನಾ? ಉಂಗುರ ತೋರಿಸಿ ನಟ ಡಿವೋರ್ಸ್ ಕುರಿತು ಹೇಳಿದ್ದೇನು?
ಬ್ಯಾಂಡ್ ಬಜಾ ಭಾರತ್ ಚಿತ್ರದ ಶೂಟಿಂಗ್ ವೇಳೆ ನಾನು ಅಚ್ಚರಿಗೊಂಡಿದ್ದೆ. ನಾನು ರಣವೀರ್ ಸಿಂಗ್ ಕೊಠಡಿಗೆ ತೆರಳಿದ್ದೆ. ಈ ವೇಳೆ ರಣವೀರ್ ಬಟ್ಟೆ ಇಲ್ಲದೆ ಕುಳಿತಿದ್ದರು. ಇನ್ನು ರೋಮ್ಯಾಂಟಿಕ್ ದೃಶ್ಯಕ್ಕಾಗಿ ಮೇಕ್ ಅಪ್ ಮಾಡಿಕೊಳ್ಳುತ್ತಿದ್ದೆ. ನಾನು ತಿರುಗಿ ನೋಡಿದರೆ ರಣವೀರ್ ಪ್ಯಾಂಟ್ ಇಲ್ಲದೆ ನಿಂತಿದ್ದಾರೆ. ರಣವೀರ್ ಒಬ್ಬ ಶೇಮ್‌ಲೆಸ್ ಮ್ಯಾನ್ ಎಂದು ಹಳೆ ಘಟನೆ ನೆನಪಿಸಿಕೊಂಡು ನಕ್ಕಿದ್ದಾರೆ.
